Vande Bharath Railway: ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಮಹತ್ತರ ಬದಲಾವಣೆ ತಂದ ರೈಲ್ವೇಸ್!
Vande Bharath Railway: ವೇಗದ ಜತೆಗೆ ಸಮಯಪಾಲನೆಗೆ ಹೆಸರಾದ ರೈಲು ಇದ್ದರೆ ಅದರಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮುಂಚೂಣಿಯಲ್ಲಿ ನಿಲ್ಲುತ್ತದೆ. ವಂದೇ ಭಾರತಮ್ ಇದೀಗ ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದಕ್ಷಿಣ ಮತ್ತು ನೈಋತ್ಯ ರೈಲ್ವೆ ಅಡಿಯಲ್ಲಿ ಓಡಾಡುವ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ.
*ಎಲ್ಲೆಲ್ಲಿ ಏನೇನು ಬದಲಾವಣೆ ?*
ರೈಲು ಸಂಖ್ಯೆ 20642/20641: ಇದರ ಸಮಯವನ್ನು ಬದಲಿಸಿದ್ದು ಈ ಬದಲಾವಣೆ ಮಾರ್ಚ್ 11, 2024 ರಿಂದ ಹೋಗಿ ಬರುವ ಎರಡೂ ದಿಕ್ಕುಗಳಲ್ಲಿ ಜಾರಿಗೆ ಬರುತ್ತದೆ. ಕೊಯಮತ್ತೂರಿನಿಂದ ಬೆಂಗಳೂರಿಗೆ ರೈಲು ಸಂಖ್ಯೆ 20642 ರ ಪರಿಷ್ಕೃತ ಸಮಯ ಇಲ್ಲಿದೆ ನೋಡಿ.
* ಬೆಳಿಗ್ಗೆ 7:25 ( ಈ ಹಿಂದೆ 05:00 ಮುಂಜಾವು) ಕ್ಕೆ ಕೊಯಮತ್ತೂರಿನಿಂದ ನಿರ್ಗಮನ
* ತಿರುಪ್ಪೂರ್ನಿಂದ ಆಗಮನ/ನಿರ್ಗಮನ: 08:03/08:05 ಮುಂಜಾನೆ (ಈ ಹಿಂದೆ 05:36/05:38 AM)
* ಈರೋಡ್ನಿಂದ ಆಗಮನ/ನಿರ್ಗಮನ: 08:42/08:45 ಬೆಳಿಗ್ಗೆ (ಈ ಹಿಂದೆ 06:17/06:20 AM)
*ಸೇಲಂಗೆ ಆಗಮನ/ನಿರ್ಗಮನ: ಬೆಳಿಗ್ಗೆ 09:32/09:35 AM (ಈ ಹಿಂದೆ 07:12/07:15 ಬೆಳಿಗ್ಗೆ)
*ಧರ್ಮಪುರಿಯಲ್ಲಿ ಆಗಮನ/ನಿರ್ಗಮನ: ಬೆಳಿಗ್ಗೆ 10:51/10:53 AM ( ಮೊದಲು 08:18/08:20 ಮುಂಜಾನೆ)
*ಹೊಸೂರಿನಲ್ಲಿ ಆಗಮನ/ನಿರ್ಗಮನ: ಮಧ್ಯಾಹ್ನ 12:03/12:05 PM (ಈ ಹಿಂದೆ 09:48/09:50 AM)
*ಬೆಂಗಳೂರು ಕಂಟೋನ್ಮೆಂಟ್ಗೆ ಆಗಮನ: 01:50 PM (ಈ ಹಿಂದೆ 11:30 AM ಎಂದಾಗಿತ್ತು).
ಬೆಂಗಳೂರಿನಿಂದ ಕೊಯಮತ್ತೂರಿಗೆ ರೈಲು ಸಂಖ್ಯೆ 20641 ರ ಪರಿಷ್ಕೃತ ಸಮಯಗಳು ಹೀಗಿವೆ:
*ಬೆಂಗಳೂರಿನಿಂದ ಮಧ್ಯಾಹ್ನ 02:20 ಕ್ಕೆ ನಿರ್ಗಮನ (ಈ ಹಿಂದೆ 01:40 PM)
*ಹೊಸೂರಿನಲ್ಲಿ ಆಗಮನ/ನಿರ್ಗಮನ: ಸಂಜೆ 03:10/03:12 PM (ಈ ಹಿಂದೆ 02:38/02:40 PM)
*ಧರ್ಮಪುರಿಗೆ ಆಗಮನ/ನಿರ್ಗಮನ: ಸಂಜೆ 04:22/04:24 PM (ಈ ಹಿಂದೆ 04:08/04:10 PM)
*ಸೇಲಂಗೆ ಆಗಮನ/ನಿರ್ಗಮನ: ಸಂಜೆಯ ಸಮಯ, 05:57/06:00 PM (ಈ ಹಿಂದೆ 05:27/05:30 PM)
*ಈರೋಡ್ಗೆ ಆಗಮನ/ನಿರ್ಗಮನ: ಇಳಿ ಸಂಜೆ 06:47/06:50 PM (ಈ ಹಿಂದೆ 06:22/06:25 PM)
*ತಿರುಪ್ಪೂರ್ಗೆ ಆಗಮನ/ನಿರ್ಗಮನ: ಸಂಜೆ 07:31/07:33 PM (ಹಿಂದೆ 07:03/07:05 PM)
*ಕೊಯಮತ್ತೂರಿಗೆ ಆಗಮನ: ರಾತ್ರಿ 08:45 PM (ಈ ಹಿಂದೆ 08:00 PM).
ಅಷ್ಟೇ ಅಲ್ಲದೆ, ದಕ್ಷಿಣ ತಮಿಳುನಾಡಿನಿಂದ ಬೆಂಗಳೂರಿಗೆ ಸಾಗುವಗೆ ಹೋಗುವ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸಲು ಹೊಸದಾಗಿ ಮಧುರೈ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ರೈಲು ಸೇವೆಯನ್ನು ಉದ್ಘಾಟಿಸುವ ನಿರೀಕ್ಷೆಯಿದೆ.
ಮಧುರೈ ಮತ್ತು ಬೆಂಗಳೂರು ನಡುವಿನ 435 ಕಿಮೀ ದೂರವನ್ನು ಕ್ರಮಿಸಲು ಸಾಮಾನ್ಯವಾಗಿ 7 ಗಂಟೆಗಳನ್ನು ತೆಗೆದುಕೊಳ್ಳುವ ಇತರ ರೈಲುಗಳಿಗಿಂತ ವೇಗವಾಗಿ ಸಾಗಲಿರುವ ಒಂದೇ ಭಾರತ್, ಕೇವಲ 5.30 ಗಂಟೆಗಳಲ್ಲಿ ತನ್ನ ಪ್ರಯಾಣವನ್ನು ಮುಗಿಸುತ್ತದೆ. ಮಧುರೈನಿಂದ ಬೆಂಗಳೂರಿಗೆ ಕಾರ್ಯಾಚರಿಸಲಿರಿವ ಈ ಭಾರತ್ ರೈಲಿನಲ್ಲಿ ಆರಂಭಿಕವಾಗಿ 16 ಕೋಚ್ ಗಳು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.