IT act section: ಇನ್ಮುಂದೆ ಹೆಚ್ಚಿನ ಮೊತ್ತದ ಸಾಲವನ್ನು ಕ್ಯಾಷ್ ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ! ಸೆಕ್ಷನ್ 269ಎಸ್​ಎಸ್ ನಿಯಮ ಜಾರಿ!

IT Act Sections: ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿರ್ದೇಶನ ಒಂದನ್ನು ಹೊರಡಿಸಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ) ಸಾಲ ವಿತರಣೆ ವೇಳೆ ಆದಾಯ ತೆರಿಗೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಸೂಚಿಸಿದೆ. ಈಗಾಗ್ಲೇ ಐಐಎಫ್​ಎಲ್ ಫೈನಾನ್ಸ್ ಸಂಸ್ಥೆಯ ಗೋಲ್ಡ್ ಲೋನ್ ವಿತರಣೆಯಲ್ಲಿ ನಿಯಮ ಮೀರಿಲಾಗಿರುವುದು ಕಂಡು ಬಂದಿದ್ದು, ಕೇರಳ ಮೂಲದ ಮಣಪ್ಪುರಂ ಫೈನಾನ್ಸ್, ಮುತ್ತೂಟ್ ಫೈನಾನ್ಸ್ ಮುಂತಾದ ಎನ್​ಬಿಎಫ್​​ಸಿಗಳಿಗೆ ಮೇ 8ರಂದು ಆರ್​ಬಿಐ ಪತ್ರ ಬರೆದು ಎಚ್ಚರಿಸಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ಟಿ ಮತ್ತು 269 ಎಸ್​ಎಸ್​ನ ನಿಯಮಗಳನ್ನು (IT act sections) ಪಾಲಿಸುವಂತೆ ಈ ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ. ಐಟಿ ಕಾಯ್ದೆ 269ಎಸ್ಎಸ್ ಸೆಕ್ಷನ್ ಪ್ರಕಾರ, 20,000 ರೂಗಿಂತ ಹೆಚ್ಚಿನ ಹಣದ ಸಾಲ ನೀಡುತ್ತಿದ್ದರೆ ಅದನ್ನು ಕ್ಯಾಷ್ ರೂಪದಲ್ಲಿ ಕೊಡುವಂತಿಲ್ಲ. ಬದಲಾಗಿ ಅಕೌಂಟ್ ಪೇಯೀ ಚೆಕ್, ಬ್ಯಾಂಕ್ ಡ್ರಾಫ್ಟ್, ಯುಪಿಐ ಇತ್ಯಾದಿ ಮೂಲಕ ಹಣದ ವಿತರಣೆ ಮಾಡಬೇಕು.

ಇದನ್ನೂ ಓದಿ: Arecanut : ಅಡಿಕೆಯನ್ನೇ ಅವಲಂಬಿಸಿರುವ ರೈತರಿಗೆ ಕಹಿ ಸುದ್ದಿ !!

ಉದಾಹರಣೆಗೆ, ಹಣಕಾಸು ಸಂಸ್ಥೆಯೊಂದು ಒಬ್ಬ ವ್ಯಕ್ತಿಗೆ 80 ರೂ ಸಾಲ ನೀಡಿರುತ್ತದೆ ಎಂದಿಟ್ಟುಕೊಳ್ಳಿ. ಆತ 70,000 ರೂ ಸಾಲ ಮರುಪಾವತಿಸಿರುತ್ತಾನೆ. ಇನ್ನೂ 10,000 ರೂ ಮಾತ್ರವೇ ಸಾಲ ಬಾಕಿ ಇರುತ್ತದೆ. ಈ ವೇಳೆ ಮತ್ತೆ ತುರ್ತಾಗಿ ಹಣದ ಅಗತ್ಯ ಬಿದ್ದು 15,000 ರೂ ಟಾಪ್ ಅಪ್ ಲೋನ್ ಬೇಕಾಗುತ್ತದೆ. ಇದು 20,000 ರೂನ ಮಿತಿಯೊಳಗೆ ಬರುತ್ತದೆ ಎಂದು ಹೇಳಿ ಹಣಕಾಸು ಸಂಸ್ಥೆ ಕ್ಯಾಷ್​ನಲ್ಲಿ ಹಣ ನೀಡುವಂತಿಲ್ಲ. ಯಾಕೆಂದರೆ ಸಾಲ ಬಾಕಿ 10,000 ರೂ ಸೇರಿದರೆ ಒಟ್ಟು ಸಾಲದ ಮೊತ್ತ 25,000 ರೂ ಆಗುತ್ತದೆ.

ಸೆಕ್ಷನ್ 269ಎಸ್​ಎಸ್ ಪ್ರಕಾರ ಈ ಕೆಳಗಿನ ರೂಪದಲ್ಲಿ ಸಾಲ, ಠೇವಣಿಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ.
ಅಕೌಂಟ್ ಪೇಯೀ ಚೆಕ್
ಅಕೌಂಟ್ ಪೇಯೀ ಬ್ಯಾಂಕ್ ಡ್ರಾಫ್ಟ್
ಬ್ಯಾಂಕ್ ಇಸಿಎಸ್
ನೆಟ್ ಬ್ಯಾಂಕಿಂಗ್
ಕ್ರೆಡಿಟ್ ಕಾರ್ಡ್
ಡೆಬಿಟ್ ಕಾರ್ಡ್
ಆರ್​ಟಿಜಿಎಸ್
ಎನ್​ಇಎಫ್​ಟಿ
ಭೀಮ್, ಯುಪಿಐ
ಐಎಂಪಿಎಸ್ ಮುಂತಾದವು.

ಆದರೆ ಸೆಕ್ಷನ್ 269ಎಸ್​ಎಸ್​ನಲ್ಲಿ ಕೆಲ ವಿನಾಯಿತಿಗಳಿದ್ದು, ಬ್ಯಾಂಕ್​ಗಳಿಗೆ ನೀವು ಮಾಡುವ ಪಾವತಿಗಳನ್ನು ಕ್ಯಾಷ್​ನಲ್ಲಿ ಮಾಡಬಹುದು. ಪೋಸ್ಟ್ ಆಫೀಸ್, ಸಹಕಾರಿ ಬ್ಯಾಂಕ್​ಗಳಲ್ಲೂ 20,000 ರೂಗಿಂತ ಹೆಚ್ಚಿನ ಮೊತ್ತದ ಕ್ಯಾಷ್ ನೀಡಬಹುದು. ಅಲ್ಲದೇ ಸರ್ಕಾರದಿಂದ ಸ್ಥಾಪಿತವಾದ ಯಾವುದೇ ನಿಗಮಕ್ಕೂ ಈ ವಿನಾಯಿತಿ ಇದೆ.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾಗೆ ಇದು ಕೊನೆಯ IPL ಸೀಸನ್ ! : ಕೆಕೆಆರ್ ಕೋಚ್ ಜೊತೆ ರೋಹಿತ್ ಶರ್ಮಾ ಹೇಳಿದ್ದಾದರೂ ಏನು? : ಇಲ್ಲಿ ನೋಡಿ

Leave A Reply

Your email address will not be published.