Home Crime Prajwal Revanna: ಗನ್ ತೋರಿಸಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಮೇಲೆ 3 ವರ್ಷ ಪ್ರಜ್ವಲ್ ನಿಂದ...

Prajwal Revanna: ಗನ್ ತೋರಿಸಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಮೇಲೆ 3 ವರ್ಷ ಪ್ರಜ್ವಲ್ ನಿಂದ ಅತ್ಯಾಚಾರ – ದೂರು ದಾಖಲು !!

Hindu neighbor gifts plot of land

Hindu neighbour gifts land to Muslim journalist

Prajwal Revanna: ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಸಂಚಲನ ಸೃಷ್ಟಿಸುವ ಜೊತೆಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತದೆ. ದಿನದಿನವೂ ಶಾಕಿಂಗ್ ಸುದ್ದಿಗಳು ಹೊರಬರುತ್ತಿವೆ. ಅಂತೆಯೇ ಇದೀಗ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದ್ದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ತಮ್ಮ ಮೇಲೆ ಪ್ರಜ್ವಲ್ ರೇವಣ್ಣ(Prajwal Revanna) 3 ವರ್ಷ ಅತ್ಯಾಚಾರ ವೆಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಹೌದು, ಅಘಾತಕಾರಿ ಸುದ್ದಿ ಎಂಬಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್ ನಾಯಕಿಯೇ ಅತ್ಯಾಚಾರ ದೂರು ದಾಖಲಿಸಿದ್ದಾರೆ. ಜೆಡಿಎಸ್‌(JDS) ನಾಯಕಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ(Jillapanchayat Member) ಮೂಲಕ ಇದೀಗ ಭಯಾನಕ ಸತ್ಯಗಳು ಹೊರಬಂದಿದ್ದು, ಪ್ರಜ್ವಲ್ ನನಗೆ ಗನ್‌ ತೋರಿಸಿ ಬರೋಬ್ಬರಿ 3 ವರ್ಷಗಳ ಕಾಲ ಅತ್ಯಾಚಾರ ಮಾಡಿದ್ದಾರೆ ಎಂದು ತನ್ನ ಮೇಲಾದ ಅತ್ಯಾಚಾರದ ಸಂಗತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮೂಲಗಳ ಪ್ರಕಾರ ಸುಮಾರು 40 ವರ್ಷ ವಯಸ್ಸಿನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ತಮ್ಮ ದೂರಿನಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಮೇಲೆ 3 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ನಮ್ಮ ದೈಹಿಕ ಸಂಪರ್ಕದ ಸನ್ನಿವೇಶಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಅವುಗಳನ್ನು ಸಾಮಾಜಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳಿ ಬೆದರಿಸಿ ಪದೇ ಪದೇ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?

2021ರಲ್ಲಿ ಸರ್ಕಾರಿ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿಸಲು ತಾನು ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಭೇಟಿಯಾಗಲು ತೆರಳಿದ್ದೆ. ನಾನು ಸಂಸದ ಪ್ರಜ್ವಲ್ ರೇವಣ್ಣ ಕ್ವಾರ್ಟರ್ಸ್‌ನಲ್ಲಿ ಅವರನ್ನು ಭೇಟಿ ಮಾಡಿದ್ದೆ. ಪ್ರಜ್ವಲ್ ರೇವಣ್ಣ ಮೊದಲ ದಿನ ನನ್ನನ್ನು ಭೇಟಿ ಮಾಡಲಿಲ್ಲ. ಮರುದಿನ ಹಾಸನದ ಎಂಪಿ ನಿವಾಸಕ್ಕೆ ಪ್ರಜ್ವಲ್ ರೇವಣ್ಣ ತಮ್ಮನ್ನು ಕರೆಸಿಕೊಂಡಿಡರು. ನೆಲ ಮಹಡಿಯಲ್ಲಿ ಹೆಚ್ಚಿನ ಜನ ಇದ್ದರಿಂದ ಮೇಲ್ಮಹಡಿಯಲ್ಲಿ ಕಾಯುವಂತೆ ಹೇಳಿದ್ದಾರೆ. ಮೆಲ್ಮಹಡಿಯಲ್ಲಿ ಇನ್ನೂ ಕೆಲ ಮಹಿಳೆಯರು ಇದ್ದಾರೆ ಅವರ ಜೊತೆ ಕಾಯುವಂತೆ ಪ್ರಜ್ವಲ್ ರೇವಣ್ಣ ಸಂತ್ರಸ್ತೆಗೆ ಹೇಳಿದ್ದಾರೆ.

ನನಗಿಂತ ಮುಂಚೆ ಹೋಗಿ ಕೂತಿದ್ದಂತಹ ಮಹಿಳೆಯರನ್ನು ಮೊದಲು ಮಾತನಾಡಿಸಿ ಕಳುಹಿಸಿದರು. ಕೊನೆಗೆ ನಾನು ಒಬ್ಬಳೇ ಉಳಿದುಕೊಂಡೆ, ಆಗ ಅವರು ನನ್ನನ್ನು ಮೇಲೆ ಅವರ ರೂಂ ಒಳಗಡೆ ಕರೆದರು. ನಾನು ಒಳಗೆ ಹೋದೆ, ಆಗ ಅವರು ನನ್ನ ಕೈ ಹಿಡಿದು ಎಳೆದು ರೂಂ ಬಾಗಿಲು ಮುಚ್ಚಿದರು. ಅವಾಗ ನಾನು ಬೇಡ ಯಾಕೆ ಬಾಗಿಲು ಹಾಕುತ್ತಿದ್ದೀರಾ ಎಂದು ಕೇಳಿದೆ. ಆಗ ಅವರು ಏನು ಅಗಲ್ಲ, ಅಂತ ಹೇಳಿ ನನ್ನನ್ನು ಬೆಡ್ ಮೇಲೆ ಕೂರಿಸಿಕೊಂಡರು. ಅಮೇಲೆ ಅವರು ನಿನ್ನ ಗಂಡ ತುಂಬಾ ಜೋರು ಸ್ಮಲ್ಪ ಕಡಿಮೆ ಮಾತನಾಡಿಲಿಕ್ಕೆ ಹೇಳು, ಇಲ್ಲವಾದರೆ ಅವನನ್ನು ಬಿಡಲ್ಲ ಅಂತ ಹೇಳಿ ಅವನಿಂದ ನಮ್ಮ ಅಮ್ಮನಿಗೆ ಎಂಎಲ್ಎ ಟಿಕೆಟ್ ತಪ್ಪೋಯ್ತು ಎಂದು ಬೆದರಿಕೆ ಹಾಕಿದರು. ನಿನ್ನ ಗಂಡ ರಾಜಕೀಯದಲ್ಲಿ ಬೆಳೆಯಬೇಕು ಅಂದರೆ ನಾನು ಹೇಳಿದ ಹಾಗೆ ಮಾಡು ಎಂದು ಹೇಳುತ್ತಾ, ನನ್ನನ್ನು ಮಂಚದ ಮೇಲೆ ಬಟ್ಟೆ ಬಿಚ್ಚು ಅಂತ ಹೇಳಿದರು, ನಾನು ಬಿಚ್ಚಿಲ್ಲ ಅಂತ ಹೇಳಿದೆ ಅವರು ಬಿಚ್ಚು ಅಂತ ಒತ್ತಾಯ ಮಾಡಿದರು. ನಾನು ಕೂಗುತ್ತೇನೆ ಎಂದು ಹೇಳಿದರೆ, ನನ್ನ ಹತ್ತಿರ ಗನ್ ಇದೆ ನಾನು ಹೇಳಿದ ಹಾಗೆ ಕೇಳಲಿಲ್ಲ ಅಂದರೆ ನಿನ್ನ ಗಂಡನನ್ನು ನಿನ್ನನ್ನು, ಬಿಡುವುದಿಲ್ಲ, ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದರು.

ಬಳಿಕ ಬಲವಂತವಾಗಿ ನನ್ನ ಬಟ್ಟೆಗಳನ್ನು ಬಿಚ್ಚಿ ನನ್ನ ಮೇಲೆ ಅತ್ಯಾಚಾರ ಮಾಡಿದರು. ಅಲ್ಲದೆ ತಮ್ಮ ಮೊಬೈಲ್ ನಲ್ಲಿ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿಕೊಂಡು ಯಾರಿಗಾದರೂ ತಿಳಿಸಿದರೆ ಇದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದರು. ಅದೇ ವೀಡಿಯೋಗಳನ್ನು ಇಟ್ಟುಕೊಂಡು ಫೋನ್ ಮೂಲಕ ವಿಡಿಯೋ ಕಾಲ್ ಮಾಡುತ್ತಿದ್ದರು. ಮತ್ತು ವಿಡಿಯೋ ಕಾಲ್ ನಲ್ಲೇ ನನಗೆ ಬೆತ್ತಲಾಗುವಂತೆ ಒತ್ತಾಯಿಸುತ್ತಿದ್ದರು. ಹೀಗೆ ಅವರು ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೆ ಇಷ್ಟು ದಿನ ನಾನು ಅವರು ಬೆದರಿಕೆ ಹಾಕಿದ್ದ ಭಯದಿಂದ ಹೆದರಿ ನನ್ನ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ. ಈಗ ಎಸ್.ಐ.ಟಿ. ರಚನೆಯಾಗಿ ತನಿಖೆಯಾಗುತ್ತಿರುವುದರಿಂದ ನನಗಾಗಿರುವ ದೌರ್ಜನ್ಯ, ಈ ದಿನ ಬಂದು ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಸಂಕ್ಷಿಪ್ತವಾಗಿ ಸಂತ್ರಸ್ಥೆ ಉಲ್ಲೇಖಿಸಿದ್ದಾರೆ.

ಸದ್ಯ ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಜ್ವಲ್ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) (ಎನ್) (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುಗು), 354 (ಎ) (1) (ದೈಹಿಕ ಸಂಪರ್ಕ ಮತ್ತು ಅನಪೇಕ್ಷಿತ ಮತ್ತು ಸ್ಪಷ್ಟ ಲೈಂಗಿಕ ಪ್ರಚೋದನೆಗೆ ಒತ್ತಾಯ), 354 (ಬಿ) (ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಗೆ ಕ್ರಿಮಿನಲ್ ಬಲದ ಆಕ್ರಮಣ ಅಥವಾ ಒತ್ತಾಯ) 354(c) (voyeurism-ಅಶ್ಲೀಲ ಚಿತ್ರ ರೆಕಾರ್ಡ್ ಮಾಡಿಕೊಳ್ಳುವುದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿಭಾಗ 66(e) (ಗೌಪ್ಯತೆ ಉಲ್ಲಂಘನೆ)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.