K S Eshwarappa: ಸದ್ಯದಲ್ಲೇ ಈ ಎರಡು ದೇವಾಲಯಗಳು ಮಸೀದಿ ಮುಕ್ತ ಆಗಲಿದೆ – ಬಿಜೆಪಿ ನಾಯಕ ಈಶ್ವರಪ್ಪ ಅಚ್ಚರಿ ಸ್ಟೇಟ್ಮೆಂಟ್!!
K S Eshwarappa: ದೇಶದಲ್ಲಿ ಹಿಂದೂ ದೇಗುಲಗಳನ್ನು ಮುಸ್ಲಿಂ ಮಸೀದಿಗಳು ಆಕ್ರಮಿಸಿವೆ ಎಂಬ ವಿಚಾರ ಅಂತೂ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಕೆಲವು ಪ್ರಮುಖ ದೇವಾಲಯಗಳನ್ನು ಮರಳಿ ಪಡೆಯುವ ಯತ್ನವೂ ನಡೆಯುತ್ತಿದೆ. ಈ ಬೆನ್ನಲ್ಲೇ ಬಿಜೆಪಿ ನಾಯಕ ಈಶ್ವರಪ್ಪನವರು(KS Eshwarappa)ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.
ಇದನ್ನೂ ಓದಿ: Nejaru Case: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ; ಆರೋಪಿ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್
ಹೌದು, ದೇಶದಲ್ಲಿ ಮಸೀದಿ-ಮಂದಿರ ವಿಚಾರ ಕುರಿತು ಭಾರೀ ಚರ್ಚೆಗಳು ನಡೆಯುವಾಗ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಮುಂದೆ ಇನ್ನೂ ಎರಡು ಪುಣ್ಯ ಕ್ಷೇತ್ರವನ್ನು ಮಸೀದಿ ಮುಕ್ತ ಮಾಡಲಿದ್ದೇವೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ದೇಶದಲ್ಲಿ ಹಿಂದುಗಳ ಅವಿರತ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಅದೇ ಮಥುರಾ, ಕಾಶಿಯನ್ನು ಮಸೀದಿಯಿಂದ ಮುಕ್ತಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.