Crime News Bangalore: ದೂರು ನೀಡಲು ಬಂದ ಮಹಿಳೆಯರಿಂದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ
Crime News Bangalore: ಹಣಕಾಸಿನ ವಿಚಾರಕ್ಕೆ ಕುರಿತು ದೂರು ನೀಡಲು ಬಂದ ಮಹಿಳೆಯರ ಗುಂಪೊಂದು ಕರ್ತವ್ಯ ನಿರತ ಪಿಎಸ್‌ಐ ಮತ್ತು ಇತರೆ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಜ್ಞಾನಭಾರತಿ ಠಾಣೆಯಲ್ಲಿ ನಡೆದಿದೆ. ಈ ಘಟನೆ ಕುರಿತು ಮೂವರು ಮಹಿಳೆಯರನ್ನು ಬಂಧನ ಮಾಡಲಾಗಿದೆ.
ಇದನ್ನೂ ಓದಿ: Dakshina Kannada: ಚಾಲಕನ ನಿಯಂತ್ರಣ ತಪ್ಪಿದ ಕಾರು; ಹೋಟೆಲ್‌ಗೆ ಡಿಕ್ಕಿ, ಕಾರಿನಲ್ಲಿದ್ದ ದಂಪತಿಗೆ ಗಾಯ
ಆಯೇಷಾ ತಾಜ್ (32), ಫೌಜಿಯಾ (34), ಅರ್ಬಿನ್ ತಾಜ್ (34) ಇವರನ್ನು ಬಂಧನ ಮಾಡಲಾಗಿದೆ. ಆರೋಪಿಗಳು ಮಹಿಳಾ ಪಿಎಸ್‌ಐ, ಹಾಗೂ ಇತರೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: HD Revanna: ಹೆಚ್‌ಡಿ ರೇವಣ್ಣ ಮನೆ ಮೇಲೆ SIT ದಾಳಿ
ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಮೂವರು ಮಹಿಳೆಯರು, ಶೋಯೆಬ್ ನಡುವೆ ಗಲಾಟೆ ಆಗಿತ್ತು. ಮೇ.1 ರಂದು ಫೈನಾನ್ಸಿಯರ್ ನಾಸೀರ್ ಜೊತೆ ಸೇರಿ ಎಲ್ಲರೂ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಲು ಹಿಂದೇಟು ಹಾಕಿ, ಠಾಣೆ ಮುಂಭಾಗ ಗಲಾಟೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಪಿಎಸ್‌ಐ ಸುರೇಖಾ, ದೂರು ನೀಡಬೇಕಾದರೆ ದೂರು ನೀಡಿ, ಇಲ್ಲದಿದ್ದರೆ ಹೋಗಿ ಎಂದು ಹೇಳಿದ್ದಾರೆ.
ಇದಾದ ನಂತರ ಕೆಲಹೊತ್ತು ಸುಮ್ಮನಿದ್ದ ಆರೋಪಿಗಳು ಮತ್ತೆ ಗಲಾಟೆ ಪ್ರಾರಂಭ ಮಾಡಿದ್ದು, ಇದರಿಂದ ಪಿಎಸ್‌ಐ ಠಾಣಾ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಸಿಟ್ಟುಗೊಂಡ ಆರೋಪಿಗಳು ಪಿಎಸ್‌ಐ ಜೊತೆ ಜಗಳ ಪ್ರಾರಂಭ ಮಾಡಿದ್ದು, ಪಿಎಸ್‌ಐ ಸುರೇಖಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ತಡೆಯಲು ಬಂದ ಇತರ ಮಹಿಳಾ ಸಿಬ್ಬಂದಿ, ಹಾಗೂ ಇತರೆ ಸಿಬ್ಬಂದಿ ಮೇಲೆಯೂ ಕೈ ಮಾಡಿ ಪರಚಿ ಹಲ್ಲೆ ಮಾಡಿ ಅನುಚಿತ ವರ್ತನೆ ತೋರಿದ್ದಾರೆ.
ಇವರು ನಾವು ಮಾನವ ಹಕ್ಕುಗಳ ಸಂಘಟನೆಯವರಾಗಿದ್ದು, ನಮ್ಮ ಮೇಲೆ ಕೈ ಮಾಡಿದರೆ ಸರಿಯಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅನಂತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಫ್‌ಐಆರ್ ದಾಖಲಿಸಿ ಮೂವರು ಮಹಿಳೆಯರನ್ನು ಬಂಧನ ಮಾಡಲಾಗಿದೆ. ಮೊದಲಿಗೆ ಆರೋಪಿಗಳು ತಪ್ಪು ಹೆಸರು, ವಿಳಾಸ ನೀಡಿದ್ದರು. ನಂತರ ಅವರ ಬ್ಯಾಗ್ ಪರಿಶೀಲನೆ ಮಾಡಿದಾಗ ಆಧಾರ್‌ಕಾರ್ಡ್ ದೊರಕಿದ್ದು, ಅಸಲಿ ಹೆಸರು ವಿಳಾಸ ಪತ್ತೆಯಾಗಿದೆ.