Dakshina Kannada: ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ- ಕೇರಳದಲ್ಲಿ ಜೋಡಿ ಪತ್ತೆ

Share the Article

Moodabidre: ಮೂಡುಬಿದಿರೆಯ ಆಳ್ವಾಸ್‌ ವಿದ್ಯಾರ್ಥಿನಿ ಅದಿರಾ ನಾಪತ್ತೆ ಪ್ರಕರಣ ಕುರಿತು ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ತಾನು ಪ್ರೀತಿಸುತ್ತಿದ್ದ ಯುವಕನನ್ನು ಕೇರಳಕ್ಕೆ ತೆರಳಿ ವಿವಾಹವಾಗಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: Deadly Accident: ಸ್ಟೇಜ್‌ ಶೋಗೆಂದು ಹೋಗುವಾಗ ಭೀಕರ ರಸ್ತೆ ಅಪಘಾತ; ಭೋಜ್‌ಪುರಿ ಗಾಯಕ ಸೇರಿ 9 ಮಂದಿ ಸಾವು

ಮೂಡುಬಿದಿರೆಯ ಆಳ್ವಾಸ್‌ ವಿದ್ಯಾ ಸಂಸ್ಥೆಯ ಬಿ.ಪಿ.ಟಿ. ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರುವ 19 ವರ್ಷದ ಅದಿರಾ, ಉಡುಪಿ ಜಿಲ್ಲೆಯ ಕೊಲ್ಲೂರಿನವಳು. ವಿದ್ಯಾಗಿರಿಯಲ್ಲಿರುವ ಶಾಂಭವಿ ಹಾಸ್ಟೆಲ್‌ನ ಸಿ.ವಿಭಾಗದಲ್ಲಿ ವಾಸವಿದ್ದಳು. ಫೆ.23 ರಿಂದ ನಾಪತ್ತೆಯಾಗಿದ್ದಳು ಈಕೆ. ಈ ಪ್ರಕರಣದ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಫೆ.23ರ ಶುಕ್ರವಾರ ಬೆಳಿಗ್ಗೆ 7.45 ಕ್ಕೆ ಹಾಸ್ಟೆಲ್‌ನಿಂದ ಆಳ್ವಾಸ್‌ ಬಸ್‌ನಲ್ಲಿ ಬಂದಿದ್ದು, ನಂತರ ಮೂಡುಬಿದಿರೆ ಕನ್ನಡಭವನದ ಬಳಿ ಇಳಿದು ಹೋದ ಈಕೆ ಕಾಲೇಜಿಗೆ ಹೋಗದೆ, ಹಾಸ್ಟೆಲ್‌, ಮನೆಗೂ ಹೋಗದೆ ದಿಢೀರ್‌ ನಾಪತ್ತೆಯಾಗಿದ್ದಳು. ಇದೀಗ ಕೇರಳಕ್ಕೆ ತೆರಳಿ ತನ್ನ ಪ್ರಿಯಕರನನ್ನು ಮದುವೆಯಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

Leave A Reply

Your email address will not be published.