Umar Ansari: “ನನ್ನ ತಂದೆಗೆ ಸ್ಲೋ ಪಾಯ್ಸನ್ ನೀಡಿ ಸಾಯಿಸಲಾಗಿದೆ” : ಮುಖ್ತಾರ್ ಅನ್ಸಾರಿ ಪುತ್ರ ಉಮರ್ ಅನ್ಸಾರಿ ಆರೋಪ

ಹೃದಯಾಘಾತದಿಂದ ಶುಕ್ರವಾರ ಸಾವನಪ್ಪಿದ ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಪುತ್ರ ಉಮ‌ರ್ ಅನ್ಸಾರಿ, ತಮ್ಮ ತಂದೆ ಸ್ಲೋ ಪಾಯ್ಸನ್ ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಸುವುದಾಗಿ ತಿಳಿಸಿದ್ದಾರೆ.

 

ಇದನ್ನೂ ಓದಿ: K S Eshwarappa: ಬಿಜೆಪಿ ತೊರೆಯುವ ವಿಚಾರ – ಈಶ್ವರಪ್ಪ ಮಹತ್ವದ ಹೇಳಿಕೆ!!

“ನನಗೆ ಅಧಿಕಾರಿಗಳ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ, ನನಗೆ ಮಾಧ್ಯಮಗಳ ಮೂಲಕ ವಿಷಯ ತಿಳಿದಿದೆ ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿ ಮಾಡಲು ಬಂದಿದ್ದೆ, ಆದರೆ ಅಧಿಕಾರಿಗಳು ನನಗೆ ಅವಕಾಶ ನೀಡಲಿಲ್ಲ.

ಇದನ್ನೂ ಓದಿ: OTT Release This Week: ಹಾಸ್ಯದ ಜೊತೆ ಕಾನೂನು ಹೋರಾಟ ಮತ್ತು ಭಯಾನಕತೆಯವರೆಗೆ; ವಾರಾಂತ್ಯದಲ್ಲಿ OTTಯಲ್ಲಿ ಸಿಗಲಿದೆ ಸಂಪೂರ್ಣ ಮನರಂಜನೆ

ಸ್ಟೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ಈ ಹಿಂದೆಯೂ ಹೇಳಿದ್ದೆವು, ಇಂದೂ ಕೂಡ ಅದನ್ನೇ ಹೇಳುತ್ತೇವೆ. ಮಾರ್ಚ್ 19ರಂದು ರಾತ್ರಿ ಊಟದಲ್ಲಿ ಅವರಿಗೆ ವಿಷ ನೀಡಲಾಗಿತ್ತು ಎಂದು ಆರೋಪಿಸಿದ ಅವರು, ನ್ಯಾಯಾಂಗದ ಮೊರೆ ಹೋಗುತ್ತೇವೆ, ಅದರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ’ ಎಂದು ಉಮರ್ ಅನ್ಸಾರಿ ಹೇಳಿದ್ದಾರೆ.

ಶುಕ್ರವಾರ ಪೋಸ್ಟ್‌ಮಾರ್ಟಂ ಮಾಡಿ ಶವವನ್ನು ಹಸ್ತಾಂತರಿಸಿದ ನಂತರ ಮುಂದಿನ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂದು ಅವರು ಹೇಳಿದರು.

ಅನ್ಸಾರಿ ಅವರ ಸಹೋದರ ಮತ್ತು ಗಾಜಿಪುರ ಸಂಸದ ಅಪ್ಪಲ್‌ ಅನ್ಸಾರಿ ಅವರು ಮಂಗಳವಾರ ಜೈಲಿನಲ್ಲಿ “ಸ್ಲೋ ಪಾಯ್ಸನಿಂಗ್” ಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ್ದರು, ಆದರೆ ಅಧಿಕಾರಿಗಳು ಅದನ್ನು ನಿರಾಕರಿಸಿದರು.

ಸದ್ಯ ಮುಕ್ತಾರ್ ಅನ್ಸಾರಿ ಅವರ ಮೃತದೇಹವನ್ನು ಬಂದಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.

Leave A Reply

Your email address will not be published.