Mangaluru: ಮಂಗಳೂರಿನ ರಸ್ತೆಯಲ್ಲೇ ನಮಾಜ್! ಪರಿಣಾಮ ಇನ್ಸ್‌ಪೆಕ್ಟರ್ ಗೆ ಕಡ್ಡಾಯ ರಜೆ!

Mangaluru: ಅಪರಿಚಿತ ವ್ಯಕ್ತಿಗಳು ಮಂಗಳೂರು ನಗರದ ಕಂಕನಾಡಿಯ ಮಸೀದಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು (Mangaluru) ನಗರ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಆದರೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಸೋಮಶೇಖರ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

https://twitter.com/hashtag/kankanadi?ref_src=twsrc%5Etfw%7Ctwcamp%5Etweetembed%7Ctwterm%5E1794976443581239599%7Ctwgr%5E8619fb2e16da1d89830d661a9702e0a86ba2cf7f%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2024%2FMay%2F28%2Funidentified-men-booked-for-offering-namaz-on-public-road-in-mangaluru&src=hashtag_click

ಆದರೆ ಇದೀಗ ಈ ಪರಿಣಾಮ, ಹಲವಾರು ಕಡೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಇನ್ಸ್‌ಪೆಕ್ಟರ್ ಅನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರುವ ಇತರ ಧಾರ್ಮಿಕ ಆಚರಣೆಗಳಿಗೆ ಪೊಲೀಸರು ಇದೇ ನಿಯಮವನ್ನು ಏಕೆ ಅನ್ವಯಿಸುವುದಿಲ್ಲ ಎಂದು ಹಲವರು ಪ್ರಶ್ನಿಸಿದ್ದರು.

ಇದನ್ನೂ ಓದಿ: Dark Underarms: ಕಪ್ಪಾದ ಕಂಕುಳ ಬೆಳ್ಳಗಾಗಿಸಲು ಸುಲಭ ಪರಿಹಾರ ಇಲ್ಲಿದೆ!

ಈ ಕುರಿತು ಹೇಳಿಕೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಘಟನೆ ಕುರಿತು ಇನ್ಸ್‌ಪೆಕ್ಟರ್ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: Google map: ಗೂಗಲ್ ಮ್ಯಾಪ್’ಗೆ ನಿಮ್ಮ ಮನೆ ಲೊಕೇಶನ್ ಸೇರಿಸಬೇಕೆ ?! ಹಾಗಿದ್ರೆ ಜಸ್ಟ್ ಹೀಗೆ ಮಾಡಿ

ಅಲ್ಲದೇ ರಸ್ತೆಗಳಲ್ಲಿ ಮತ್ತೆ ನಮಾಜ್ ಮಾಡಿದ ಪ್ರಕರಣಗಳು ವರದಿಯಾದರೆ ಬಜರಂಗದಳ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್ ವಿರುದ್ಧ ಐಪಿಸಿ ಸೆಕ್ಷನ್ 154 ಎ ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದಕ್ಕೆ ಪಂಪ್‌ವೆಲ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

Leave A Reply

Your email address will not be published.