Political News: ಅವರು ಮಾಡಿದ ಕರ್ಮ ಅವರನ್ನು ಬೆನ್ನು ಬಿಡದೆ ಕಾಡುತ್ತದೆ : ಶೋಭಾ ಕರಂದ್ಲಾಜೆ ಗೆ ಟಾಂಗ್ ನೀಡಿದ ಸಿ ಟಿ ರವಿ

Share the Article

ಸದಾ ಒಂದಿಲ್ಲೊಂದು ಹೇಳಿಕೆಯಿಂದ ಸುದ್ದಿಯಲ್ಲಿರುವ ಸೀಟಿ ರವಿ ಅವರು ಈಗ ಮತ್ತೊಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಪಕ್ಷಕ್ಕೆ ದ್ರೋಹ ಮಾಡಿದ್ದರೆ ಅವರವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿಯವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: Bengaluru Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಆರೋಪಿಗಳ ಮಹತ್ವದ ಸುಳಿವು ಎನ್‌ಐಎ ಲಭ್ಯ

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮ ಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಸೇರಿ ಸಿ.ಟಿ.ರವಿ ಅವರನ್ನು ಶೋಭಾ ಕರಂದ್ಲಾಜೆ ಸೋಲಿಸಿದ್ದರು ಎಂಬ ಸಾರ್ವಜನಿಕ ಚರ್ಚೆಯ ಬಗ್ಗೆ ವರದಿಗಾರರು ಪ್ರಶ್ನೆ ಕೇಳಿದಾಗ ಕರ್ಮ ಯಾರನ್ನು ಬಿಟ್ಟಿಲ್ಲ, ಅವರು ಮಾಡಿದ ಕರ್ಮವನ್ನು ಅವರು ಖಂಡಿತ ಅನುಭವಿಸುತ್ತಾರೆ ಎಂದು ಉತ್ತರಿಸಿದ್ದಾರೆ.

ಇದನ್ನು ನಾನು ಸಾರ್ವಜನಿಕ ಚರ್ಚೆ ವಿಷಯವಾಗಿ ಮಾಡಲು ಬಯಸುವುದಿಲ್ಲ, ನನ್ನ ಗ್ರಹಚಾರ ಸರಿ ಇರಲಿಲ್ಲ, ನನ್ನದೇ ತಪ್ಪಿರಬಹುದೆಂದು ಈಗಾಗಲೇ ಹೇಳಿದ್ದೇನೆ ಎಂದರು.

ನಾನು ಇನ್ನೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಹೋಗಲ್ಲ, ಅವರವರ ಕರ್ಮ ಅವರೇ ಅನುಭವಿಸಬೇಕು. ನನ್ನ ತಪ್ಪಿನಿಂದ ಸೋತಿದ್ದೇನೆಂದು ಈಗಾಗಲೇ ಹೇಳಿಕೊಂಡಿದ್ದೇನೆ. ಯಾರಾದರೂ ಪಕ್ಷದ್ರೋಹ ಕೆಲಸ ಮಾಡಿದ್ದರೆ ಅದರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ ಎಂದರು.

ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಜನ ನನ್ನು ಕೈ ಬಿಡುವುದಿಲ್ಲ ಎಂಬ ಅತಿಯಾದ ವಿಶ್ವಾಸ ಇತ್ತು. ಅತಿಯಾದ ವಿಶ್ವಾಸ ಕೂಡ ಹೀಗೆಲ್ಲ ಮಾಡುತ್ತೆ ಅಂದುಕೊಂಡಿರಲಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡರು.

Leave A Reply