Madras High Court: ಸನಾತನ ಧರ್ಮ ವಿವಾದ : ಡಿ ಎಮ್ ಕೆ ಸಚಿವ ಉದಯ ನಿಧಿ ಸ್ಟಾಲಿನ್ಗೆ ಚೀಮಾರಿ ಹಾಕಿದ ಮದ್ರಾಸ್ ಹೈಕೋರ್ಟ್

Share the Article

ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ ಎಂದು ಹೋಲಿಸಿದ್ದ ಕಾರಣ ಸೋಮವಾರವಷ್ಟೇ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಡಿಎಂಕೆ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ಗೆ ಬುಧವಾರ ಮದ್ರಾಸ್ ಹೈ ಕೋರ್ಟ್ ಕೂಡ ಛೀಮಾರಿ ಹಾಕಿದೆ.

ಇದನ್ನೂ ಓದಿ: Actress Shilpa Shetty: ಅಕ್ಷಯ್ ಕುಮಾರ್ ‘ ನನ್ನನ್ನು ಬಳಸಿಕೊಂಡು, ಬೇರೊಬ್ಬರನ್ನು ಕಂಡುಕೊಂಡ, ನನ್ನನ್ನು ಕೈಬಿಟ್ಟ : ಶಾಕಿಂಗ್ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ

ಉದಯನಿಧಿ ಅವರನ್ನು ಶಾಸಕ ಸ್ಥಾನ ದಿಂದ ಅನರ್ಹಗೊಳಿಸಬೇಕು ಎಂದು ಸಲ್ಲಿ ಸಿದ್ದ ರಿಟ್ ಅರ್ಜಿ ಕುರಿತು ತೀರ್ಪು ನೀಡಿದ ನ್ಯಾಯಾಲಯ ‘ಸನಾತನ ಧರ್ಮ ವನ್ನು ಡೆಂಗ್ಯೂ, ಹೆಚ್‌ಐವಿ, ಮಲೇರಿಯಾ ಮುಂತಾದ ರೋಗಗಳಿಗೆ ಹೋಲಿಸುವುದು ಸಾಂವಿಧಾನಿಕ ನೀತಿಗಳಿಗೆ ವಿರುದ್ಧವಾದುದು ಮತ್ತು ಇದು ಸುಳ್ಳುಸುದ್ದಿ ಹಬ್ಬಿಸುವುದಕ್ಕೆ ಸಮನಾಗುತ್ತದೆ. ಸಾಂವಿಧಾನಿಕವಾಗಿ ಜವಾಬ್ದಾರಿಯುತ ಹುದ್ದೆ ಅಲಂಕರಿಸಿರುವ ವ್ಯಕ್ತಿಗಳು ಸಮಾಜವನ್ನು ಪ್ರತ್ಯೇಕಿಸುವ ಹೇಳಿಕೆ ನೀಡಬಾರದು.’ ಎಂದು ಹೇಳಿದೆ.

ಅಲ್ಲದೆ ಉದಯನಿಧಿಯ ಯಾವ ನ್ಯಾಯಾಲಯದಲ್ಲೂ ಸನಾತನ ಧರ್ಮದ ವಿರುದ್ಧ ಮಾತನಾಡಿದ ಕುರಿತಾಗಿ ಅಪರಾಧಿ ಎಂದು ಘೋಷಣೆಯಾಗದ ಕಾರಣ ಶಾಸಕ ಸ್ಥಾನದಿಂದ ಅನರ್ಹ ಮಾಡಲಾಗದು ಎಂದು ಹೇಳಿತು.

“ಅಧಿಕಾರದಲ್ಲಿರುವ ವ್ಯಕ್ತಿಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಟೀಕಿಸಲಾಗುತ್ತಿರುವ ವ್ಯವಸ್ಥೆಯ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಆಧರಿಸಿರುತ್ತವೆ ಎಂದು ನಿರೀಕ್ಷಿಸಲಾಗಿದೆ ಮತ್ತು ಮುಖ್ಯವಾಗಿ, ಅಂತಹ ಟೀಕೆಗಳು ವಿನಾಶಕಾರಿಯಾಗಿರಬಾರದು” ಎಂದು ನ್ಯಾಯಾಧೀಶರು ಹೇಳಿದರು.

Leave A Reply