Actor Salman Khan: ನಟ ಸಲ್ಮಾನ್ ಖಾನ್ ಮನೆಯ ಬಳಿ ಗುಂಡಿನ ದಾಳಿ : ಬೈಕ್ ನಲ್ಲಿ ಬಂದ ಆಘಂತುಕರಿಂದ ದುಷ್ಕೃತ್ಯ

Share the Article

Actor Salman Khan: ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಭಾನುವಾರ ಬೆಳಗ್ಗೆ ಬಾರಿ ಗುಂಡಿನ ದಾಳಿ ನಡೆದಿದೆ.

ಇದನ್ನೂ ಓದಿ: Bengaluru: ಇಬ್ಬರು ಮಕ್ಕಳನ್ನು ಕೊಂದ ತಾಯಿ ಪರಪ್ಪನ ಅಗ್ರಹಾರದಲ್ಲಿ ಆತ್ಮಹತ್ಯೆ !!

ಇಂದು ಮುಂಜಾನೆ 5 ಗಂಟೆಗೆ ನಟ ಸಲ್ಮಾನ್ ಖಾನ್ ವಾಸವಾಗಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ದುಷ್ಕರ್ಮಿಗಳು ಕನಿಷ್ಠ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: Andra Pradesh: ಪ್ರಚಾರದ ವೇಳೆ ಕಲ್ಲು ತೂರಾಟ, ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ತೀವ್ರ ಗಾಯ !! ವಿಡಿಯೋ ವೈರಲ್

ವರದಿಗಳ ಪ್ರಕಾರ, ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ನಿರಂತರವಾಗಿ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.ಘಟನೆಯ ಕುರಿತು ಸ್ಥಳೀಯ ಪೊಲೀಸರು ಮತ್ತು ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳೆದ ವರ್ಷ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ರಾಷ್ಟ್ರ ಮಟ್ಟದ ಅಪರಾಧಿ ಲಾರೆನ್ಸ್ ಬಿಷ್ಟೋಯ್ ತುಂಬಾತನನ್ನು ಬಂಧಿಸಿತ್ತು. ಲಾರೆನ್ಸ್ ಬಿಷ್ಟೋಯ್ ಅವರ ಕುಖ್ಯಾತ 1998 ರ ಕೃಷ್ಣಮೃಗ ಬೇಟೆಯ ಘಟನೆಯನ್ನು ಉಲ್ಲೇಖಿಸಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದ್ದ. ಈ ಸಂಬಂಧ ಈ ಗುಂಡಿನ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Leave A Reply