Home Crime Dharwad: ಬಾಲಕಿಗೆ ಲೈಂಗಿಕ ದೌರ್ಜನ್ಯ; ಪೊಲೀಸರ ಮೇಲೆಯೇ ಹಲ್ಲೆ, ಆರೋಪಿ ಸದ್ದಾಂ ಹುಸೇನ್‌ಗೆ ಗುಂಡೇಟು

Dharwad: ಬಾಲಕಿಗೆ ಲೈಂಗಿಕ ದೌರ್ಜನ್ಯ; ಪೊಲೀಸರ ಮೇಲೆಯೇ ಹಲ್ಲೆ, ಆರೋಪಿ ಸದ್ದಾಂ ಹುಸೇನ್‌ಗೆ ಗುಂಡೇಟು

Dharwad

Hindu neighbor gifts plot of land

Hindu neighbour gifts land to Muslim journalist

Dharwad: ಹುಬ್ಬಳ್ಳಿಯ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಕುರಿತಂತೆ ಆರೋಪಿ ಸದ್ದಾಂ ಹುಸೇನ್‌ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಸದ್ದಾಂ ಹುಸೇನ್‌ ಎಡಗಾಲಿಗೆ ಗುಂಡು ಹಾರಿಸಿ ಬಂಧನ ಮಾಡಿದ್ದಾರೆ.

ಇದನ್ನೂ ಓದಿ: 7th Pay Commission: ಕೇಂದ್ರ ನೌಕರರಿಗೆ ಭತ್ಯೆಗಳ ಏರಿಕೆ

ವಿದ್ಯಾಗಿರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸಂಗಮೇಶ ಹಾಗೂ ಕಾನ್ಸ್‌ಟೇಬಲ್‌ ಅರುಣ್‌ ಅವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಎ ದಾಖಲು ಮಾಡಲಾಗಿದೆ. ಆರೋಪಿ ಸದ್ದಾಂ ಹುಸೇನನ್ನು ಧಾರವಾಡ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಇದನ್ನೂ ಓದಿ: CoviShield Vaccine: ಪುನೀತ್ ರಾಜಕುಮಾರ್ ಸಾವಿಗೆ ಕೊರೋನ ವ್ಯಾಕ್ಸಿನ್ ಕಾರಣವೇ ?! ಅಸಲಿ ಸತ್ಯ ಬಿಚ್ಚಿಟ್ಟ ಡಾ. ಅಂಜನಪ್ಪ

ಆರೋಪಿ ತನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲು ಮಾಡುತ್ತಿದ್ದಂತೆ, ಪರಾರಿಯಾಗಿದ್ದ. ಅನಂತರ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಪೊಲೀಸ್‌ ವಾಹನ ಹತ್ತುವಾಗ ಅಧಿಕಾರಿಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಪರಾರಿಯಾಗಲು ಯತ್ನ ಮಾಡಿದಾಗ ವಿದ್ಯಾಗಿರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸಂಗಮೇಶ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ಸದ್ದಾಂ ಹುಸೇನ್‌ ಅಪ್ರಾಪ್ತೆಯೋರ್ವಳ ಜೊತೆ ಸಲುಗೆ ಬೆಳೆಸಿ, ಪ್ರೀತಿಸುವಂತೆ ನಂಬಿಸಿದ್ದು, ನಂತರ ಒತ್ತಾಯದಿಂದ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಈ ಕುರಿತು ಮನೆಯಲ್ಲಿ ಹೇಳಿದರೆ ಜೀವಸಹಿತ ಬಿಡುವುದಿಲ್ಲ ಎಂಬ ಬೆದರಿಕೆ ಹಾಕಿದ್ದ. ಆದರೆ ಕಳೆದ ಮೂರ್ನಾಲ್ಕು ದಿನದಿಂದ ಬಾಲಕಿ ವಾಂತಿ ಮಾಡುತ್ತಿದ್ದರಿಂದ ಚಿಕಿತ್ಸೆಗೆಂದು ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಆದರೂ ವಾಂತಿ ಕಡಿಮೆಯಾಗದ್ದರಿಂದ ವೈದ್ಯರು ಪರೀಕ್ಷೆ ಮಾಡಿದಾಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ.

ಈ ವೇಳೆ ಬಾಲಕಿಯನ್ನು ವಿಚಾರಣೆ ಮಾಡಿದಾಗ, ಸದ್ದಾಂ ಹುಸೇನ್‌ ಬೆದರಿಸಿ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿ ಪೋಷಕರು ದೂರು ದಾಖಲು ಮಾಡಿದ್ದಾರೆ.

ಆರೋಪಿ ಸದ್ದಾಂ ಹುಸೇನ್‌ ವಿರುದ್ಧ ಐಪಿಸಿ 376, 506, ಜಾತಿ ನಿಂದನೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಬಾಲಕಿಯನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಶುಕ್ರವಾರ ಸಂಜೆ ಠಾಣೆಗೆ ಮುತ್ತಿಗೆ ಹಾಕಿದ್ದರು.