Shrinagar: ಸೈನಿಕರ ಮೇಲೆ ದಾಳಿ ಮಾಡಿದ ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ ವಾಯುಪಡೆ !
Shrinagar: ಪೂಂಚ್ನಲ್ಲಿ ಇತ್ತೀಚೆಗೆ ಭಾರತೀಯ ವಾಯುಪಡೆ ವಾಹನದ ಮೇಲೆ ನಡೆದ ದಾಳಿಗೆ ಹೊಣೆ ಮಾಡಿರುವ ಆ ಇಬ್ಬರು ಪಾಕಿಸ್ತಾನಿ (Pakistan militants) ಭಯೋತ್ಪಾದಕರ ಬಂಧನಕ್ಕೆ ನೆರವಾಗುವ ಯಾವುದೇ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭದ್ರತಾ ಪಡೆ (Indian Air Force) ಘೋಷಿಸಿದೆ. ಜತೆಗೆ ಶಂಕಿತ ಉಗ್ರರ ರೇಖಾಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಬಿಡುಗಡೆ ಮಾಡಿವೆ.
ಇದನ್ನೂ ಓದಿ: Onion: ಒಂದು ತಿಂಗಳ ಕಾಲ ನೋ ಆನಿಯನ್ ಚಾಲೆಂಜ್ ಮಾಡಿ ಸಾಕು, ದೇಹದಲ್ಲಿ ಏನೆಲ್ಲಾ ಚೇಂಜ್ ಆಗುತ್ತೆ ಅಂತ ನೋಡಿ!
ಮೊನ್ನೆ ಅಂದರೆ ಶನಿವಾರ ಸಂಜೆ ಪೂಂಚ್ನ ಶಾಸಿತಾರ್ ಬಳಿ ಐಎಎಫ್ ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಆ ಸಂದರ್ಭ ಇಂಡಿಯನ್ ಏರ್ ಫೋರ್ಸ್ ನ (IAF) ಕಾರ್ಪೋರಲ್ ವಿಕ್ಕಿ ಪಹಾಡೆ ಪ್ರಾಣ ಕಳೆದುಕೊಂಡಿದ್ದರು. ಜತೆಗೆ ಈ ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದರು. ದಾಳಿಯ ಬಳಿಕ ಶಾಸಿತಾರ್ ಪ್ರದೇಶದಲ್ಲಿ ಸಶಸ್ತ್ರ ಪಡೆಗಳು ಮಹತ್ವದ ಶೋಧ ಕಾರ್ಯಾಚರಣೆ ನಡೆಸಿದವು.
ಇದನ್ನೂ ಓದಿ: Tooth Brush Tips: ಬಾತ್ ರೂಂನಲ್ಲಿ ಟೂತ್ ಬ್ರಷ್ ಅನ್ನು ಇಡುತ್ತೀರ? ಮೊದಲು ಈ ಟಿಪ್ಸ್ ಫಾಲೋ ಮಾಡಿ
ದುರಂತ ಮರಣ ಕಂಡ ವಿಕ್ಕಿ ಪಹಾಡೆ, ತನ್ನ ಸಹೋದರಿಯ ಮದುವೆಗೆ 15 ದಿನಗಳ ರಜೆ ತೆಗೆದುಕೊಂಡಿದ್ದು ಬಳಿಕ ಕೆಲಸಕ್ಕೆ ಬಂದಿದ್ದರು. ಮಧ್ಯಪ್ರದೇಶದ ಚಿಂದ್ವಾರದ ವಿಕ್ಕಿ ಪಹಾಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದ್ದರು. 2011 ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ ಅವರು ತಮ್ಮ ಪತ್ನಿ ರೀನಾ ಮತ್ತು ಮಗ ಹಾರ್ದಿಕ್ ಅವರನ್ನು ಅಗಲಿದ್ದಾರೆ. ಈ ಮಧ್ಯೆ ಆತನ ಸಹೋದರಿ ಗೀತಾ ಪಹಾಡೆ ತಮ್ಮ ಸಹೋದರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ನನಗೆ ನನ್ನ ಸಹೋದರನ ಬಗ್ಗೆ ಹೆಮ್ಮೆಯಿದೆ. ನನ್ನ ಸಹೋದರನಿಗೆ ನ್ಯಾಯ ಬೇಕು ಎಂದು ಆಕೆ ಆಗ್ರಹಿಸಿದ್ದಾಳೆ.