Everest Masala: ಜನಪ್ರಿಯ ಮಸಾಲೆ ಪದಾರ್ಥಗಳ ನಿಷೇಧ: ವರದಿ ಕೇಳಿದ ಸರಕಾರ
Everest Masala: ಎಂಡಿಎಚ್ ಮತ್ತು ಎವರೆಸ್ಟ್ ಬ್ರಾಂಡ್ಗಳ ನಾಲ್ಕು ಮಸಾಲೆ ಉತ್ಪನ್ನಗಳನ್ನು ಹಾಂಕಾಂಗ್ ಮತ್ತು ಸಿಂಗಾಪುರ ನಿಷೇಧಿಸಿದೆ. ಈ ಕುರಿತು ವಿವರವಾದ ವರದಿ ಕಳುಹಿಸುವಂತೆ ಸಿಂಗಾಪುರ ಮತ್ತು ಹಾಂಕಾಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ದೇಶನ ನೀಡಿದೆ.
ಇದನ್ನೂ ಓದಿ: Mango Tips: ಮಾವಿನಹಣ್ಣಿನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯವಿದು! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್
ಮಾರಾಟ ತಡೆಗೆ ಮೂಲ ಕಾರಣಗಳನ್ನು ತಿಳಿದುಕೊಂಡು ಅದನ್ನು ಸರಿಪಡಿಸುವುದರ ಕುರಿತು ಸಂಬಂಧಪಟ್ಟ ರಫ್ತುದಾರರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Everest Masala: ಜನಪ್ರಿಯ ಮಸಾಲೆ ಪದಾರ್ಥಗಳ ನಿಷೇಧ: ವರದಿ ಕೇಳಿದ ಸರಕಾರ
ಈ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಎನ್ನಲಾಗಿರುವ ಎಥಿಲೀನ್ ಆಕ್ಸೆಡ್ ಎಂಬ ಕೀಟನಾಶಕವು ಗೊತ್ತುಪಡಿಸಿದ ಮಿತಿಗಿಂತಲೂ ಹೆಚ್ಚು ಬಳಕೆಯಾಗಿರುವುದರಿಂದ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಭಾರತೀಯ ಮಸಾಲೆ ಮಂಡಳಿ ಪರಿಶೀಲನೆ ನಡೆಸುತ್ತಿದೆ.
“ಸಿಂಗಾಪುರ ಫುಡ್ ಏಜೆನ್ಸಿ ಮತ್ತು ಹಾಂಕಾಂಗ್ ಸೆಂಟರ್ ಫಾರ್ ಫುಡ್ ಸೇಫ್ಟಿ, ಆಹಾರ ಮತ್ತು ಪರಿಸರ ನೈರ್ಮಲ್ಯ ಇಲಾಖೆಗಳೂ ನಮಗೆ ವಿವರಗಳನ್ನು ನೀಡುತ್ತವೆ,” ಎಂದು ಸಚಿವಾಲಯದ ಹೇಳಿದೆ.
2022-23ರ ಹಣಕಾಸು ವರ್ಷದಲ್ಲಿ ಭಾರತ ಸುಮಾರು 32,000 ಕೋಟಿ ರೂ.ಗಳು ಸಾಂಬಾರ ಪದಾರ್ಥಗಳನ್ನು ರಫ್ತು ಮಾಡಿದೆ. ಮೆಣಸಿನ ಕಾಯಿ, ಜೀರಿಗೆ, ಸ್ಟೈಸ್ ಆಯಿಲ್ ಮತ್ತು ಅರಿಶಿನ, ಕರಿಬೇವಿನ ಪುಡಿ ಮತ್ತು ಏಲಕ್ಕಿ- ರಫ್ತು ಮಾಡುವ ಪ್ರಮುಖ ಮಸಾಲೆಗಳಾಗಿವೆ.