Political News: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ -ಮೋದಿ ಸರ್ಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ತುಟ್ಟಿ ಭತ್ಯೆ ಜತೆಯಲ್ಲೇ ತುಟ್ಟಿ ಭತ್ಯೆ ಪರಿಹಾರದ ಹೆಚ್ಚುವರಿ ಕಂತನ್ನು ನೀಡಲು ಗುರುವಾರ ಕೇಂದ್ರ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

ಇದನ್ನೂ ಓದಿ: Hijab Raw: ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್‌ ವಿವಾದ; ಕಾಲೇಜಿಗೆ ಬುರ್ಖಾ ಹಾಕಿಕೊಂಡು ಬಂದ ವಿದ್ಯಾರ್ಥಿನಿ

ಈ ಮೂಲಕ 49.18 ಲಕ್ಷ ಉದ್ಯೋಗಿಗಳು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ಶೇಕಡ 4 ಪ್ರಮಾಣದ ಬೊಕ್ಕಸಕ್ಕೆ ವಾರ್ಷಿಕ 12,868.72 ಕೋಟಿ ರೂಪಾಯಿ ಹೊರೆಯಾಗಲಿದೆ. ಇದು ಈ ವರ್ಷದ ಜ.1ರಿಂದಲೇ ಪೂರ್ವಾನ್ವಯವಾಗಲಿದೆ.

7ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಅಂಗೀಕೃತ ಸೂತ್ರದಂತೆ ಈ ಹೆಚ್ಚಳ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ರಾಹಕರಿಗೆ ನೀಡಲಾಗುವ 300 ರೂಪಾಯಿ ಸಬ್ಸಿಡಿ ಮುಂದುವರಿಸಲೂ ಕೂಡ ಸಭೆ ಸಮ್ಮತಿಸಿದೆ.

ಸಬ್ಸಿಡಿಯನ್ನು ಉಜ್ವಲ ಯೋಜನೆಯ 10.27 ಕೋಟಿ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಇದಕ್ಕಾಗಿ 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು 12,000 ಕೋಟಿ ರೂ. ವೆಚ್ಚವಾಗಲಿದೆ. 14.2 ಕೆಜಿ ಸಿಲಿಂಡ‌ರ್ ಗೆ ವರ್ಷಕ್ಕೆ 12 ರೀಫಿಲ್‌ರೆಗೆ ಸಬ್ಸಿಡಿ ಕೊಡಲಾಗುತ್ತದೆ. 2016ರ ಮೇ ತಿಂಗಳಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದಿತ್ತು.

Leave A Reply

Your email address will not be published.