Home Karnataka State Politics Updates Politics: ಮೂವರು ಬಿಜೆಪಿ ಸಂಸದರು, ಮಾಜಿ ಸಿಎಂ ಕಾಂಗ್ರೆಸ್‌ ಸಂಪರ್ಕದಲ್ಲಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡಗೆ...

Politics: ಮೂವರು ಬಿಜೆಪಿ ಸಂಸದರು, ಮಾಜಿ ಸಿಎಂ ಕಾಂಗ್ರೆಸ್‌ ಸಂಪರ್ಕದಲ್ಲಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡಗೆ ಕಾಂಗ್ರೆಸ್‌ ಆಹ್ವಾನ ನೀಡಿದ ಡಿಕೆಶಿ

Hindu neighbor gifts plot of land

Hindu neighbour gifts land to Muslim journalist

D.K.Shivakumar: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಸದಾನಂದ ಗೌಡರಿಗೆ ಟಿಕೆಟ್‌ ನೀಡುತ್ತಾರೆಯೇ ಎಂಬ ಅನುಮಾನ ಕೂಡಾ ಇದೆ. ಈ ಮಧ್ಯೆ ಹೊಸ ವಿಷಯ ಏನಪ್ಪಾ ಅಂದರೆ ಸದಾನಂದ ಗೌಡ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನುವುದು.

ಇದನ್ನೂ ಓದಿ: Karnataka Politics: ರಾಜ್ಯ ಸರಕಾರದ ವಕ್ತಾರರಾಗಿ ಐವರು ಸಚಿವರ ನೇಮಕ- ಸಿಎಂ ಸಿದ್ದರಾಮಯ್ಯ ಆದೇಶ

ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮಾಜಿ ಸಿ ಎಂ ಡಿ.ವಿ.ಸದಾನಂದ ಗೌಡ ಅವರ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು, ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಹಲವು ಬಿಜೆಪಿ ನಾಯಕರು ನಮ್ಮನ್ನು ಭೇಟಿಯಾಗಿದ್ದಾರೆ. ಇದರಲ್ಲಿ ಮೂವರು ಬಿಜೆಪಿ ಸಂಸದರು ಅದರಲ್ಲೂ ಮಾಜಿ ಸಿಎಂ ಒಬ್ಬರೂ ನಮ್ಮಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Shiradi Ghat Accident: ಶಿರಾಡಿಘಾಟ್‌ನಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ, ಗ್ಯಾಸ್‌ ಸೋರಿಕೆ, ವಾಹನ ಸಂಚಾರ ಸ್ಥಗಿತ

ಈ ಕುರಿತು ಅವರು ಕಲಬುರ್ಗಿಯಲ್ಲಿ ಅವರು ಹೇಳಿದ್ದಾರೆ.

ಹೆಸರನ್ನು ಬಹಿರಂಗಪಡಿಸಿದ ಉಪ ಮುಖ್ಯಮಂತ್ರಿ ಡಿಕೆಶಿ ಅವರು ಮಾಜಿ ಸಿಎಂ ಸದಾನಂದ ಗೌಡ ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಮಾರ್ಚ್‌ 15 ಕ್ಕೆ ಬಿಡುಗಡೆಯಾಗಲಿದೆ. ಇದು ದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಸಭೆ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂಬುವುದಾಗಿ ಹೇಳಿದರು.