Hubballi: ಪ್ರೀತಿ ನಿರಾಕರಣೆ, ಹುಬ್ಬಳ್ಳಿಯ ಕಾರ್ಪೋರೇಟರ್‌ ಮಗಳ ಬರ್ಬರ ಹತ್ಯೆ ಮಾಡಿದ ಆರೋಪಿ ಫಯಾಜ್‌

Share the Article

Hubballi: ಪ್ರೀತಿ ನಿರಾಕರಿಸಿದಳೆಂದು ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯ ಕುತ್ತಿಗೆ ಚಾಕುವಿನಿಂದ ಭೀಕರವಾಗಿ ಇರಿದು ಹತ್ಯೆ ಮಾಡಿದ ದುರ್ಘಟನೆಯೊಂದು ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದಿದೆ.

ನೇಹಾ ಹಿರೇಮಠ, ಹತ್ಯೆಯಾದ ಯುವತಿ. ಫಯಾಜ್‌ ಎಂಬಾತನೇ ಹತ್ಯೆ ಮಾಡಿದ ಆರೋಪಿ.

ಬೆಳಗಾವಿ ಜಿಲ್ಲೆಯ ಸವದತ್ತಿಯ ನಿವಾಸಿ ಈ ಆರೋಪಿ. ಈತ ಹುಡುಗಿಯ ಕುತ್ತಿಗೆ ಒಂಭತ್ತು ಬಾರಿ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಚಿಕಿತ್ಸೆ ಫಲಿಸದೇ ಆಕೆ ಮೃತ ಹೊಂದಿದ್ದಾಳೆ.

ನಗರದ ಕಾರ್ಪೋರೇಟರ್‌ ಮಗಳಾದ ಮೃತ ಯುವತಿ ನೇಹಾ ಹಿರೇಮಠ, ಈಕೆ ಈ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಆರೋಪಿ ಕೂಡಾ ಅದೇ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ಫಯಾಜ್‌ ಕೆಲವು ದಿನಗಳಿಂದ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ. ದಿನೇ ದಿನೇ ಟಾರ್ಚರ್‌ ಕೊಡುತ್ತಿದ್ದ. ಇಂದು ಕೂಡಾ ಫಾಲೋ ಮಾಡಿದ್ದ ಆರೋಪಿ ಯುವತಿ ಖಡಾಖಂಡಿತವಾಗಿ ನಿರಾಕರಣೆ ಮಾಡಿದ್ದಕ್ಕೆ ಹೀನಾಯವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕಾಲೇಜು ಕ್ಯಾಂಪಸ್‌ನಲ್ಲಿಯೇ ಯುವತಿಯ ಬರ್ಬರ ಹತ್ಯೆ ನಡೆದಿದ್ದು, ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಇದೊಂದು ಲವ್‌ ಜಿಹಾದ್‌ ಕಾರಣವೇ ಕೊಲೆಗೆ? ಅಥವಾ ಪ್ರೀತಿ ನಿರಾಕರಣೆಯೇ ? ಎಂಬುವುದು ತನಿಖೆಯ ನಂತರ ಗೊತ್ತಾಗಬೇಕಿದೆ.

ಇದನ್ನೂ ಓದಿ: CET Exam 2024: ಸಿಇಟಿ ಪರೀಕ್ಷೆ ಆರಂಭ, ಜೀವಶಾಸ್ತ್ರ- ಗಣಿತದಲ್ಲಿ ಡಿಲೀಟ್ ಮಾಡಲಾದ ಪಠ್ಯದ ಪ್ರಶ್ನೆಗಳು, ತಲಾ 10 ಮಾರ್ಕ್ ಕಳಕೊಳ್ಳುವ ಆತಂಕದಲ್ಲಿ ವಿದ್ಯಾರ್ಥಿಗಳು !

Leave A Reply