HSRP Number Plate: ಜೂನ್‌ 12 ರವರೆಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಅವಧಿ ವಿಸ್ತರಣೆ

Share the Article

HSRP Number Plate: ಎಪ್ರಿಲ್‌ 2019 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಬೇಕೆಂದು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇಂದು ಮಧ್ಯರಾತ್ರಿಯವರೆಗೆ ಗಡುವು ನೀಡಲಾಗಿತ್ತು. ಜೂನ್‌.12 ರವರೆಗೆ ಹೆಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಇದನ್ನೂ ಓದಿ: Belthangady: ಮಾನಸಿಕ ಅಸ್ವಸ್ಥೆಯ ಮೇಲೆ ನಿರಂತರ ಅತ್ಯಾಚಾರ; ಯುವತಿ ಗರ್ಭಿಣಿ

ಮೇ.31 ರ ವರೆಗೆ ನೀಡಿದ ಗಡುವನ್ನು ಜೂನ್‌ 12 ರವರೆಗೆ ವಿಸ್ತರಿಸಲಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಜೂ.12 ರ ಬಳಿಕ ಯಾವುದೇ ಕ್ರಮ ಅಥವಾ ಅವಧಿ ವಿಸ್ತರಣೆ ಹೈಕೋರ್ಟ್‌ ಆದೇಶ ಅಥವಾ ಸರಕಾರದ ನಿರ್ಧಾರಗಳನ್ನು ಅವಲಂಬಿಸಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: LPG Price Cut: ಜೂನ್‌ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ; ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ರೂ.72 ಇಳಿಕೆ

ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿದ್ದು, ಒಂದೂವರೆ ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುವುದು ಬಾಕಿ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.

Leave A Reply