Home News Prajwal Revanna: ಪ್ರಜ್ವಲ್ ರೇವಣ್ಣ ಇರುವು ಪತ್ತೆ, ಜರ್ಮನಿಯಿಂದ ಲಂಡನ್‌‌ಗೆ ರೈಲು ಪ್ರಯಾಣ ?!

Prajwal Revanna: ಪ್ರಜ್ವಲ್ ರೇವಣ್ಣ ಇರುವು ಪತ್ತೆ, ಜರ್ಮನಿಯಿಂದ ಲಂಡನ್‌‌ಗೆ ರೈಲು ಪ್ರಯಾಣ ?!

Prajwal Revanna Case

Hindu neighbor gifts plot of land

Hindu neighbour gifts land to Muslim journalist

Prajwal Revanna: ಅಶ್ಲೀಲ‌ ಪೆನ್‌ಡ್ರೈವ್ ಪ್ರಕರಣದ ತೀವ್ರತೆ ವ್ಯಾಪಕವಾಗಿ ಹರಡಿದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದು, ಇಲ್ಲಿಯವರೆಗೂ ಎಲ್ಲಿದ್ದಾರೆ ಎಂಬ ಮಾಹಿತಿ ಇರಲಿಲ್ಲ. ಮೊನ್ನೆಯಿಂದ ಅವರು ಜರ್ಮನಿಯಲ್ಲಿದ್ದಾರೆ ಎಂಬ ಮಾಹಿತಿಯಿತ್ತು. ಇದೀಗ ಪ್ರಜ್ವಲ್ ರೇವಣ್ಣ ಜರ್ಮನಿಯಿಂದಲೂ ಕಾಲ್ಕಿತ್ತಿದ್ದು, ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಂಡನ್ ಗೆ ಹೋಗಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತ ವರದಿಯಾಗಿದೆ.

ಪ್ರಜ್ವಲ್ ರೇವಣ್ಣ, ಇಂಗ್ಲೆಂಡ್ ನಲ್ಲಿನ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಅವರು ಮತ್ತು ಅವರ ಇಬ್ಬರು ಗೆಳೆಯರು ಜರ್ಮಿನಿಯ ಮ್ಯೂನಿಚ್ ನಿಂದ ಲಂಡನ್‌ಗೆ ಹೋಗಿರುವ ಬಗ್ಗೆ ಮಾಧ್ಯಮವೊಂದು ಮಾಹಿತಿ ಸಿಕ್ಕಿದೆ ಎಂದು ವರದಿ ಮಾಡಿದೆ. ಆದರೆ ಅವರು ವಾಯುಮಾರ್ಗ ಪ್ರಯಾಣವನ್ನು ಬಿಟ್ಟು ರೈಲಿನ ಮೂಲಕ ಸಾಗಿದ್ದಾರೆ ಎಂಬ ವರದಿಗಳು ಬಂದಿವೆ.

ಇದನ್ನೂ ಓದಿ: ದ.ಕ: ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ ಬಳಿಯೇ ಭಿಕ್ಷೆ ಬೇಡಿದ ವೃದ್ಧ ಭಿಕ್ಷುಕ ; ಎಷ್ಟು ದುಡ್ಡು ಕೊಟ್ಟರು ಜಿಲ್ಲಾಧಿಕಾರಿ ?

ಪ್ರಜ್ವಲ್ ರೇವಣ್ಣ ಅವರ ಬೆಂಗಳೂರು ಮೂಲದ ಮತ್ತು ದುಬೈ ಮೂಲದ ಒರ್ವ ಸ್ನೇಹಿತ ಪ್ರಜ್ವಲ್ ರೇವಣ್ಣರ ಜೊತೆ ಇದ್ದಾರೆ ಎಂಬ ಮಾಹಿತಿ ಇದೆ. ಈ ಮೂರು ಒಂದೇ ಕೂಡ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾರೆ ಮತ್ತು ಅವರಯಾರು ತಮ್ಮ ತಮ್ಮ ಕುಟುಂಬಗಳ ಜೊತೆ ಸಂಪರ್ಕದಲ್ಲಿ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

2 ಬಾರಿ ವಿಮಾನ ಟಿಕೆಟ್ ಕ್ಯಾನ್ಸಲ್
ಪ್ರಜ್ವಲ್ ರೇವಣ್ಣ ಈಗಾಗಲೇ 2 ಬಾರಿ ಭಾರತಕ್ಕೆ ಹಿಂದಿರುಗಲು ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ಪ್ರಜ್ವಲ್ ರೇವಣ್ಣ ಮನಸ್ಸು ಮಾಡಿದ್ದರು. ಅದಕ್ಕಾಗಿ ಫ್ಲೈಟ್ ಟಿಕೆಟ್ ನ್ನು ಕಾದಿರಿಸಿದ್ದರು. ಆದರೆ ನಂತರ ಮನಸ್ಸು ಬದಲಾಯಿಸಿ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಫ್ಲೈಟ್ ಟಿಕೆಟ್ ಮೇಲೆ ಗಿಡುಗನ ಕಣ್ಣು ಮಡಗಿ ಕೂತಿದ್ದ ಪೊಲೀಸ್ ಅಧಿಕಾರಿಗಳು ನಿರಾಶರಾಗಿದ್ದಾರೆ. ಮತ್ತೆ ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಕಣ್ಣಿಟ್ಟು ಕಾಯುತ್ತಿದ್ದಾರೆ.

ಇದನ್ನೂ ಓದಿ: High Court: ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ ಎಂದ ಹೈಕೋರ್ಟ್ ; ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು ಎಚ್ಚರಿಸಿದ ನ್ಯಾಯಪೀಠ