Actor Dwarakish Passed Away: ನಟ ದ್ವಾರಕೀಶ್‌ ನಿಧನ

Share the Article

Actor Dwarakish Passed away: ಸ್ಯಾಂಡಲ್‌ವುಡ್‌ ಹಿರಿಯ ನಟ ದ್ವಾರಕೀಶ್‌ ನಿಧರಾಗಿರುವ ಕುರಿತು ಮಾಹಿತಿ ದೊರಕಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕಳ್ಳ ಕುಳ್ಳ ಖ್ಯಾತಿಯ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನ ಹೊಂದಿದ್ದರು. ಇವರಿಗೆ 81 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: Narendra Modi: ಬಿಜೆಪಿಯಿಂದ ಪ್ರತಿಪಕ್ಷಕ್ಕೆ ಟಾಂಗ್‌; ಬಿಜೆಪಿಯು ಶ್ವೇತಪತ್ರ ವೆಬ್ಸೈಟ್‌ ಮೂಲಕ ಕೇಂದ್ರ ನೀಡದ ಯೋಜನೆಯ ಮಾಹಿತಿ ಲಭ್ಯ

1942 ಆಗಸ್ಟ್‌ 19 ರಂದು ಹುಣಸೂರು ನಲ್ಲಿ ಶಮಾರಾವ್‌ ಮತ್ತು ಜಯಮ್ಮರವರಿಗೆ ಮಗನಿಗೆ ಜನಿಸಿದ ದ್ವಾರಕೀಶ್‌ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದರು. ಇವರು ತಮ್ಮ ಪ್ರಾಥಮಿಕ ಮತ್ತಯ ಪ್ರೌಢ ಶಿಕ್ಷಣವನ್ನು ಶಾರದಾ ವಿಲಾಸ್‌ ಮತ್ತು ಬನುಮಯ್ಯ ಶಾಲೆಯಲ್ಲಿ ಪೂರೈಸಿದ್ದರು. ದ್ವಾರಕೀಶ್‌ ಅವರು ಇಂಜಿನಿಯರಿಂಗ್‌ ಡಿಪ್ಲೋಮಾ ಕೋರ್ಸ್‌ ಮುಗಿಸಿದ್ದರು.

ಇದನ್ನೂ ಓದಿ: Mangaluru: ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಗೌರವ

ನಂತರ ಇವರು ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಡಿಪ್ಲೋಮಾ ಕೋರ್ಸ್‌ ಮಾಡಿದರು. ನಂತರ ತಮ್ಮ ಸೋದರನ ಜೊತೆ ಸೇರಿ ಭಾರತ್‌ ಆಟೋಸ್‌ ಸ್ಪೇರ್‌ ಸ್ಟೋರ್‌ ಪ್ರಾರಂಭ ಮಾಡಿದ್ದರು, ನಂತರ 1963 ರಲ್ಲಿ ಇವರು ವ್ಯಾಪಾರ ಬಿಟ್ಟು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಪಾರ ಅಭಿಮಾನಿಗಳು ದ್ವಾರಕೀಶ್‌ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

Leave A Reply