Home Interesting Rajnath Singh: ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ : ರಕ್ಷಣಾ...

Rajnath Singh: ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ

Rajnath Singh

Hindu neighbor gifts plot of land

Hindu neighbour gifts land to Muslim journalist

ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವ ದೇಶಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಕಠಿಣ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಲಡಾಖ್ ಮತ್ತು ಈಶಾನ್ಯದ ಅರುಣಾಚಲ್ ಪ್ರದೇಶದ ಚೀನಾದ ಗಡಿಯಲ್ಲಿನ ಇತ್ತೀಚಿನ ಉದ್ವಿಗ್ನತೆಯ ಮಧ್ಯೆ ಅವರ ಈ ಹೇಳಿಕೆಯು ಶತ್ರು ದೇಶಗಳಿಗೆ ಎಚ್ಚರಿಕೆ ಯಾಗಿದೆ.

ಇದನ್ನೂ ಓದಿ: Bengaluru Metro: ಬೆಂಗಳೂರಿನಲ್ಲಿ ಮೊದಲ ಚಾಲಕರಹಿತ ಮೆಟ್ರೋ ರೈಲು ಸಂಚಾರ

ಭಾರತೀಯ ರಕ್ಷಣಾ ಪಡೆಗಳ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಕ್ಷಣಾ ಸಚಿವರು, ಯಾರಾದರೂ ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡುವ ಸ್ಥಿತಿಯಲ್ಲಿ ಭಾರತವಿದೆ ಎಂದು ಒತ್ತಿ ಹೇಳಿದ್ದಾರೆ.

“ಭೂಮಿ, ವಾಯು ಅಥವಾ ಸಮುದ್ರ ಮಾರ್ಗವಾಗಿ ಯಾರಾದರೂ ಭಾರತದ ಮೇಲೆ ದಾಳಿ ಮಾಡಿದರೆ ನಮ್ಮ ಪಡೆಗಳು ಬಲವಾಗಿ ಪ್ರತಿಕ್ರಿಯಿಸುತ್ತವೆ. ನಾವು ಯಾರ ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ, ಆದರೆ ಯಾರಾದರೂ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ತಕ್ಕ ಪ್ರತ್ಯುತ್ತರ ನೀಡುವ ಸ್ಥಿತಿಯಲ್ಲಿದ್ದೇವೆ “ಎಂದು ರಾಜನಾಥ್ ಸಿಂಗ್ ಹೇಳಿದರು.

ಇದೇ ವೇಳೆ, ಭಾರತದ ಸಶಸ್ತ್ರ ಪಡೆಗಳನ್ನು ಬಲಪಡಿಸಿರುವ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು. ಸೇನೆಗೆ “ಸ್ವಾವಲಂಬನೆ” ತರಲು ಮತ್ತು ಅದರ ಆಧುನೀಕರಣವನ್ನು ಖಚಿತಪಡಿಸಿಕೊಳ್ಳಲು ಮೇಕ್ ಇನ್ ಇಂಡಿಯಾ ಉಪಕ್ರಮಗಳ ಮಹತ್ವದ ಬಗ್ಗೆ ಹೇಳಿದ್ದಾರೆ.

ಹಿಂದಿನ ಸರ್ಕಾರಗಳು ರಕ್ಷಣಾ ವಲಯಕ್ಕೆ ಒತ್ತು ನೀಡಲಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ನಾವು ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರತೆ’ ಯನ್ನು ತಂದಿದ್ದೇವೆ “ಎಂದು ಅವರು ಹೇಳಿದರು.