Prajwal Revanna Case: ‘ಅಮ್ಮನನ್ನು ರೇಪ್ ಮಾಡಿ, ನನ್ನ ಬಟ್ಟೆ ಬಿಚ್ಚಿಸ್ತಿದ್ರು’ – ಪ್ರಜ್ವಲ್ ದೌರ್ಜನ್ಯದ ಭಯಾನಕ ಘಟನೆ ಬಿಚ್ಚಿಟ್ಟ ಸಂತ್ರಸ್ತೆ!!
Prajwal Revanna Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ(Prajwal Revanna Case) ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ದಿನದಿನವೂ ಹೊಸದಾದ ಭಯಾನಕ ಸತ್ಯಗಳು ಹೊರಬರುತ್ತಿವೆ. ಅಂತೆಯೇ ಇದೀಗ ಮತ್ತೊಬ್ಬರು ಸಂತ್ರಸ್ತೆ ಪ್ರಜ್ವಲ್ ರೇವಣ್ಣನ ಮತ್ತೊಂದು ಕರಾಳವಾದ ಕಾಮ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: Free Bus: ಫ್ರೀ ಟಿಕೆಟ್ ಪಡೆದರೂ, ಬಸ್ ಕಂಡಕ್ಟರ್’ನ ಕೆಲಸ ಕಿತ್ತುಕೊಂಡ ಮಹಿಳೆಯರು !!
ಹೌದು, ಪ್ರಜ್ವಲ್ ನಿಂದ ದೌರ್ಜನ್ಯಕೊಳಗಾದ ಅನೇಕ ಸಂತ್ರಸ್ತೆಯರು ಪ್ರತೀ ದಿನ ಹೊಸ ಹೊಸ ಸತ್ಯಗಳನ್ನು, ಮನ ಕಲುಕುವ ಸಂಗತಿಗಳನ್ನು ತೆರೆದಿಡುತ್ತಿದ್ದಾರೆ. ಅಂತೆಯೇ ಇದೀಗ ಮಹಿಳೆಯೊಬ್ಬರು ನನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿ, ತನ್ನ ಮೇಲೆ ಲೈಂಗಿಕ ದೌರ್ಜ್ಯನ ಎಸಗಿದ ಭಯಾನಕ ಘಟನೆಗಳನ್ನು ವಿವರಿಸಿದ್ದಾರೆ.
ಸಂತ್ರಸ್ತೆ ಹೇಳುವ ಪ್ರಕಾರ ಇದು 2020 ಮತ್ತು 2021 ರ ನಡುವೆ ನಡೆದ ಘಟನೆ. ಆಗಲೇ ಪ್ರಜ್ವಲ್ ರೇವಣ್ಣ(Prajwal Revanna) ಅವರು ಈ ಮಹಿಳೆಗೆ ಚಿತ್ರ ಹಿಂಸೆ ನೀಡುತ್ತಿದ್ದರಂತೆ. ವೀಡಿಯೊ ಕರೆಗಳಿಗೆ ಉತ್ತರಿಸುವಂತೆ ಒತ್ತಾಯಿಸುತ್ತಿದ್ದರಂತೆ. ತನಗೆ ಮತ್ತು ತನ್ನ ತಾಯಿಗೆ ಅಪಾಯ ಮಾಡುವ ಬೆದರಿಕೆ ಹಾಕಿ ನನ್ನ ಬಟ್ಟೆಗಳನ್ನು ಬಿಚ್ಚುವಂತೆ ಮಾಡಿದ್ದಾರೆ ಎಂದು ಮಹಿಳೆ SIT ಮುಂದೆ ಭಯಾನಕ ಸಂಗತಿಗಳ ಅನಾವರಣ ಮಾಡಿದ್ದಾರೆ.
ಮಹಿಳೆ ಹೇಳಿದ್ದೇನು?
‘ಅವನು (ಪ್ರಜ್ವಲ್ ರೇವಣ್ಣ) ನನ್ನ ತಾಯಿಯ ಮೊಬೈಲ್ಗೆ ಕರೆ ಮಾಡಿ ವೀಡಿಯೊ ಕರೆಗಳಿಗೆ ಉತ್ತರಿಸುವಂತೆ ಒತ್ತಾಯಿಸುತ್ತಿದ್ದನು. ಆಗ ನನ್ನ ಬಟ್ಟೆಗಳನ್ನು ತೆಗೆಯುವಂತೆ ಹೇಳುತ್ತಿದ್ದನು. ನಾನು ಬೇಡ ಎಂದಾಗ, ಯಾವುದೇ ಪ್ರತಿಕ್ರಿಯೆ ನೀಡದೆ ಹೋದಾಗ ನನಗೆ ಮತ್ತು ತಾಯಿಗೆ ಅಪಾಯ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ತಾಯಿ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ. ಪ್ರಜ್ವಲ್ ಮಾತ್ರವಲ್ಲ ಎಚ್.ಡಿ ರೇವಣ್ಣ ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರಿಗೆ ಸಹಕಾರ ನೀಡದಿದ್ದರೆ, ತನ್ನ ಗಂಡನನ್ನು ಕೆಲಸದಿಂದ ಬಿಡಿಸುವುದಾಗಿ ಮತ್ತು ನಿನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತೇನೆ ಬೆದರಿಕೆ ಹಾಕುತ್ತಿದ್ದನು’
‘ಇವರ ಹಿಂಸೆ ತಡೆಯಲಾಗದೆ ನಾವು ನಮ್ಮ ಮೊಬೈಲ್ ನಂಬರ್ಗಳನ್ನು ಬದಲಿಸಬೇಕಾಯಿತು. ಪ್ರಜ್ವಲ್ ರೇವಣ್ಣ ನಿರಂತರವಾಗಿ ತಮ್ಮ ಮನೆಯಲ್ಲಿ ಮಹಿಳಾ ಕೆಲಸಗಾರರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ. ನನ್ನ ತಾಯಿ ನಾಲ್ಕೈದು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಅವರಿಗೆ ತುಂಬಾ ಕಿರುಕುಳ ನೀಡುತ್ತಿದ್ದರು. ಆಕೆ ನಮಗೆ ತಡರಾತ್ರಿ 1 ಅಥವಾ 2 ಗಂಟೆಯ ಸುಮಾರಿಗೆ ಮಾತ್ರ ಕರೆ ಮಾಡುತ್ತಿದ್ದರು. ಆದರೂ ನಮ್ಮೊಂದಿಗೆ ಅಷ್ಟೇನೂ ಮಾತನಾಡುತ್ತಿರಲಿಲ್ಲ. ಅವರು ನನ್ನ ತಾಯಿಯನ್ನು ಗುಲಾಮಳಂತೆ ನಡೆಸಿಕೊಳ್ಳುತ್ತಿದ್ದರು. ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಧೈರ್ಯ ಮಾಡಿ ನಾವು ದೂರು ದಾಖಲಿಸಿದ್ದೇವೆ” ಎಂದು ತಿಳಿಸಿದ್ದಾರೆ.