Illicit Relationship: ಲವರ್‌ನ ಮನೆಗೆ ಕರೆದುಕೊಂಡು ಬರಲು ಗಂಡ ಒಪ್ಪದ್ದಕ್ಕೆ ವಿದ್ಯುತ್‌ ಕಂಬ ಏರಿ ಕುಳಿತ ಪತ್ನಿ

Share the Article

Illicit Relationship: ಮದುವೆಯಾಗಿ ಮಕ್ಕಳಿದ್ದರೂ ಅಕ್ರಮ ಸಂಬಂಧದಲ್ಲಿದ್ದ ಪ್ರಿಯಕರನನ್ನು ಮನೆಯಲ್ಲಿ ಇಟ್ಟುಕೊಳ್ಳೋಣ ಎಂದು ಹೇಳಿ ಒಪ್ಪದ ಗಂಡನ ವಿರುದ್ಧ ಸಿಟ್ಟುಗೊಂಡು ಮಹಿಳೆಯೊಬ್ಬರು ಹೈಟೆನ್ಶನ್‌ ಕರೆಂಟ್‌ ಕಂಬವೇರಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯೊಂದು ಉತ್ತರ ಪ್ರದೇಶದ ಗೋರಖ್‌ಪುರದ ಪಿಪ್ರೈಚ್‌ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: Vijayapura: ಸಾವು ಗೆದ್ದ ಸಾತ್ವಿಕ್‌; ಈತನ ಹೆಸರು ಇನ್ನು ಸಿದ್ದಲಿಂಗ

ಗಂಡ, ಮಕ್ಕಳಿದ್ದು 34 ವರ್ಷದ ಮಹಿಳೆಯ ಈ ಉಪಟಳದಿಂದ ನಿಜಕ್ಕೂ ಎಲ್ಲರೂ ಗಾಬರಿಗೊಂಡಿದ್ದರು. ಈಕೆ ಏಳು ವರ್ಷಗಳಿಂದ ಪಕ್ಕದ ಊರಿನ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದು ಈಕೆಯ ಗಂಡನಿಗೆ ಅರಿವಿಲ್ಲದೇ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಇವರಿಬ್ಬರ ಅಕ್ರಮ ಸಂಬಂಧ ಗಂಡನಿಗೆ ಗೊತ್ತಾಗಿದೆ. ಇದನ್ನು ತಿಳಿದು ಪತ್ನಿಗೆ ಗಂಡ ಪ್ರಶ್ನೆ ಮಾಡಿದ್ದು, ಮನೆಯಲ್ಲ ನೀನೇ ನೋಡ್ಕೋ, ನಾನು ಪ್ರಿಯಕರನನ್ನು ಮನೆಗೆ ತಂದು ಇಟ್ಟುಕೊಳ್ಳುತ್ತೇನೆ ಎಂದು ಹಠ ಹಿಡಿದಿದ್ದಾಳೆ.

ಇದನ್ನೂ ಓದಿ: Sonu Srinivas Gowda: ಸೋನು ಗೌಡಗೆ ಜಾಮೀನು ಮಂಜೂರು; ಕೋರ್ಟ್‌ ವಿಧಿಸಿದ ಷರತ್ತೇನು?

ಇದಕ್ಕೆ ಗಂಡ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಈಕೆ ಹೈಟೆನ್ಶನ್‌ ಕರೆಂಟ್‌ ಕಂಬ ಏರಿ ವೈರ್‌ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ ಮಾಡಿದ್ದಾಳೆ. ಸ್ಥಳೀಯರು ಈಕೆಯನ್ನು ನೋಡಿ, ತಕ್ಷಣ ಪೊಲೀಸರಿಗೆ ವಿದ್ಯುತ್‌ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ವಿದ್ಯುತ್‌ ಅನ್ನು ಬಂದ್‌ ಮಾಡಿದ್ದಾರೆ. ನಂತರ ಪೊಲೀಸರು ಆಕೆಯ ಮನವೊಲಿಸಿ, ಮಹಿಳೆಯನ್ನು ಕೆಳಗಿಳಿಸಿ ಕುಟುಂಬಸ್ಥರ ಜೊತೆ ಮಾತನಾಡಿ ಮನೆಗೆ ಕಳುಹಿಸಿದ್ದಾರೆ.

https://twitter.com/ManojSh28986262/status/1775508391106097609

 

Leave A Reply