Krishna Mukherjee: ಬಟ್ಟೆ ಬದಲಿಸಲು ಬಿಡುತ್ತಿರಲಿಲ್ಲ, ಮೇಕಪ್ ರೂಮಲ್ಲಿದ್ದಾಗ… !! ನಿರ್ಮಾಪಕನ ಅಸಲಿ ಮುಖ ಬಿಚ್ಚಿಟ್ಟ ನಟಿ ಕೃಷ್ಣ ಮುಖರ್ಜಿ

Krishna Mukherjee: ಜನಪ್ರಿಯ ಟಿವಿ ಶೋ `ಯೇ ಹೈ ಮೊಹಬತೇನ್’ (Yeh Hai Mohabaatein) ಮೂಲಕ ಖ್ಯಾತಿ ಪಡೆದ ನಟಿ ಕೃಷ್ಣಾ ಮುಖರ್ಜಿ(Krishna Mukherjee) ನಿರ್ಮಾಪಕರು, ನಿರ್ದೇಶಕರು ತಮ್ಮೊಟ್ಟಿಗೆ ಏನೆಲ್ಲಾ ಅನುಚಿತ ವರ್ತನೆ ಮಾಡಿದ್ದಾರೆ ಎಂಬುದರ ಬಗ್ಗೆ ಬಹಿರಂಗಪಡಿಸಿದ್ದಾರೆ.

https://www.instagram.com/reel/C6OzZMuI8Qz/?igsh=ZTVsZzgybnlwdTVy

ಇದನ್ನೂ ಓದಿ:  Celebrity Autograph: ಸೆಲೆಬ್ರಿಟಿಗಳು ನೀಲಿ ಇಂಕಿನಲ್ಲಿ ಆಟೋಗ್ರಾಫ್ ಹಾಕಲ್ಲ, ಯಾಕೆ ?!

ಹೌದು, ಹಿಂದಿ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ ಅವರು ನಿರ್ಮಾಪಕರಿಂದ ಆದ ಕೆಟ್ಟ ಅನುಭವ ವಿವರಿಸಿದ್ದಾರೆ. ‘ಯೇ ಹೇ ಮೊಹಾಬತೇ’ (Yeh Hai Mohabbatein) ಧಾರಾವಾಹಿ ಮೂಲಕ ಫೇಮಸ್ ಆದ ಅವರಿಗೆ ಈಗ ದೊಡ್ಡ ಮಟ್ಟದ ಕಿರುಕುಳ ಆಗಿದೆ. ಜೊತೆಗೆ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಅವರಿಗೆ ಹಣ ಕೂಡ ಸಿಕ್ಕಿಲ್ಲ. ಇದರಿಂದ ಅವರು ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Drought Relief Funds: ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ !!

ಶುಭ ಶಗುನ್’ ಹೆಸರಿನ ಧಾರಾವಾಹಿಯಲ್ಲಿ ಕೃಷ್ಣಾ ನಟಿಸುತ್ತಿದ್ದರು. ಇದರಿಂದ ಅವರು ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಿರ್ಮಾಪಕ ಕುಂದನ್ ಸಿಂಗ್ ಅವರು ನೀಡಿದ ಕಿರುಕುಳ ಎಂದು ಹೇಳಿದ್ದಾರೆ. ಪ್ರೊಡಕ್ಷನ್ ಹೌಸ್ ಹಾಗೂ ನಿರ್ಮಾಪಕ ಕುಂದನ್ ಸಿಂಗ್ ಅವರು ನನಗೆ ಕಿರುಕುಳ ನೀಡಿದ್ದಾರೆ. ನನಗೆ ಅಂದು ಅನಾರೋಗ್ಯ ಆಗಿತ್ತು. ಜೊತೆಗೆ ಅವರು ಸಂಭಾವನೆಯನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ನಾನು ಶೂಟ್ ಮಾಡಲ್ಲ ಎಂದೆ. ಇದಕ್ಕಾಗಿ ಅವರು ಮೇಕಪ್ ರೂಂನಲ್ಲಿ ನನ್ನನ್ನು ಲಾಕ್ ಮಾಡಿದ್ದರು. ನಾನು ಬಟ್ಟೆ ಬದಲಿಸುವಾಗ ಬಾಗಿಲು ಮುರಿಯುವ ರೀತಿಯಲ್ಲಿ ಬಾಗಿಲು ಬಡಿಯುತ್ತಿದ್ದರು’ ಎಂದು ದುಃಖ ತೋಡಿಕೊಂಡು ʻಶುಭ್ ಶಗುನ್ʼ ಧಾರಾವಾಹಿ (Shubh Shagun) ನಿರ್ಮಾಪಕ ʻಕುಂದನ್ ಸಿಂಗ್ʼ (Kundan Singh) ಅವರನ್ನು ಟ್ಯಾಗ್ ಮಾಡಿ ನಟಿ ಕೃಷ್ಣ ಮುಖರ್ಜಿ ಈ ಪೋಸ್ಟ್ ಮಾಡಿದ್ದಾರೆ.

ನಟಿಯ ಪೋಸ್ಟ್ ನಲ್ಲಿ ಏನಿದೆ?

ʻಇದರ ಬಗ್ಗೆ ಬರೆಯುವಾಗ ನನ್ನ ಕೈಗಳು ಇನ್ನೂ ನಡುಗುತ್ತಿವೆ. ನಾನು ಆತಂಕದಲ್ಲಿ ಇದ್ದೇನೆ. ಖಿನ್ನತೆಯಿಂದ ಬಳಲುತ್ತಿದ್ದೇನೆ. ಈ ಪ್ರಕರಣದ ಬಗ್ಗೆ ಪೋಸ್ಟ್‌ ಮಾಡಬೇಡ ಎಂದು ನನ್ನ ಕುಟುಂಬದವರು ಹೇಳುತ್ತಲೇ ಇದ್ದರು. ಆದರೆ ನಾನೇಕೆ ಹೆದರಬೇಕು? ಇದು ನನ್ನ ಹಕ್ಕು ಮತ್ತು ನನಗೆ ನ್ಯಾಯ ಬೇಕು. ನಾನು ತುಂಬ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇನೆ. ಕಳೆದ ಒಂದೂವರೆ ವರ್ಷ ನನಗೆ ಸುಲಭವಾಗಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೆ. ನಾನು ಒಬ್ಬಂಟಿಯಾಗಿರುವಾಗ ಅಳುತ್ತಿದ್ದೆ. ನಾನು ‘ದಂಗಲ್’ ಟಿವಿಗಾಗಿ ‘ಶುಭ್ ಶಗುನ್’ ಧಾರಾವಾಹಿಯಲ್ಲಿ ನಟಿಸಲು ಆರಂಭಿಸದ ಬಳಿಕ ಇದೆಲ್ಲಾ ಶುರುವಾಯಿತು” ಎಂದು ಆಕೆ ಬರೆದುಕೊಂಡಿದ್ದಾರೆ.

ʻʻಈ ಧಾರಾವಾಹಿಗೆ ಒಪ್ಪಿಕೊಂಡಿದ್ದು ನನ್ನ ಜೀವನದ ಅತ್ಯಂತ ಕೆಟ್ಟ ನಿರ್ಧಾರ. ಮೊದಲಿಗೆ ಇಷ್ಟವಿರಲಿಲ್ಲ. ಬಳಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರೊಡಕ್ಷನ್ ಹೌಸ್ ಮತ್ತು ನಿರ್ಮಾಪಕ ಕುಂದನ್ ಸಿಂಗ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ. ನಾನು ಅಸ್ವಸ್ಥನಾಗಿದ್ದರಿಂದ ಅವರು ಒಮ್ಮೆ ನನ್ನನ್ನು ಮೇಕಪ್ ರೂಮ್‌ ಒಳಗೆ ಕೂಡಿ ಹಾಕಿದ್ದರು. ಸಂಭಾವನೆ ನೀಡದ ಕಾರಣ ನಾನು ಚಿತ್ರೀಕರಣ ಮಾಡದಿರಲು ನಿರ್ಧರಿಸಿದೆ. ಒಮ್ಮೆ ನಾನು ಬಟ್ಟೆ ಬದಲಿಸುವಾಗ ನನ್ನ ಮೇಕಪ್ ರೂಂ ಬಾಗಿಲು ಜೋರಾಗಿ ಬಡಿಯುತ್ತಿದ್ದರು” ಎಂದು ನೋವು ತೋಡಿಕೊಂಡಿದ್ದಾರೆ.

ಹಲವು ಬಾರಿ ಧಮಕಿಯನ್ನೂ ನನಗೆ ಹಾಕಿದರು. ನನಗೆ ಅಸುರಕ್ಷಿತ ಅನಿಸುತ್ತಿದೆ. ನಾನು ತುಂಬಾ ಜನರ ಸಹಾಯ ಕೇಳಿದೆ ಆದರೆ ಏನೂ ಪ್ರಯೋಜನ ಆಗಿಲ್ಲ. ನಾನು ಯಾಕೆ ಯಾವುದೇ ಶೋ ಮಾಡುತ್ತಿಲ್ಲ ಎಂದು ಜನರು ನನ್ನನ್ನು ಕೇಳುತ್ತಾರೆ? ಇದೇ ಕಾರಣ. ಮತ್ತೆ ಇದೇ ರೀತಿ ಆದರೆ ಹೇಗೆ? ಎನ್ನುವ ಭಯ ನನಗೆ. ನನಗೆ ನ್ಯಾಯಬೇಕು” ಎಂದು ಕೃಷ್ಣ ಮುಖರ್ಜಿ ಬರೆದುಕೊಂಡಿದ್ದಾರೆ.

ಸದ್ಯ ನಟಿಯ ಪೋಸ್ಟ್ ಇದೀಗ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಕೃಷ್ಣ ಮುಖರ್ಜಿ ಅವರು ಈ ಪೋಸ್ಟ್ ಮಾಡಿದ ಕೂಡಲೇ, ಅವರ ಸ್ನೇಹಿತರು ಮತ್ತು ಸಹ ನಟರು ತಮ್ಮ ಬೆಂಬಲವನ್ನು ತೋರಿಸಿದರು. ಈ ವಿವಾದದ ಬಗ್ಗೆ ನಿರ್ಮಾಪಕರು ಇನ್ನೂ ಪ್ರತಿಕ್ರಿಯಿಸಿಲ್ಲ.

Leave A Reply

Your email address will not be published.