Home Latest Sports News Karnataka T20 World Cup: ಟಿ 20 ವಿಶ್ವಕಪ್: ಅಂಪೈರ್ ಗಳ ಪಟ್ಟಿ ಪ್ರಕಟ

T20 World Cup: ಟಿ 20 ವಿಶ್ವಕಪ್: ಅಂಪೈರ್ ಗಳ ಪಟ್ಟಿ ಪ್ರಕಟ

T20 World Cup

Hindu neighbor gifts plot of land

Hindu neighbour gifts land to Muslim journalist

T20 World Cup: ಮುಂದಿನ ತಿಂಗಳು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಅಂಪೈರ್ ಗಳಾದ ನಿತಿನ್ ಮೆನನ್ ಮತ್ತು ಜಯರಾಮನ್ ಮದನಗೋಪಾಲ್ ಹಾಗೂ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ: Crime: ಯುವಕನಿಂದ ಯುವತಿ ಅಪಹರಣ ಆರೋಪ: ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ

ಜೂನ್ 1ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ 1 ತಿಂಗಳ ಕಾಲ ನಡೆಯಲಿರುವ ಟೂರ್ನಿಯ ಮೊದಲ ಸುತ್ತಿಗೆ ಉಸ್ತುವಾರಿ ವಹಿಸಲಿರುವ 26 ಅಂಪೈರ್‌ಗಳು ಮತ್ತು ರೆಫರಿಗಳ ಪಟ್ಟಿಯನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ.

ಇದನ್ನೂ ಓದಿ: Prajwal Revanna Case: ಗನ್ ಪಾಯಿಂಟಲ್ಲೇ ಎಲ್ಲಾ ಕೃತ್ಯ – ಅಶ್ಲೀಲ ವೀಡಿಯೋ ಕುರಿತು ಸಂತ್ರಸ್ತೆ ಆರೋಪ

9 ಸ್ಥಳಗಳಲ್ಲಿ 55 ಪಂದ್ಯಗಳಲ್ಲಿ 20 ಅಂಪೈರ್‌ಗಳು ಕಾರ್ಯನಿರ್ವಹಿಸ ಲಿದ್ದಾರೆ. ಇದರಲ್ಲಿ ಪ್ರಸಿದ್ಧ ಐಸಿಸಿ ಅಂಪೈರ್‌ಗಳಾದ ಇಲ್ಲಿಂಗ್ನರ್ತ್, ರಿಚರ್ಡ್ ಕುಮಾರ್ ಧರ್ಮಸೇನಾ, ಕ್ರಿಸ್ ಗಫಾನಿ ಮತ್ತು ಪಾಲ್ ರೀಫೆಲ್ ಸೇರಿದ್ದಾರೆ. ಮದನಗೋಪಾಲ್ ಅವರಲ್ಲದೆ, ಸ್ಯಾಮ್ ನೊಗಾಜಿ, ಅಲ್ಲಾಹುದ್ದೀನ್ ಪಾಲೇಕರ್, ರಶೀದ್ ರಿಯಾಜ್ ಮತ್ತು ಆಸಿಫ್ ಯಾಕೂಬ್ ಕೂಡ ಐಸಿಸಿ ಹಿರಿಯ ಪುರುಷರ ಸ್ಪರ್ಧೆಗೆ ಪದಾರ್ಪಣೆ ಮಾಡಲಿದ್ದಾರೆ.

ರೆಫರಿಗಳ ಪೈಕಿ ಕರ್ನಾಟಕದ ಶ್ರೀನಾಥ್ ಅವರಲ್ಲದೆ ರಂಜನ್ ಮದುಗಲೆ, ಜೆಫ್ ಕ್ರೋವ್ ಮತ್ತು ಆಂಡ್ಯೂ ಪೈಕ್ರಾಫ್ಟ್ ಕೂಡ ಜನಪ್ರಿಯರಾಗಿದ್ದಾರೆ.