Hassan Lokasabha: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜೊತೆ ಎಚ್ ಡಿ ರೇವಣ್ಣ ಕೂಡ ಸ್ಪರ್ಧೆ !!

 

Hassan Lokasabha: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ(Parliament Election) ಝಳ ತುಂಬಾ ಇದೆ. ದಿನದಿಂದ ದಿನಕ್ಕೆ ಬಿಸಿಲ ಕಾವು ಏರಿದಂತೆ ಚುನಾವಣಾ ಕಾವೂ ರಂಗೇರಿದೆ. ಪ್ರಚಾರವೂ ಜೋರಾಗುತ್ತಿದೆ. ಈ ನಡುವೆ ನಾಮಪತ್ರಗಳ ಸ್ವೀಕೃತಿ ಕಾರ್ಯವು ಕೂಡ ಮುಗಿಯುತ್ತಾ ಬಂದಿದೆ. ಈ ನಡುವೆ ಹಾಸನ ಲೋಕಸಭಾ(Hassan Lokasabha) ಕ್ಷೇತ್ರದಲ್ಲಿ ಈಣಕ್ಕಿಳಿದ ಅಭ್ಯರ್ಥಿಗಳು ಗಮನ ಸೆಳೆದಿದ್ದಾರೆ.

ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಹಾಸನ ಲೋಕಸಭಾ ಕೂಡ ಒಂದು. ಇದು ಧಳಪತಿಗಳ ಭದ್ರ ಕೋಟೆ. ಮಾಜಿ ಪ್ರಧಾನಿ ದೇವೇಗೌಡರು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು ಸದ್ಯ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ(Prajwal Revanna) ಪ್ರತಿನಿಧಿಸುತ್ತಿದ್ದಾರೆ. ಈ ವರ್ಷವೂ ಅವರು ಇದೇ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅಚ್ಚರಿ ಎಂಬಂತೆ ಈ ಬೆನ್ನಲ್ಲೇ ಎಚ್ ಡಿ ರೇವಣ್ಣ(H D Revanna) ಕೂಡ ಹಾಸನ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನು ಕೇಳಿದಾಕ್ಷಣ ಪ್ರಜ್ವಲ್ ತಂದೆ ರೇವಣ್ಣ ಅವರೇ ಮಗನ ವಿರುದ್ಧ ಚುನಾವಣೆಗೆ ನಿಲ್ಲಲು ಬಯಸಿದ್ದಾರೆ ಎಂದು ನೀವು ಅಚ್ಚರಿ ಪಡಬಹುದು. ಎಂತವರಿಗೂ ಕೂಡ ಹಾಗನ್ನಿಸುವುದು ಸಹಜ. ಆದರೆ ಇಲ್ಲಿ ಸ್ಪರ್ಧಿಸಲು ಮುಂದಾಗಿದ್ದು ದೇವೇಗೌಡರ ಮಗ ಎಚ್ ಡಿ ರೇವಣ್ಣ ಅಲ್ಲ, ಬದಲಿಗೆ ಸೇಮ್ ಹೆಸರು ಹೊಂದಿರುವ ಎಚ್ ಡಿ ರೇವಣ್ಣ ಎಂಬ ಬೇರೊಬ್ಬ ಅಭ್ಯರ್ಥಿ.

ಹೌದು, ಹಾಸನದಲ್ಲಿ ಇದುವರೆಗೂ ಸುಮಾರು 29 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿದಿದ್ದಾರೆ. ಜೊತೆಗೆ ಎಚ್.ಡಿ. ರೇವಣ್ಣ ಎಂಬುವವರು ಪೂರ್ವಾಂಚಲ ಮಹಾಪಂಚಾಯತ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.

Leave A Reply

Your email address will not be published.