Red Lipstick Ban: ಕೆಂಪು ಲಿಪ್‌ಸ್ಟಿಕ್ ಬ್ಯಾನ್, ಬಳಸಿದರೆ ಕಠಿಣ ಶಿಕ್ಷೆ !!

Red Lipstick Ban: ಮಹಿಳೆಯರ ಅಲಂಕಾರದಲ್ಲಿ, ಅವರ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆಂಪು ಲಿಪ್‌ಸ್ಟಿಕ್ ಅನ್ನು ಈ ದೇಶದಲ್ಲಿ ಬ್ಯಾನ್(Red Lipstick Ban) ಮಾಡಲಾಗಿದೆ. ಮಾತ್ರವಲ್ಲ ಬಳಸಿದರೆ ಕಠಿಣ ಶಿಕ್ಷೆ ವಿಧಿಸುವುದಾಗಿಯೂ ತಿಳಿಸಿದೆ.

ಹೌದು, ಜಗತ್ತಿನಾದ್ಯಂತ ಕೋಟ್ಯಂತರ ಮಹಿಳೆಯರು ಇಷ್ಟಪಡುವ ಕೆಂಪು ಬಣ್ಣದ ಲಿಪ್ ಸ್ಟಿಕ್ ಉತ್ತರ ಕೊರಿಯಾದಲ್ಲಿ ಬ್ಯಾನ್ ಆಗಿದೆ. ಬ್ಯಾನ್ ಮಾಡಿರುವುದು ಮಾತ್ರವಲ್ಲ, ಮುಂದೆ ಯಾರಾದರೂ ಬಳಸಿದರೆ ಕಠಿಣ ಶಿಕ್ಷೆ ವಿಧಿಸುವುದಾಗಿಯೂ ತಿಳಿಸಿದೆ. ಇದರಿಂದ ಸೌಂದರ್ಯ ಪ್ರಿಯೆಯರು ಆಘಾತಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: Suicide: KAS ಅಧಿಕಾರಿ ಪತ್ನಿ, ಹೈಕೋರ್ಟ್‌ ವಕೀಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಅಂದಹಾಗೆ ಉತ್ತರ ಕೊರಿಯಾ(North Koria)ದಲ್ಲಿ ಮಹಿಳೆಯರು ಲಿಪ್‌ಸ್ಟಿಕ್ ಅನ್ನು ಹಾಕಬಹದು. ಆದರೆ ಅವರ ತುಟಿಗಳಿಗೆ ಎಂದಿಗೂ ಕೆಂಪು ಲಿಪ್‌ಸ್ಟಿಕ್ ಹಚ್ಚುವಂತಿಲ್ಲ. ಅಷ್ಟೇ ಅಲ್ಲ ಅರೆಬರೆಯಾಗಿ, ಮೈ ಮಾಟ ಪ್ರದರ್ಶಿಸುತ್ತಾ ಯಾವುದಾರದೂ ಡ್ರೆಸ್ ಮಾಡುವ ಮಹಿಳೆಯರನ್ನು ಕಂಡರು, ಮಹಿಳೆ ತನ್ನ ಕೂದಲಿಗೆ ಬಣ್ಣ ಹಚ್ಚಿದರೂ ಮತ್ತು ಹೆಂಗಸರು ತಮ್ಮ ಕೂದಲನ್ನು ನೀಟಾಗಿ ಬಾಚಿಕೊಳ್ಳದಿದ್ದರೂ ಕೂಡ ಅಂತಹ ಹೆಂಗಸರನ್ನು ಹಿಡಿಯಲು ಉತ್ತರ ಕೊರಿಯಾದಲ್ಲಿ ಆದೇಶ ಹೊರಡಿಸಲಾಗಿದೆ. ಇದಕ್ಕಾಗಿ ದೇಶದ ಬೀದಿಗಳಲ್ಲಿ ಗಸ್ತು ತಿರುಗಲಾಗುತ್ತದೆ.

ಕೆಂಪು ಲಿಪ್‌ಸ್ಟಿಕ್ ನಿಷೇಧಿಸಲು ಕಾರಣ?
ದೇಶದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಕೆಂಪು ಬಣ್ಣವನ್ನು ಬಂಡವಾಳಶಾಹಿ ಮತ್ತು ವ್ಯಕ್ತಿವಾದಕ್ಕೆ ಹೋಲಿಸುತ್ತಿದ್ದು, ಕೆಂಪು ಲಿಪ್‌ಸ್ಟಿಕ್ ಅನ್ನು ಬಂಡವಾಳಶಾಹಿಯ ಸಂಕೇತವೆಂದು ಪರಿಗಣಿಸುತ್ತಾರೆ. ಕೆಂಪು ಬಣ್ಣವು ಶ್ರೇಷ್ಠವಲ್ಲ ಎಂಬ ಭಾವನೆಯನ್ನು ಸಂಕೇತಿಸುತ್ತದೆ ಎಂದು ಅವರು ನಂಬುತ್ತಾರೆ. ಹೀಗಾಗಿ ತನ್ನ ದೇಶದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ತನಗಿಂತ ದೊಡ್ಡವರಾಗಬಾರದು ಎಂದು ಕಿಮ್ ಜಾಂಗ್ ಉನ್ ಅವರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಅನ್ನು ನಿಷೇಧಿಸಿದ್ದಾರೆ.

ಇದನ್ನೂ ಓದಿ: Aravind Kejriwal: ಬಿಜೆಪಿ ಗೆದ್ದರೆ ಅಮಿತ್ ಶಾ ಪ್ರಧಾನ ಮಂತ್ರಿ – ಅರವಿಂದ್ ಕೇಜ್ರಿವಾಲ್ !!

Leave A Reply

Your email address will not be published.