Mangalore: ಕುಳಾಯಿ ಬಾರ್‌ ಬಳಿ ಕೋಡಿಕೆರೆ ಗ್ಯಾಂಗ್‌ನಿಂದ ರೌಡಿಶೀಟರ್‌ ಮೇಲೆ ತಲವಾರು ದಾಳಿ, ಕೇಸು ದಾಖಲು

Share the Article

Mangalore: ಸುರತ್ಕಲ್‌ ಬಳಿಯ ಕುಳಾಯಿ ಬಾರ್‌ ಮುಂಭಾಗದಲ್ಲಿ ನಿನ್ನೆ ರಾತ್ರಿ ರೌಡಿಶೀಟರ್‌ ಓರ್ವನ ಕೊಲೆ ಯತ್ನಿಸಿರುವ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿರುವ ಘಟನೆಯೊಂದು ನಡೆದಿದೆ. ಮನೋಜ್‌ ಕೋಡಿಕೆರೆ ಗ್ಯಾಂಗ್‌ನವರು ಈ ಕೃತ್ಯ ನಡೆಸಿದ್ದು, ಎಂಬುವುದಾಗಿ ಹಲ್ಲೆಗೊಳಗಾದ ಭರತ್‌ಶೆಟ್ಟಿ ಸುರತ್ಕಲ್‌ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Bengaluru: ಶಿಕ್ಷಣ ಕೇತ್ರದಲ್ಲಿ‌ ಕ್ರಾಂತಿ ತಂದಿದ್ದು ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ: ಅಶ್ವತ್ ನಾರಾಯಣ್

ಕೋಡಿಕೆರೆ ನಿವಾಸಿಯಾದ ಭರತ್‌ ಶೆಟ್ಟಿ (32) ಹಲ್ಲೆಗೊಳಗಾದ ವ್ಯಕ್ತಿ. ಸುರತ್ಕಲ್‌ ಮತ್ತು ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಆರೋಪಿಯಾಗಿದ್ದ ಈತ ಕೋಡಿಕೆರೆ ಗ್ಯಾಂಗಿನಲ್ಲೇ ಇದ್ದ. ಈತನಿಗೆ ಗ್ಯಾಂಗ್‌ ಲೀಡರ್‌ ಮನೋಜ್‌ ಕೋಡಿಕೆರೆ ಜೊತೆ ವೈಮನಸ್ಸು ಉಂಟಾಗಿದ್ದು, ನಿನ್ನೆ ರಾತ್ರಿ ಹಲ್ಲೆ ನಡೆದಿದೆ.

ಇದನ್ನೂ ಓದಿ: Satta Bazar: ಸಟ್ಟಾ ಬಜಾರ್ ಅಂದ್ರೆ ಏನು? ಇದರ ಭವಿಷ್ಯವು ಬಿಜೆಪಿಯ ನಿದ್ದೆಗೆಡಿಸಿದ್ದೇಕೆ ?!

ಕುಳಾಯಿ ಬಾರ್‌ ಹೊರಗಡೆ ನಿಂತಾಗ, ಕಾರಿನಲ್ಲಿ ಬಂದಿದ್ದ ಕೋಡಿಕೆರೆ ಗ್ಯಾಂಗಿನವರಾದ ಚೇತು, ಗುಜ್ಜೆ ಶೈಲು, ರಾಜು ಫರಂಗಿಪೇಟೆ, ಕಿಶನ್‌ ಕೋಡಿಕೆರೆ ಇವರುಗಳು ಭರತ್‌ ಶೆಟ್ಟಿಗೆ ತಲವಾರಿನಲ್ಲಿ ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಭರತ್‌ ಶೆಟ್ಟಿ ಬೆರಳು ಕಟ್‌ ಆಗಿದ್ದು, ಕೂಡಲೇ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದು ಜೀವ ಉಳಿಸಿದ್ದಾನೆ. ಈ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Leave A Reply