Mangaluru Fake CBI Officials: ಮಂಗಳೂರಿನಲ್ಲಿ ನಕಲಿ ಸಿಬಿಐ ಅಧಿಕಾರಿಗಳ ವಂಚನೆಯಿಂದ ಜಸ್ಟ್ ಮಿಸ್ ಸಂಗೀತ ಕಲಾವಿದ
Mangaluru Fake CBI Officials: ಪಾರ್ಸೆಲ್ ಹೆಸರಿನಲ್ಲಿ ವಂಚನೆ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Miyazaki Mango: ಉಡುಪಿಯಲ್ಲಿ ಟೆರೇಸ್ ಮೇಲೆ ಬೆಳೆದ ಮಾವು – ಕೆಜಿಗೆ 2.7 ಲಕ್ಷ !!
ಸಂಗೀತ ಕಲಾವಿದರೊಬ್ಬರನ್ನು ಯಾಮಾರಿಸಿ ಅವರ ಖಾತೆಯಿಂದ ಹಣ ದೋಚಲು ನಕಲಿ ಸಿಬಿಐ ಅಧಿಕಾರಿಗಳು ಯತ್ನ ಮಾಡಿದ್ದು, ಅದೃಷ್ಟವಶಾತ್ ಆ ಕಲಾವಿದರು ಹಣ ಕಳೆದುಕೊಂಡಿಲ್ಲ.
ಎಪ್ರಿಲ್ 2 ರಂದು ಅಪರಿಚಿತರಿಂದ ಮಂಗಳೂರಿನ ಸಂಗೀತ ಕಲಾವಿದ ರೊನಾಲ್ಡ್ ವಿನ್ಸೆಂಟ್ ಕ್ರಾಸ್ತಾ ಅವರಿಗೆ ಕರೆ ಬಂದಿದ್ದು, ಹಿಂದಿ ಭಾಷೆ ಮಾತನಾಡಿದ ಅಪರಿಚತರು ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಬುಕ್ ಆಗಿದೆ ಎಂದು ಹೇಳಿದ್ದಾರೆ. ರೊನಾಲ್ಡ್ ಅವರು ಆನ್‌ಲೈನ್‌ನಲ್ಲಿ ಪತ್ನಿ ಮತ್ತು ಮಗಳ ಹೆಸರಿನಲ್ಲಿ ಕೆಲವೊಂದು ವಸ್ತುಗಳನ್ನು ಬುಕ್ ಮಾಡಿದ್ದರು. ಅದೇ ಕರೆ ಇರಬಹುದು ಎಂದು ಅವರು ಭಾವಿಸಿದ್ದರು.
ಇದನ್ನೂ ಓದಿ: Mangaluru: ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಇತ್ತ ಕರೆ ಮಾಡಿದ ಅಪರಿಚತರು ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಮುಂಬಯಿಯಿಂದ ಮಲೇಷ್ಯಾಕ್ಕೆ ಬುಕ್ ಆಗಿದ್ದು ಅದರಲ್ಲಿ 140ಗ್ರಾಂ ಎಂಡಿಎಂಎ ಡ್ರಗ್ಸ್, 16 ನಕಲಿ ಪಾಸ್‌ಪೋರ್ಟ್, 58 ಸಿಮ್ ಕಾರ್ಡ್ ಎಂದು ಹೇಳಿದ್ದಾರೆ. ಈ ಕುರಿತು ಸಿಬಿಐ ಕಚೇರಿಯಲ್ಲಿ ಎಫ್‌ಐಆರ್ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ನಿಮ್ಮ ಬಂಧನ ಮಾಡಬೇಕಿದೆ ಎಂದು ಹೇಳಿದ್ದಾರೆ. ಇದನ್ನು ತಪ್ಪಿಸಬೇಕಾದರೆ ನೀವು ಇನ್ಸ್‌ಪೆಕ್ಟರ್ ಜೊತೆ ಮಾತನಾಡಿ, ಬೇರೆ ಯಾರಿಗೂ ಹೇಳಬೇಡಿ ಎಂದು ಹೇಳಿದ್ದಾರೆ.
ನಂತರ ಆ ವ್ಯಕ್ತಿ ಕೂಡಲೇ ಸುನಿಲ್ ಕುಮಾರ್ ಎಂಬವ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ನಾನು ಸಿಬಿಐ ಇನ್ಸ್‌ಪೆಕ್ಟರ್ ಎಂದು ಹೇಳಿದ್ದು, ಅಗತ್ಯ ಮಾಹಿತಿ ಬೇಕಿದೆ. ನಾವು ನ್ಯಾಯಾಲಯಕ್ಕೆ ತಿಳಿಸಬೇಕಿದೆ. ಇಲ್ಲದಿದ್ದರೆ ನೀವೇ ಖುದ್ದಾಗಿ ಹೊಸದಿಲ್ಲಿಗೆ ಬರಬೇಕು ಎಂದು ಹೇಳಿದ್ದರು. ಇವರ ನಾಟಕ ನಿಜವಾಗಿಯೂ ಪೊಲೀಸರೆಂಬಂತೆ ಇತ್ತು ಎನ್ನಲಾಗಿದೆ.
ಇವರ ಮಾತುಕತೆ ನಿರಂತರವಾಗಿ ಮಧ್ಯಾಹ್ನ 12.30 ರವರೆಗೆ ನಡೆದಿದೆ. ಪ್ರಶ್ನೆ, ವಿಡಿಯೋ ಕಾಲ್ ನಡೆತನೇ ಇತ್ತು. ರೊನಾಲ್ಡ್ ಅವರನ್ನು ಆಚೆ ಕದಲುವುದಕ್ಕೂ ಬಿಡದೆ ಮಾತನಾಡುತ್ತಿದ್ದರು. ನಿಮ್ಮ ಬಂಧನವಾದರೆ ನಿಮ್ಮ ಮರ್ಯಾದೆ ಹೋಗುತ್ತದೆ ಎಂದೆಲ್ಲ ಹೇಳಿದ್ದಾರೆ. ಜೊತೆಗೆ ಮನೆಯವರ ಮಾಹಿತಿ, ಉದ್ಯೋಗ, ಆದಾಯ, ಬ್ಯಾಂಕ್ ಖಾತೆ ವಿವರ ಎಲ್ಲ ಕೇಳಿದ್ದಾರೆ. ಬ್ಯಾಂಕ್ ಖಾತೆಯಲ್ಲಿರುವ ಹಣದ ಪೈಸೆಯ ವಿವರ ಕೂಡಾ ಸರಿಯಾಗಿ ಹೇಳಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಬ್ಯಾಂಕ್‌ನವರಿಗೆ ಆಗಲಿ, ಪೊಲೀಸ್‌ನವರಿಗೆ ಆಗಲಿ ತಿಳಿಸಬೇಡಿ. ಇದರಲ್ಲಿ ಅವರು ಕೂಡಾ ಇದ್ದಾರೆ. ನಾವು ನಿಮಗೆ ಸಹಾಯ ಮಾಡುತ್ತೇವೆ. ಮತ್ತೆ 1.30 ಕ್ಕೆ ಕರೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ರೊನಾಲ್ಡ್ ಅವರು ಕೂಡಲೇ ನಡೆದ ವಿಚಾರವನ್ನು ತನ್ನ ಗೆಳೆಯನಿಗೆ ತಿಳಿಸಿದ್ದಾರೆ. ಕೂಡಲೇ ಸೈಬಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಇದೊಂದು ವಂಚನೆ ಯಾವುದೇ ಮಾಹಿತಿ ನೀಡಬೇಡಿ ಎಂದು ಹೇಳಿದ್ದಾರೆ. ನಕಲಿ ಅಧಿಕಾರಿಗಳು ಮೊದಲೇ ಹೇಳಿದಂತೆ ಮಧ್ಯಾಹ್ನ ಕರೆ ಮಾಡಿದ್ದು, ಈ ಸಂದರ್ಭದಲ್ಲಿ ರೊನಾಲ್ಡ್ ಅವರ ಗೆಳೆಯ ಕರೆ ಸ್ವೀಕರಿಸಿದ್ದು, ಪ್ರಶ್ನೆ ಕೇಳಿ ದಬಾಯಿಸಿದ್ದಾರೆ. ಆಗ ಕರೆ ಕಡಿತವಾಗಿದೆ.
ನನ್ನ ಬ್ಯಾಂಕ್ ಪಾಸ್ ಪುಸ್ತಕದ ಫೋಟೋ ಕೇಳಿದಾಗ ನನಗೆ ಸಂದೇಹ ಬಂತು. ಗೆಳೆಯನಿಗೆ ತಿಳಿಸಿದಾಗ ಇದೊಂದು ವಂಚನೆ ಎಂದು ಗೊತ್ತಾಯಿತು. ನಾನು ಕೆಲವೊಂದು ಮಾಹಿತಿ ನೀಡಿದ್ದೆ. ಆದರೆ ಎಟಿಎಂ ಪಿನ್ ನಂಬರ್, ಬೇರೆ ಮಾಹಿತಿ ನೀಡಿಲ್ಲ. ಆರ್‌ಟಿಜಿಎಸ್ ಮಾಡಿಲ್ಲ. ಆ ದೇವರೇ ನನಗೆ ಜ್ಞಾನ ನೀಡಿದರು. ಇಲ್ಲವಾದರೆ ಖಾತೆಗಳಲ್ಲಿರುವ ಎಲ್ಲ ಹಣ ದೋಚುತ್ತಿದ್ದರು ಎಂದು ರೊನಾಲ್ಡ್ ವಿನ್ಸೆಂಟ್ ಕ್ರಾಸ್ತಾ ಹೇಳಿದ್ದಾರೆ.