Alia Bhatt Deep Fake: ಆಲಿಯಾ ಭಟ್‌ ಗೆ ಮತ್ತೊಮ್ಮೆ ಸಂಕಷ್ಟ! ಡೀಪ್‌ಫೇಕ್‌ ವಿಡಿಯೋ ವೈರಲ್ ಚೆಲುವೆ ಯಾರವಳು?

Share the Article

Alia Bhatt Deep Fake: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ನಟಿ ಕತ್ರಿನಾ ಕೈಫ್‌, ನಟಿ ಕಾಜೋಲ್‌ ಹೀಗೆ ಹಲವು ಸೆಲೆಬ್ರೇಟಿಗಳು ಈಗಾಗಲೇ ಡೀಪ್‌ ಫೇಕ್‌ ಗೆ ಗುರಿಯಾಗಿದ್ದರು. ಇದೀಗ ಬಾಲಿವುಡ್‌ ಸ್ಟಾರ್‌ ನಟಿ ಆಲಿಯಾ ಭಟ್‌ ಅವರ ಮುಖವನ್ನು ಬಳಸಿ ಡೀಪ್‌ ಫೇಕ್‌ ಮಾಡಿರುವ ವಿಡಿಯೋವೊಂದು ವೈರಲ್‌ ಆಗಿದೆ. ಆಲಿಯಾ ಭಟ್ ಅವರು ಡೀಪ್ಫೇಕ್ (Alia Bhatt Deep Fake) ವಿಡಿಯೊಗೆ ಬಲಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಬೇರೆ ವಿಡಿಯೊ ಹಾಗೂ ಫೋಟೋಗಳಿಗೆ ಆಲಿಯಾ ಮುಖವನ್ನು ಬಳಕೆ ಮಾಡಲಾಗಿತ್ತು. ಇದೀಗ ಮತ್ತೆ ಆಲಿಯಾ ಅವರ ಈ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿದ್ದು ಅನೇಕರು ಈ ಬಗ್ಗೆ ಖಂಡಿಸಿದ್ದಾರೆ.

https://www.instagram.com/unfixface?igsh=YzljYTk1ODg3Zg==

ಭಾರತೀಯರಲ್ಲಿ (indian’s) ಶೇ. 75ರಷ್ಟು ಮಂದಿ ಡೀಪ್‌ಫೇಕ್‌ (Deep Fakes) ಜಾಲಕ್ಕೆ ಸಿಕ್ಕಿದ್ದು, ಶೇಕಡಾ 22ರಷ್ಟು ಮಂದಿಗೆ ಮಾತ್ರ ಇದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಡೀಪ್‌ಫೇಕ್‌ಗೆ ಹೆಚ್ಚಾಗಿ ನಟಿಯರು ಒಳಗಾಗುತ್ತಿದ್ದಾರೆ. ಮಾಹಿತಿ ಪ್ರಕಾರ ನಟಿ ವಾಮಿಕಾ ಗಬ್ಬಿ (Wamiqa Gabbi) ವಾರದ ಹಿಂದೆ ಇನ್‌ಸ್ಟಾದಲ್ಲಿ ವಿಡಿಯೊವೊಂದನ್ನು ಶೇರ್‌ ಮಾಡಿಕೊಂಡಿದ್ದರು. ಕೆಂಪು ಸೀರೆಯಲ್ಲಿ ನಟಿ ಹಾಟ್‌ ಆಗಿ ಕಂಡಿದ್ದರು. ಇದೀಗ ಈ ವಿಡಿಯೊಗೆ ಡಿಜಿಟಲ್ ಮ್ಯಾನ್ಯುಪಲೇಷನ್ ಟೆಕ್ನಾಲಜಿ ಬಳಸಿ ವಾಮಿಖಾ ಅವರ ಮುಖಕ್ಕೆ ಆಲಿಯಾ ಮುಖವನ್ನು ಅಂಟಿಸಲಾಗಿದೆ ಎಂದು ವರದಿಯಾಗಿದೆ. ಇದೀಗ ಆಲಿಯಾ ಅವರ ಈ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿದ್ದು ಅನೇಕರು ಈ ಬಗ್ಗೆ ಖಂಡಿಸಿದ್ದಾರೆ.

ಡೀಪ್‌ಫೇಕ್ ವಿಡಿಯೊದಲ್ಲಿ, ಆಲಿಯಾ ಕೆಂಪು ಸೀರೆಯನ್ನು ಧರಿಸಿ ಕೂದಲು ಹೆಣೆದು ನೆಲದ ಮೇಲೆ ಕುಳಿತಿದ್ದಾರೆ. ಈ ವಿಡಿಯೊದಲ್ಲಿ ಆಲಿಯಾ ಅವರನ್ನು ನೋಡಿದಂತೇ ಆಗುತ್ತಿದೆ. ಅಲ್ಲದೇ ಡೀಪ್‌ಫೇಕ್ ವೀಡಿಯೊವನ್ನು ಅನ್‌ಫಿಕ್ಸ್‌ ಫೇಸ್‌ ಎಂಬ ಖಾತೆ ಶೇರ್‌ ಮಾಡಿಕೊಂಡಿದೆ. ವಿಡಿಯೊದ ಜತೆಗೆ, “ಆಲಿಯಾಭಟ್ ಆಫ್-ಸ್ಕ್ರೀನ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

Leave A Reply