Home Karnataka State Politics Updates H.D.Kumara Swamy: “ಆತ ಡಾ.ಮಂಜುನಾಥ್ ಅಂಗುಷ್ಟಕ್ಕೂ ಸಮನಲ್ಲ” ಎಂದು ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ ಹೆಚ್‌ಡಿಕೆ

H.D.Kumara Swamy: “ಆತ ಡಾ.ಮಂಜುನಾಥ್ ಅಂಗುಷ್ಟಕ್ಕೂ ಸಮನಲ್ಲ” ಎಂದು ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ ಹೆಚ್‌ಡಿಕೆ

H.D.Kumara Swamy

Hindu neighbor gifts plot of land

Hindu neighbour gifts land to Muslim journalist

H.D.Kumara Swamy: ʼಲೋಕಸಮರ’ ಪ್ರಚಾರದ ಅಖಾಡ ರೆಡಿಯಾಗುವ ಆರಂಭದ ಹಂತದಲ್ಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಟಾಕ್‌ವಾರ್ ಜೋರಾಗಿದ್ದು, ಡಿ. ಕೆ.ಸುರೇಶ್ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಡಿ.ಕೆ. ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.

“ಆತ ಡಾ.ಮಂಜುನಾಥ್ ಅಂಗುಷ್ಟಕ್ಕೂ ಸಮನಲ್ಲ” ಎಂದು ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಮಂಜುನಾಥ್ ಬಗ್ಗೆ ಸುರೇಶ್ ಹೇಳಿಕೆಯನ್ನು ಕುಮಾರಸ್ವಾಮಿ ಪ್ರಸ್ತಾಪಿಸಿ, ‘ಡಾ. ಮಂಜುನಾಥ್ ಸಾಧನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಆದರೆ, ಈ ವ್ಯಕ್ತಿ ನಾಲಿಗೆ ಜಾರಿಬಿಟ್ಟಿದ್ದಾರೆ. ಮಂಜುನಾಥ್ ಸಾಧನೆ ಏನು ಎಂಬುದನ್ನು ಅರಿತುಕೊಂಡು ಮಾತನಾಡಲಿ. ನಮ್ಮ ಬಗ್ಗೆ ಮಾತನಾಡಿದರೆ ರಾಜಕೀಯವಾಗಿ ಎದುರಿಸುತ್ತೇನೆ. ಆದರೆ, ಡಾ.ಮಂಜುನಾಥ್ ಬಗ್ಗೆ ಮಾತನಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ,” ಎಂದು ವಾರ್ನಿಂಗ್ ನೀಡಿದರು. ”ಮಾಡಬಾರದ್ದು ಮಾಡಿರುವ ವ್ಯಕ್ತಿಗೆ ಸಾಧಕರೊಬ್ಬರ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ?,” ಎಂದು ಕಿಡಿಕಾರಿದರು. ಬಿಜೆಪಿ ಚಿಹ್ನೆ ಮೇಲೆ ಚುನಾವಣೆಗೆ ನಿಲ್ಲುವಂತೆ ಡಾ.ಮಂಜುನಾಥ್ ಮೇಲೆ ಒತ್ತಡ ಹಾಕಿ ಒಪ್ಪಿಸಿದ್ದು ನಾನೇ,” ಎಂದು ಸ್ಪಷ್ಟಪಡಿಸಿದರು.