Actor Ileana: ನನಗೆ ದಕ್ಷಿಣದ ಚಿತ್ರಗಳಲ್ಲಿ ಅವಕಾಶಗಳು ಸಿಗದಿರಲು ಇದೇ ಕಾರಣ : ನಟಿ ಇಲಿಯಾನಾ
Actor Ileana: ಕೆಲವೊಮ್ಮೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ವೃತ್ತಿಜೀವನವನ್ನು ನಿರ್ಧರಿಸುತ್ತವೆ. ಇದು ಸಿನಿಮಾ ನಟರ ವಿಷಯದಲ್ಲಿ ಹೆಚ್ಚಾಗಿ ನಡೆಯುತ್ತದೆ. ನಾಯಕಿ ಇಲಿಯಾನಾ(Ileana) ಪರಿಸ್ಥಿತಿಯೂ ಇದೇ ಆಗಿದೆ ಎನ್ನಬಹುದು. ತೆಲುಗಿನ ‘ದೇವದಾಸ್ ಚಿತ್ರದ ಮೂಲಕ ನಾಯಕಿಯಾಗಿ ಮಾಡಿದರು. ಅದಾದ ನಂತರ ಮಹೇಶ್ ಬಾಬು(Mahesh Babu)ಜೊತೆಗಿನ ‘ಪೋಕಿರಿ(pokiri)’ ಹಿಟ್ ಆದಾಗ ಈಕೆಯ ಹಣೆಬರಹವೇ ಬದಲಾಯಿತು.
ನಂತರ ನಿರಂತರವಾಗಿ ಸ್ಟಾರ್ ಹೀರೋಗಳ(Star hero )ಜೊತೆ ಸಿನಿಮಾ ಮಾಡಿದರು. ಆದರೆ ತಮಿಳಿನಲ್ಲಿ ಈಕೆಗೆ ಅಷ್ಟೊಂದು ಮನ್ನಣೆ ಸಿಗಲಿಲ್ಲ. ಆದರೆ ಹಿಂದಿಯಲ್ಲಿ(Bollywood )ತಯಾರಾದ ಚಿತ್ರವೊಂದು ಆಕೆಯ ವೃತ್ತಿಜೀವನವನ್ನೆ ಅಂತ್ಯ ಮಾಡಿಬಿಟ್ಟಿದೆ.
ಇಲಿಯಾನಾ (Ileana) ದಕ್ಷಿಣದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದಾಗ ಬಾಲಿವುಡ್ ಗೆ (Bollywood )ಪಾದಾರ್ಪಣೆ ಮಾಡಿದರು. ಆರಂಭದ ದಿನಗಳಲ್ಲಿ ‘ಬರ್ಫಿ'(barfi) ಸಿನಿಮಾ ಮಾಡಿದ್ರು, ಹಿಂದಿ ಚಿತ್ರಗಳನ್ನು ಮಾಡುತ್ತಿದ್ದು, ಆದರೆ ಈ ಸಮಯದಲ್ಲಿ ದಕ್ಷಿಣದ( South directors) ನಿರ್ದೇಶಕರನ್ನು ಕೀಳಾಗಿ ಕಾಣುವ ಕಾಮೆಂಟ್ಗಳನ್ನು ಮಾಡುತ್ತಿದ್ದರು. ಇದರಿಂದ ತೆಲುಗು, ತಮಿಳು ನಿರ್ದೇಶಕರು( Tamil directors) ಆಕೆಯತ್ತ ಗಮನ ಹರಿಸುವುದನ್ನು ನಿಲ್ಲಿಸಿದ್ದಾರೆ. ಮತ್ತೊಂದೆಡೆ ಮೈಕೆಲ್ ಟೋಲನ್ ( Mikel tolen)ಎಂಬ ವಿದೇಶಿಗನನ್ನು ಪ್ರೀತಿಸಿ, ನಾಲ್ಕು ವರ್ಷಗಳ ಕಾಲ ಅವನೊಂದಿಗೆ ವಾಸಿಸಿ ಮಗುವಿಗೆ ಈಕೆ ಜನ್ಮ ನೀಡಿದ್ದಳು. ಇವರಿಬ್ಬರೂ ಇತ್ತೀಚೆಗಷ್ಟೇ ಮದುವೆಯಾದರು.
ಸದ್ಯ ಹಿಂದಿ (Bollywood)ಚಿತ್ರಗಳಲ್ಲಿ ಮಾತ್ರ ನಟಿಸುತ್ತಿರುವ ಇಲಿಯಾನಾ(Ileana ) ಇತ್ತೀಚೆಗೆ ದಕ್ಷಿಣದಲ್ಲಿ ಅವಕಾಶಗಳ ಕೊರತೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ಹಿಂದಿಯಲ್ಲಿ ‘ಬರ್ಫಿ (barfi) ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಒಳ್ಳೆಯ ಕಥೆಯಾದ್ದರಿಂದ ಬಿಡಲಾಗಲಿಲ್ಲ. ಇದರಿಂದಾಗಿ ಅವರು ಕೇವಲ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆಯೇ ಹೊರತು ದಕ್ಷಿಣದ ಚಿತ್ರಗಳಲ್ಲಿ ನಟಿಸುತ್ತಿಲ್ಲ ಎಂಬ ತಪ್ಪು ಕಲ್ಪನೆ ನಿರ್ದೇಶಕ-ನಿರ್ಮಾಪಕರಿಗೆ ಮೂಡಿದೆ. ಹಾಗಾಗಿಯೇ ಸೌತ್ ನಲ್ಲಿ( South film industry)ಅವಕಾಶಗಳಿಲ್ಲ ಎಂದಿದ್ದಾರೆ ಇಲಿಯಾನಾ(Ileana).