Indian Railway: ಕೊಳೆ ಆಗುತ್ತೆ ಅಂತ ಗೊತ್ತಿದ್ದರೂ ರೈಲಿನಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನು ಮಾತ್ರ ಬಳಸೋದು ಯಾಕೆ
Indian Railway: ನಮ್ಮ ಭಾರತೀಯ ರೈಲ್ವೆ(Indian Railway) ಜಗತ್ತಿನ ಅತಿ ದೊಡ್ಡ ರೈಲ್ವೇ ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನವೂ ಕೋಟ್ಯಂತರ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಿಡುತ್ತ, ಕೋಟ್ಯಂತರ ವಹಿವಾಹಿಟ್ಟಿನ ಸರಕುಗಳನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುತ್ತಾ, ಉತ್ತಮ ಸೇವೆ ಒದಗಿಸುವುದರೊಂದಿಗೆ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಇಂತಹ ಹೆಮ್ಮೆಯ ರೈಲ್ವೆ ವಿಭಾಗದಲ್ಲಿ ಕೆಲವು ವಿಶೇಷತೆಗಳನ್ನು ನಾವು ಗಮನಿಸಬಹುದು. ಅದರಲ್ಲಿ ಎಲ್ಲಾ ಎಸಿ ಕೋಚ್ ಗಳಲ್ಲಿ ಯಾವಾಗಲೂ ಬಿಳಿ ಬೆಡ್ ಶೀಟ್(White Bedshit) ಗಳನ್ನು ಬಳಸುವುದು.
ಹೌದು, ಭಾರತೀಯ ರೈಲ್ವೆಯ ಎಸಿ ಕೋಚ್(AC Couch) ಗಳಲ್ಲಿ ನೀವು ಪ್ರಯಾಣಿಸುವ ವೇಳೆ ಎಲ್ಲಾ ಕೋಚ್ ಗಳಲ್ಲೂ, ಎಲ್ಲಾ ಸಂದರ್ಭದಲ್ಲೂ ಹಾಸಲು, ಹೊದಿಯಲು ಬಿಳಿ ಬೆಡ್‌ಶೀಟ್‌ಗಳನ್ನು ಮಾತ್ರ ನೀಡುತ್ತಾರೆ. ಇದು ಸ್ವಲ್ಪ ಕೊಳೆಯಾದರೂ ಎದ್ದು ಕಾಣುತ್ತದೆ. ಭಾರತೀಯ ರೈಲ್ವೇಯು ಪ್ರತಿದಿನವೂ ಹೆಚ್ಚಿನ ಸಂಖ್ಯೆಯ ರೈಲುಗಳನ್ನು ನಿರ್ವಹಿಸುತ್ತದೆ. ಕೋಟ್ಯಾಂತರ ಮಂದಿ ಇದರಲ್ಲಿ ಪ್ರಯಾಣಿಸುತ್ತಾರೆ. ಹೀಗಿರುವಾಗಲೂ ಪ್ರತಿಯೊಂದು ಪ್ರಯಾಣದಲ್ಲೂ, ಪ್ರತಿಯೊಬ್ಬ ಪ್ರಯಾಣಿಕರಿಗೂ ಶುಚಿಗೊಳಿಸಿದ, ಶುಭ್ರವಾದ, ಫ್ರೆಶ್ ಆದ ಹೊದಿಕೆಗಳನ್ನೇ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಎಷ್ಟು ಬೆಡ್‌ಶೀಟ್‌ಗಳು ಬೇಕಾಗಬಹುದು. ಅದನ್ನು ಶುಚಿಗೊಳಿಸಲು ಎಷ್ಟು ಸಮಯ ಬೇಕು, ಕೆಲಸಗಾರರು ಎಷ್ಟು ಬೇಕು. ಆದರೂ ಕೂಡ ಇಲಾಖೆಯು ಬಿಳಿ ಬಣ್ಣದ ಬೆಡ್‌ಶೀಟ್‌ಗಳನ್ನು ಮಾತ್ರ ಯಾಕೆ ಬಳಸುತ್ತದೆ. ಎಂಬುದು ಹಲವರ ಪ್ರಶ್ನೆ. ಹಾಗಿದ್ರೆ ಅದಕ್ಕೆ ಉತ್ತರಗಳೂ ಇಲ್ಲಿವೆ ನೋಡಿ.
ಇದನ್ನೂ ಓದಿ: Pregnancy: ನಿಮಗಿದು ಗೊತ್ತಾ? ಇಷ್ಟೇ ದಿನದಲ್ಲಿ ನೀವು ತಾಯಿ ಆಗಲಿದ್ದೀರಿ ಅನ್ನೋದು ಕನ್‌ಫರ್ಮ್ ಆಗುತ್ತೆ!
ಬಿಳಿ ಬಣ್ಣದ ಹೊದಿಕೆಗಳನ್ನೇ ಬಳಸುವುದ್ಯಾಕೆ?
• ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳಲು ಬಿಳಿ ಬಣ್ಣದ ಬೆಡ್‌ಶೀಟ್‌ಗಳು ಅಗತ್ಯವಾಗಿರುತ್ತದೆ.
• ಭಾರತೀಯ ರೈಲ್ವೆಯಲ್ಲಿ ತೀವ್ರವಾದ ಶುಚಿಗೊಳಿಸುವ ಪ್ರಕ್ರಿಯೆ ಇದ್ದು ಬಣ್ಣ ಬಣ್ಣದ ಬೆಡ್ ಶೀಟ್‌ಗಳಿಗಿಂತ ಬಿಳಿ ಬೆಡ್ ಶೀಟ್‌ಗಳಿಗೆ ಆದ್ಯತೆ ನೀಡಲು ಕಾರಣವಾಗಿದೆ.
• ಕಠಿಣ ರೀತಿಯಲ್ಲಿ ತೊಳೆಯುವ ಪರಿಸ್ಥಿತಿಗಳಿಗೆ ಬಿಳಿ ಬೆಡ್‌ಶೀಟ್‌ಗಳು ಹೆಚ್ಚು ಸೂಕ್ತವೆಂದು ಕಂಡುಬಂದಿದೆ.
• ಕಠಿಣವಾದ ತೊಳೆಯುವ ಪ್ರಕ್ರಿಯೆಯು ಬಣ್ಣದ ಬಟ್ಟೆಗಳು ಮಸುಕಾಗಲು ಅಥವಾ ಮಂದವಾಗಲು ಕಾರಣವಾಗಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಬಿಳಿ ಬೆಡ್ ಶೀಟ್‌ಗಳನ್ನು ಪರಿಣಾಮಕಾರಿಯಾಗಿ ಬಿಳುಪುಗೊಳಿಸಬಹುದು.
• ಪದೇ ಪದೆ ತೊಳೆಯುವುದರಿಂದ ಫ್ಯಾಬ್ರಿಕ್‌ಗೆ ಸ್ವಚ್ಛ, ಹೊಳಪಿನ ನೋಟವನ್ನು ನೀಡುತ್ತದೆ.
• ವಿವಿಧ ಬಣ್ಣದ ಬೆಡ್ ಶೀಟ್‌ಗಳನ್ನು ಬಳಸುವುದರಿಂದ ಬಣ್ಣಗಳು ಮಿಶ್ರಣವಾಗುವುದನ್ನು ತಡೆಯಲು ಅವುಗಳನ್ನು ಪ್ರತ್ಯೇಕವಾಗಿ ತೊಳೆಯಬೇಕಾಗುತ್ತದೆ. ಒಟ್ಟಿಗೆ ತೊಳೆದರೆ, ಬಣ್ಣಗಳು ಪರಸ್ಪರ ಮಿಶ್ರಣವಾಗಬಹುದು. ಇದನ್ನು ತಪ್ಪಿಸಲು ರೈಲ್ವೇ ಎಸಿ ಕೋಚ್‌ಗಳಿಗ ಬರೀ ಬಿಳಿ ಬಣ್ಣದ ಹೊದಿಕೆ, ದಿಂಬಿನ ಕವರ್‌ನ್ನು ಬಳಸುತ್ತಾರೆ.
ಅಷ್ಟೊಂದು ಬೆಡ್ ಶೀಟ್‌ಗಳನ್ನು ಹೇಗೆ ತೊಳೆಯುತ್ತಾರೆ?
ಬಿಳಿ ಬೆಡ್ ಶೀಟ್ ಗಳನ್ನು ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುತ್ತದೆ. ಒಂದು ಬಳಕೆಯ ನಂತರ ಇವುಗಳನ್ನು ಸ್ವಚ್ಛಗೊಳಿಸಲು ಸಂಗ್ರಹಿಸಲಾಗುತ್ತದೆ. ಶುಚಿಗೊಳಿಸುವ ಪ್ರಕ್ರಿಯೆಯು 121 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉಗಿ ಉತ್ಪಾದಿಸುವ ದೊಡ್ಡ ಬಾಯ್ಲರ್‌ಗಳನ್ನು ಹೊಂದಿದ ವಿಶೇಷ ಯಂತ್ರಗಳನ್ನು ಒಳಗೊಂಡಿರುತ್ತದೆ. ಬೆಡ್‌ಶೀಟ್‌ಗಳನ್ನು 30 ನಿಮಿಷಗಳ ಕಾಲ ಈ ಉಗಿಗೆ ಒಳಪಡಿಸಲಾಗುತ್ತದೆ. ಅವುಗಳು ಸಂಪೂರ್ಣವಾಗಿ ಕ್ರಿಮಿನಾಶಕಕ್ಕೆ ಒಳಪಟ್ಟ ನಂತರ ಹೊರತೆಗೆಯಲಾಗುತ್ತದೆ.