17,835 ಕೋಟಿ ರೂಪಾಯಿಗಳ ಯೋಜನೆಗಳಿಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರ.
ಬೆಂಗಳೂರು : ರಾಜ್ಯಾದ್ಯಂತ 27,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವ 17,835.9 ಕೋಟಿ ರೂಪಾಯಿ ಮೌಲ್ಯದ ಆರು ಹೊಸ ಯೋಜನೆಗಳು ಮತ್ತು ಎಂಟು ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳಿಗೆ ಕರ್ನಾಟಕ ಸರ್ಕಾರ( C M Siddaramaiah)ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯತ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ (ಎಸ್. ಎಚ್. ಎಲ್. ಸಿ. ಸಿ) ತನ್ನ ಸಭೆಯಲ್ಲಿ ₹8,000 ಕೋಟಿ ಮೌಲ್ಯದ ಹೊಸ ಯೋಜನೆಗಳಿಗೆ ಮತ್ತು ₹9,000 ಕೋಟಿ ಮೌಲ್ಯದ ಹೆಚ್ಚುವರಿ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಹೊಸ ಯೋಜನೆಗಳಲ್ಲಿ ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾದ 2,095 ಕೋಟಿ ರೂಪಾಯಿಗಳ ಹೂಡಿಕೆ ಮತ್ತು ರಾಜ್ಯದಲ್ಲಿ 21,723 ಜನರಿಗೆ ಉದ್ಯೋಗ ಒದಗಿಸುವ ಪ್ರಸ್ತಾಪವೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿಯ, ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳು 10,433 ಕೋಟಿ ರೂಪಾಯಿಗಳ ಹೊಸ ಮತ್ತು ಹೆಚ್ಚುವರಿ ಹೂಡಿಕೆಯನ್ನು ಆಕರ್ಷಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Namaz In Metro Station: ಮೆಟ್ರೋ ನಿಲ್ದಾಣದ ಬಳಿ ನಮಾಜ್ ಮಾಡುತ್ತಿದ್ದ ವರನ್ನು ಒದ್ದ ಪೋಲಿಸ್ ಅಮಾನತು