Kodagu: SSLC ವಿದ್ಯಾರ್ಥಿನಿಯ ತಲೆ ಕಡಿದು ಹತ್ಯೆ; ಆರೋಪಿ ಬಂಧನ

Share the Article

SSLC Student Murder: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಇದನ್ನೂ ಓದಿ: Shruti Hassan: ಶೂಟಿಂಗ್ ಗೆ ಆಟೋದಲ್ಲಿ ಹೋದ ಶೃತಿ ಹಾಸನ್ : ಯಾಕೆ ಗೊತ್ತಾ? : ನೆಟ್ಟಿಗರಿಂದ ನಟಿಗೆ ಬಾರಿ ಮೆಚ್ಚುಗೆ

ಮೇ.09 ರಂದು ಆರೋಪಿ ಬಾಲಕಿಯ ರುಂಡ ಕತ್ತರಿಸಿ ಎಸ್ಕೇಪ್‌ ಆಗಿದ್ದು, ನಂತರ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದರು. ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಆರೋಪಿ ಅಡಗಿ ಕೊಂಡಿದ್ದು, ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಆರೋಪಿ ಪ್ರಕಾಶ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಡಿಕೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಹೇಳಿದ್ದಾರೆ.

ಆರೋಪಿ ಪ್ರಕಾಶ್‌ ಪತ್ತೆಯಾಗಿದ್ದು, ಸದ್ಯ ಬಾಲಕಿಯ ರುಂಡಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ರುಂಡ ಸಿಕ್ಕ ಬಳಿಕ ಬಾಲಕಿಯ ಅಂತ್ಯಸಂಸ್ಕಾರ ನಡೆಯಲಿದೆ.

ಸುತ್ತಮುತ್ತಲಿನ ಕಾಫಿತೋಟ, ಶಾಲೆಯ ಸುತ್ತಮುತ್ತ ಹುಡುಕಾಟ ಮಾಡಲಾಗುತ್ತಿದ್ದು, ಶ್ವಾನ ದಳದ ನೆರವು ಕೂಡಾ ಪೊಲೀಸರು ಪಡೆದು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ರೈಲಿನೊಳಗೆ ಈ ಸಮಯದಲ್ಲಿ ಟಿಕೆಟ್ ಚೆಕ್ ಮಾಡುವಂತಿಲ್ಲ !!

Leave A Reply