Himachal Pradesh: ಬಿಎಸ್‌ಎಫ್‌ನ ಮೊದಲ ಮಹಿಳಾ ಸ್ನೈಪರ್ ಸುಮನ್ ಕುಮಾರಿ : ಇತಿಹಾಸ ನಿರ್ಮಿಸಿದ ಮಹಿಳಾ ಸಾಧಕಿ

Share the Article

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಬ್ ಇನ್‌ಸ್ಪೆಕ್ಟರ್ ಸುಮನ್ ಕುಮಾರಿ ಅವರು ಗಡಿ ಭದ್ರತಾ ಪಡೆ ಬಿಎಸ್‌ಎಫ್‌ನ ಮೊದಲ ಮಹಿಳಾ ಸ್ನೈಪರ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಇದನ್ನೂ ಓದಿ: Gruhalakshmi scheme: ರಾಜ್ಯದ ‘ಗೃಹಲಕ್ಷ್ಮೀ ಯೋಜನೆ’ಗೆ ಮತ್ತೆ ಬಂತು 4 ಹೊಸ ರೂಲ್ಸ್ !!

ಇಂದೋರ್‌ನಲ್ಲಿರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ ಆ್ಯಂಡ್ ಟ್ಯಾಕ್ಟಿಕ್ಸ್‌ನಲ್ಲಿ 8 ವಾರಗಳ ಕಾಲ ಸೈಪರ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಇವರು 56 ಪುರುಷ ಸಹವರ್ತಿಗಳ ಜತೆಗಿದ್ದ ಏಕೈಕ ಮಹಿಳೆಯಾಗಿದ್ದಾರೆ.

ಪಂಜಾಬ್‌ನಲ್ಲಿ ಕಮಾಂಡರ್ ಪ್ಲಟೂನ್ ಆಗಿದ್ದ ಸಂದರ್ಭದಲ್ಲಿ ಸೈಪರ್ ದಾಳಿಯ ಬೆದರಿಕೆಯ ಅನುಭವದಿಂದ ಹೆಚ್ಚು ಪ್ರೇರಿತರಾದ ಸುಮನ್ ಅವರು ಸ್ನೈಪರ್ ಆಗಲು ನಿರ್ಧರಿಸಿದರು.

ಇಂದಿನ ದಿನಮಾನದಲ್ಲಿ ಮಹಿಳೆಯರು ಎಲ್ಲೆಡೆ ಕ್ಷಿಪ್ರ ಪ್ರಗತಿ ಸಾಧಿಸುತ್ತಿದ್ದಾರೆ. ಈ ಪ್ರಯುಕ್ತ ಒಂದು ಹೆಜ್ಜೆಯಾಗಿ ಕಠಿಣ ತರಬೇತಿ ನಂತರ ಮೊದಲ ಮಹಿಳಾ ಸೈಪರ್ ಆಗಿರುವುದಾಗಿ ಬಿಎಸ್‌ಎಫ್‌ ತನ್ನ ಎಕ್ಸ್‌ ಪೋಸ್ಟ್ ನಲ್ಲಿ ತಿಳಿಸಿದೆ.

Leave A Reply