Mangaluru: ಮಂಗಳೂರು ಏರ್‌ಪೋರ್ಟ್‌ಗೆ ಬೆದರಿಕೆ ಸಂದೇಶ; ಉಗ್ರರ ಹೆಸರಿನಲ್ಲಿ ಇಮೇಲ್
Mangaluru: ಮಂಗಳೂರು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಇಮೇಲ್‌ವೊಂದು ಎ.29 ರಂದು ಮಂಗಳೂರಿನ ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಗೆ ಮೇಲೆ ಬಂದಿರುವ ಕುರಿತು ವರದಿಯಾಗಿದ್ದು, ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏರ್ಪೋರ್ಟ್ ಆವರಣದಲ್ಲಿ ಸ್ಫೋಟಕಗಳನ್ನು ಇಟ್ಟಿದ್ದಾಗಿಯೂ, ಎಲ್ಲಿಯೂ ಕಾಣಿಸಿಕೊಳ್ಳದ ರೀತಿಯಲ್ಲಿ ಬಾಂಬ್ ಇಟ್ಟಿದ್ದಾಗಿ ಉಗ್ರರ ಹೆಸರಿನಲ್ಲಿ ಇಮೇಲ್ ಸಂದೇಶ ಬಂದಿದೆ. ಕೆಲವು ವಿಮಾನಗಳಲ್ಲಿ ಮೂರು ಸ್ಫೋಟಕ ಸಾಮಾಗ್ರಿಗಳನ್ನು ಇಟ್ಟಿದ್ದು, ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಗೊಳ್ಳಲಿದೆ. ದೊಡ್ಡ ಮಟ್ಟದ ರಕ್ತಪಾತ ಆಗಲಿದೆ ಎಂದೂ, ಜನ ಸಾಯುವುದನ್ನು ನಿರೀಕ್ಷೆ ಮಾಡುತ್ತೇವೆ ಎಂದು ಬರೆಯಲಾಗಿದೆ.
ಇದು ಕೇವಲ ಬೆದರಿಕೆ ಮಾತ್ರ ಅಲ್ಲ, ಟೆರರೈಸರ್ಸ್ 111 ಈ ರಕ್ತಪಾತದ ಹಿಂದೆ ಇದೆ ಎಂದು ಬರೆಯಲಾಗಿದೆ.
ಎ.29 ರಂದು ಈ ಬೆದರಿಕೆ ಪತ್ರ ಬಂದಿದೆ. ಮಂಗಳೂರು ಪೊಲೀಸರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಬೆದರಿಕೆ ಸಂದೇಶದ ಪ್ರಕರಣ ದಾಖಲಾಗಿದೆ.