Rain Updates: ವರ್ಷದ ಮೊದಲ ಮಳೆಯನ್ನು ಸ್ವಾಗತಿಸಿದ ಚಿಕ್ಕಮಗಳೂರಿನ ಜನತೆ, ವರುಣದೇವನ ಕೃಪೆ, ಬೆಳೆಗಾರರಿಗೆ ಸಂತಸ

Share the Article

Chikkamagaluru: ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆಗೆ ವರುಣದೇವ ತಂಪೆರೆದಿದ್ದು, ಜನರು ಖುಷಿ ಗೊಂಡಿದ್ದಾರೆ. ಈ ಮೂಲಕ ವರ್ಷದ ಮೊದಲ ಭರ್ಜರಿ ಮಳೆಯನ್ನು ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದ ಜನ ಸ್ವಾಗತ ಮಾಡಿದ್ದಾರೆ.

ಸತತವಾಗಿ ಎರಡು ಗಂಟೆಗಳ ಕಾಲ ಮಳೆಸುರಿದಿದೆ. ಕೊಳಗಾಮೆ, ಮೇಲಿನ ಹುಲುವತ್ತಿ ಭಾಗಗಳಲ್ಲಿ ಸುರಿದ ಮಳೆ ಕಂಡು ಹಳ್ಳಿಗರು, ಬೆಳೆಗಾರರು ಖುಷಿ ಪಟ್ಟಿದ್ದಾರೆ.

ಹಾಗೆನೇ ವರದಿಯ ಪ್ರಕಾರ , ಹಲವು ಹಳ್ಳಿಗಳಲ್ಲಿ 20-30-40 ಸೆನ್ಸ್‌ನಷ್ಟು ಭಾರೀ ಮಳೆಯಾಗಿದೆ.

ನೀರಿಲ್ಲದೇ ಜನರು ಬವಣೆ ಪಡುತ್ತಿರುವ ಸಂದರ್ಭದಲ್ಲೇ ವರುಣ ಇಳೆಗೆ ತಂಪೆರೆದಿದ್ದಾನೆ. ಅಲ್ಲಿನ ಜನರು ಖುಷಿ ಪಟ್ಟಿದ್ದಾರೆ.

Leave A Reply