Mukhtar Ansari Death: 5 ಬಾರಿ ಶಾಸಕ, ಕುಖ್ಯಾತ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ ಸಾವು

Share the Article

Mukhtar Ansari Death: ಉತ್ತರಪ್ರದೇಶದ 5 ಬಾರಿಯ ಶಾಸಕ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ (60) ಗುರುವಾರ ಮೃತ ಹೊಂದಿದ್ದಾರೆ.

ಇದನ್ನೂ ಓದಿ: Puc Results 2024: ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಮಾ.30 ಕ್ಕೆ ಪ್ರಕಟ

2005 ರಿಂದಲೂ ಜೈಲಿನಲ್ಲಿದ್ದ ಅನ್ಸಾರಿ ಗುರುವಾರ ಸಂಜೆ ರಂಜಾನ್‌ ಉಪವಾಸ ಮುಗಿಯುತ್ತಿದ್ದಂತೆ ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೃದಯಾಘಾತದಿಂದ ಮೃತ ಹೊಂದಿದರು.

ಇದನ್ನೂ ಓದಿ: Crime: ಸ್ನೇಹಿತನ ಗುದದ್ವಾರಕ್ಕೆ ಗಾಳಿ ಬಿಟ್ಟ ಇನ್ನೋರ್ವ ಸ್ನೇಹಿತ; ಕರುಳು ಬ್ಲಾಸ್ಟ್‌, ಯುವಕ ಸಾವು

ಮಂಗಳವಾರ ಕಿಬ್ಬೊಟ್ಟೆ ನೋವು ಎಂದು ಅಸ್ವಸ್ಥರಾಗಿ 14 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದು ಮರಳಿದ್ದರು. 68ಕ್ಕೂ ಹೆಚ್ಚು ಅಧಿಕ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದ ಗ್ಯಾಂಗ್‌ಸ್ಟಾರ್‌ 8 ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿ ಜೈಲಿನಲ್ಲಿದ್ದರು.

ಇತ್ತ ಉ.ಪ್ರದೇಶದಾದ್ಯಂತ ಅನ್ಸಾರಿ ಸಾವಿನ ಕಾರಣ ನಿಷೇಧಾಜ್ಞೆ ಹೊರಡಿಸಲಾಗಿದೆ. ಮುಖ್ತಾರ್‌ ಅನ್ಸಾರಿ ಸಾವಿನ ಹಿಂದೆ ಸಂಚು ಇದ್ದು, ಯಾರೋ ಜೈಲಲ್ಲಿ ವಿಷವುಣಿಸಿ ಕೊಲೆ ಮಾಡಿದ್ದಾರೆ ಎಂದು ಅವರ ಸಹೋದರ, ಘಾಜಿಪುರ ಸಂಸದ ಅಫ್ಜಲ್‌ ಅನ್ಸಾರಿ ಆರೋಪ ಮಾಡಿದ್ದಾರೆ.

Leave A Reply

Your email address will not be published.