Bangalore: ನಾಸಿರ್ ಹುಸೇನ್ ನಾಲ್ಕನೇ ಆರೋಪಿಯಾಗಿ ಸೇರಿಸಬೇಕು- ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣದಲ್ಲಿ ನಾಸೀರ್ ಹುಸೇನ್ ಅವರನ್ನೂ ಆರೋಪಿಯಾಗಿ ಪರಿಗಣಿಸಬೇಕು. ತನಿಖೆ ಪೂರ್ಣ ಗೊಳ್ಳುವವರೆಗೆ ಅವರಿಗೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಬೋಧಿಸಬಾರದು ಎಂದು ರಾಜ್ಯಸಭೆ ಸಭಾಪತಿ ಆಗಿರುವ ಉಪರಾಷ್ಟ್ರಪತಿ ಅವರಿಗೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ 20 ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ನಾಳೆ ಸಾಧ್ಯತೆ
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ”ಈ ಪ್ರಕರಣದಲ್ಲಿ ನಾಸೀರ್ ಹುಸೇನ್ ಅವರನ್ನು ನಾಲ್ಕನೇ ಆರೋಪಿ ಯಾಗಿ ಎಫ್ಐಆರ್ನಲ್ಲಿ ಸೇರಿಸಬೇಕು,” ಎಂದು ಆಗ್ರಹಿಸಿದ್ದಾರೆ.