Vitla: ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಆರು ಮಂದಿಗೆ ಗಾಯ

Share the Article

Vitla: ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ವಾಹನಗಳಲ್ಲಿದ್ದ ಒಟ್ಟು ಆರು ಮಂದಿ ಕೂಡಾ ಗಾಯಗೊಂಡ ಘಟನೆಯೊಂದು ಮಾಣಿ-ಕೊಡಾಜೆ ಗಡಿಭಾಗದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಮದುವೆ ಕಾರ್ಯಕ್ಕೆಂದು ಬಟ್ಟೆ ಖರೀದಿ ಮಾಡಲೆಂದು ಹೋಗಿದ್ದ ಸುಳ್ಯದ ಕುಟುಂಬವು ಮನೆಗೆ ವಾಪಸ್ಸು ಬರುವ ಸಂದರ್ಭದಲ್ಲಿ ಈ ಅವಘಢ ಸಂಭವಿಸಿದೆ. ಮಂಗಳೂರಿನಿಂದ ಸುಳ್ಯ ಕಡೆ ಹೋಗುತ್ತಿದ್ದ ಕಾರು ಎದುರು ಕಡೆಯಿಂದ ಬರುತ್ತಿದ್ದ ಆಕ್ಟೀವಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಆಕ್ಟೀವಾ ವಾಹನ ಸಂಪೂರ್ಣವಾಗಿ ಜಖಂ ಗೊಂಡಿದೆ.

ವಿದ್ಯಾ (20), ಚೈತ್ರಾ (23) ಹಾಗೂ ಮತ್ತೋರ್ವ ಮಹಿಳೆ ಗಾಯಗೊಂಡವರು ಎಂದು ವರದಿಯಾಗಿದೆ. ಕಾರಿನ ಚಾಲಕನಿಗೂ ಗಾಯವಾಗಿದೆ. ಆಕ್ಟೀವಾದಲ್ಲಿ ಇದ್ದ ಇಬ್ಬರಿಗೂ ಗಾಯವಾಗಿರುವ ಕುರಿತು ವರದಿಯಾಗಿದೆ. ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

Leave A Reply