Tamilunadu: ಮೋದಿ ಮತ್ತೆ ಪ್ರಧಾನಿ ಆದ್ರೆ ದೇಶಾದ್ಯಂತ ಚಿಕನ್-ಮಟನ್ ಬ್ಯಾನ್ !! ಡಿಎಂಕೆ ನಾಯಕ ಪ್ರಚಾರ
Tamilunadu: ದೇಶದಲ್ಲಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಪ್ರಚಾರದ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿವೆ. ಜೊತೆಗೆ ರಾಜಕೀಯ ಕೆಸರೆರಚಾಟಗಳು ಕೂಡ ಆಗುತ್ತಿದೆ. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ನೀಡಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ಇದೀಗ ಡಿಎಂಕೆ ಸದಸ್ಯ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 8 ಸೂರ್ಯ ಗ್ರಹಣ ಎಫೆಕ್ಟ್ ; ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಸರ್ಕಾರ
ಹೌದು, ಡಿಎಂಕೆ(DMK) ನಾಯಕರೊಬ್ಬರು ಆಡಿದ ಮಾತು ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಅದೇನೆಂದರೆ ಚೆನ್ನೈನಲ್ಲಿ ನಡೆದ ಪ್ರಚಾರದ ವೇಳೆ ಮಾತನಾಡಿದ ಡಿಎಂಕೆ ನಾಯಕರೊಬ್ಬರು, ಮೋದಿ(Narendra modi) ಮತ್ತೊಮ್ಮೆ ಪ್ರದಾನಿಯಾದರೆ ಮಾಂಸ ಪ್ರಿಯರಿಗೆ ಆಘಾತ ಉಂಟಾಗುತ್ತದೆ. ಯಾಕೆಂದರೆ ಆಗ ನೀವು ಮೊಸರನ್ನ, ಸಾಂಬಾರ್ ಮಾತ್ರವೇ ತಿನ್ನಬಹುದು. ಯಾಕೆಂದರೆ ಮಟನ್, ಚಿಕನ್, ಗೋಮಾಂಸ ಹಾಗೂ ಇತರ ಯಾವುದೇ ಮಾಂಸವನ್ನು ಬ್ಯಾನ್ ಮಾಡಲಾಗುತ್ತದೆ ಎಂದು ಸುಖಾಸುಮ್ಮನೆ ಅಪಪ್ರಚಾರ ಮಾಡಿದ್ದಾರೆ.
ಸದ್ಯ ನಾಯಕರ ಈ ಹೇಳಿಕೆಗೆ ತಮಿಳುನಾಡು ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಡಿಎಂಕೆ ನಾಯಕನ ಹೇಳಿಕೆಯನ್ನು ಖಂಡಿಸಿದೆ. ತಮಿಳುನಾಡಿನಲ್ಲೀಗ ಕಚ್ಚಾತೀವು ದ್ವೀಪ ವಿವಾದದ ಕಿಡಿ ಹೊತ್ತಿ ಉರಿಯುವಾಗಲೇ ಈ ರೀತಿ ಹೇಳಿಕೆ ಮತ್ತೆ ಇನ್ನಷ್ಟು ಸದ್ದು ಮಾಡಿದೆ.
ಇದನ್ನೂ ಓದಿ: ಸೀನುವಾಗ ಹೃದಯ ಬಡಿತ ಕೆಲವು ಸೆಕೆಂಡುಗಳ ಕಾಲ ನಿಲ್ಲುತ್ತದೆಯೇ? ಸತ್ಯ- ಮಿಥ್ಯಾ ಯಾವುದು? ಉತ್ತರ ಇಲ್ಲಿದೆ