Sullia: ಬಾಡಿಗೆ ಮನೆಗೆ ಎನ್‌ಐಎ ದಾಳಿ ಪ್ರಕರಣ, ಸಮನ್ಸ್ ನೀಡಿ, ಮೊಬೈಲ್ ವಶ
Sullia: ಎನ್‌ಐಎ ತಂಡ ಇಂದು (ಮಾ.5) ರಂದು ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಮೂರಿನ ಕುಲಾಯಿತೋಡು ಎಂಬಲ್ಲಿನ ಬಾಡಿಗೆ ಮನೆಯೊಂದಕ್ಕೆ ಎನ್‌ಐಎ ತಂಡದ ಅಧಿಕಾರಿಗಳು ಬೆಳಗ್ಗೆ ದಾಳಿ ಮಾಡಿ ನಂತರ ಬೀಜು ಎಂಬಾತನಿಗೆ ಸಮನ್ಸ್ ನೀಡಿ, ಮೊಬೈಲ್ ಫೋನ್ ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.
ಇದನ್ನೂ ಓದಿ: Mangaluru Accid Attack: ಮಂಗಳೂರು ಆಸಿಡ್ ದಾಳಿ ಪ್ರಕರಣ; ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆಸ್ಪತ್ರೆಗೆ ಭೇಟಿ
ಕಲ್ಮಡ ನಿವಾಸಿ ಚಿದಾನಂದ ಎಂಬುವವರ ಬಾಡಿಗೆ ಮನೆ ಮೇಲೆ ಬೆಂಗಳೂರು ಬ್ರಾಂಚ್ ನ ಎನ್‌ಐಎ ಅಧಿಕಾರಿಗಳಾದ ಡಿವೈಎಸ್ಪಿ ರಾಜನ್ ಪಿ.ವಿ., ಸಬ್ ಇನ್ಸ್‌ಪೆಕ್ಟರ್ ಮಂಜಪ್ಪ, ಕಾನ್ಸ್‌ಟೇಬಲ್ ಸುರೇಶ್ ತಂಡ ಬೆಳ್ಳಾರೆ ಪೊಲೀಸರ ಸಹಕಾರದಲ್ಲಿ ಬೆಳಗ್ಗೆ ಆರು ಗಂಟೆಗೆ ಇಂದು ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ಳಾರೆಯ ಚಿದಾನಂದ ಎಂಬುವವರ ಬಾಡಿಗೆ ಮನೆಯಲ್ಲಿ ಎರಡು ದಿನದ ಹಿಂದೆ ಬಂದ ಕೇರಳ ರಾಜ್ಯದ ಇಡುಕ್ಕಿಯ ಬಿಜು ಅಬ್ರಾಹಂ @ಬಿಜು ಎಮ್.ಎ (45) ಎಂಬಾತ ವಾಸವಾಗಿದ್ದ. ಈ ಮನೆಗೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ನಂತರ ಬಿಜುಗೆ ಸಮನ್ಸ್ ನೀಡಿದ್ದಾರೆ. ಬಿಜು ಬಳಕೆ ಮಾಡುತ್ತಿದ್ದ ಮೊಬೈಲ್ ಫೋನ್ ಮತ್ತು ಅದರೊಳಗಿದ್ದ ಜಿಯೋ ಸಿಮ್ ಕಾರ್ಡನ್ನು ವಶಕ್ಕೆ ಪಡೆದುಕೊಡಿದ್ದಾರೆ.