Home Karnataka State Politics Updates Udupi: ಅಯೋಧ್ಯೆಯ ರಾಮನ ನೋಡಬೇಕೆಂಬ ಆಸೆ – ಮಂದಿರಕ್ಕೆ ತೆರಳಿ ದರ್ಶನವಾಗುತ್ತಿದ್ದಂತೆ ಕೊನೆಯುಸಿರೆಳೆದ RSS...

Udupi: ಅಯೋಧ್ಯೆಯ ರಾಮನ ನೋಡಬೇಕೆಂಬ ಆಸೆ – ಮಂದಿರಕ್ಕೆ ತೆರಳಿ ದರ್ಶನವಾಗುತ್ತಿದ್ದಂತೆ ಕೊನೆಯುಸಿರೆಳೆದ RSS ಕಾರ್ಯಕರ್ತ !!

Udupi

Hindu neighbor gifts plot of land

Hindu neighbour gifts land to Muslim journalist

Udupi: ಹಿರಿಯ ಆರ್‌ಎಸ್‌ಎಸ್ (RSS) ಕಾರ್ಯಕರ್ತರೊಬ್ಬರಿಗೆ ಅಯೋಧ್ಯೆ ರಾಮನ ದರ್ಶನ ಮಾಡಬೇಕೆಂಬ ಆಸೆ. ಅಂತೆಯೇ ಅಯೋಧ್ಯೆಗೆ ತೆರಳಿ ಬಾಲರಾಮನ ದರ್ಶನವನ್ನೂ ಪಡೆದಿದ್ದಾರೆ. ಆದರೆ ದರ್ಶನ ಆಗುತ್ತಿದ್ದಂತೆ ಮಂದಿರದ (Ram Mandir) ರಾಮಲಲ್ಲಾನ ಸನ್ನಿಧಾನದಲ್ಲೇ ಹೃದಾಯಾಘಾತದಿಂದ ಮೃತಪಟ್ಟಿದ ಘಟನೆ ನಡೆದಿದೆ.

ಇದನ್ನೂ ಓದಿ: PM Modi: ಯೂಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ತಪ್ಪಿಸಿದ್ದು ಮೋದಿ : ಸಿ ಎನ್ ಎನ್ ಸುದ್ದಿ ಸಂಸ್ಥೆ ವರದಿ ಬಿಡುಗಡೆ

ಹೌದು, ಉಡುಪಿಯ (Udupi) ಪಾಂಡುರಂಗ ಶಾನುಭೋಗ್ ಎಂಬುವವರು ಮೃತರಾದ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ. ಪಾಂಡುರಂಗ ಅವರು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ದುಡಿದು ನಿವೃತ್ತರಾಗಿದ್ದರು. ರಾಮಲಲ್ಲಾನ (Ram Lalla) ಮಂದಿರಕ್ಕೆ (ರಾಮಮಂದಿರ) ಹೋಗಬೇಕೆಂದು ಅಯೋಧ್ಯೆಗೆ (Ayodhya) ತೆರಳಿದ್ದರು. ಬೆಳಗ್ಗೆ ರಾಮಲಲ್ಲಾನಿಗೆ ಕೈಮುಗಿದು ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ಪ್ರಸಾದ ಪಡೆದು ಧನ್ಯತೆ ವ್ಯಕ್ತಪಡಿಸಿದ್ದರು. ಆದರೆ ಮಧ್ಯಾಹ್ನದ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವ ವೇಳೆ ಹೃದಯಘಾತವಾಗಿ ಮೃತಪಟ್ಟಿದ್ದಾರೆ.