Home Breaking Entertainment News Kannada Mahesh babu: ನಟ ಮಹೇಶ್ ಬಾಬು ತಲೆಯಲ್ಲಿ ಕೂದಲಿಲ್ವಾ? ಅರೆ, ಅವರು ವಿಗ್ ಬಳಸ್ತಾರಾ? ಇಲ್ಲಿದೆ...

Mahesh babu: ನಟ ಮಹೇಶ್ ಬಾಬು ತಲೆಯಲ್ಲಿ ಕೂದಲಿಲ್ವಾ? ಅರೆ, ಅವರು ವಿಗ್ ಬಳಸ್ತಾರಾ? ಇಲ್ಲಿದೆ ನೋಡಿ ಮೇಕಪ್ ಮ್ಯಾನ್ ಬಿಚ್ಚಿಟ್ಟ ಅಸಲಿ ಸತ್ಯ

Mahesh Babu

Hindu neighbor gifts plot of land

Hindu neighbour gifts land to Muslim journalist

Mahesh babu: ಅನೇಕರು ಸಿನಿ ನಟ-ನಟಿಯರನ್ನು ಪ್ರತಿ ವಿಷಯದಲ್ಲೂ ರೋಲ್ ಮಾಡೆಲ್ ಆಗಿ ಇಟ್ಟುಕೊಂಡಿರುತ್ತಾರೆ. ಅವರು ಹಾಕೋ ಬಟ್ಟೆ, ಅವರ ಸೈಲ್, ಕೇಶ ವಿನ್ಯಾಸ ಎಲ್ಲವನ್ನೂ ಅನುಸರಿಸುತ್ತಾರೆ. ಇದು ಅವರಿಗೆ ಏನೋ ಒಂದು ಕ್ರೇಜ್.

ಇದನ್ನೂ ಓದಿ: Shobha Karandlaje: ಗೋ ಬ್ಯಾಕ್‌ ಶೋಭಾ ಕರಂದ್ಲಾಜೆ ಪೋಸ್ಟರ್‌ ಅಭಿಯಾನ; ಯುವಕರ ವಿರುದ್ಧ FIR

ಇನ್ನು ಕೆಲವರಿಗೆ ಸಿನಿತಾರೆಯ ಕೆಲವು ವಿಚಾರಗಳ ಬಗ್ಗೆ ಭಾರೀ ಕುತೂಹಲ. ಅವರ ಉಡುಪು ಎಷ್ಟು ಕಾಸ್ಟ್ಲಿಯದ್ದು, ಎಲ್ಲಿ ತರುತ್ತಾರೆ, ಅವರ ಡ್ರೆಸ್ ಡಿಸೈನ್ ಹೇಗಿರುತ್ತೆ, ಅದೆಲ್ಲದೂ ಅಸಲಿಯೋ, ನಖಲಿಯೋ ? ಎಂದೆಲ್ಲಾ ವಿಚಾರ ಮಾಡುತ್ತಾರೆ. ಅಂತೆಯೇ ಇದೀಗ ದಕ್ಷಿಣ ಭಾರತದ ಟಾಲಿವುಡ್ ನಟ ಮಹೇಶ್ ಬಾಬು(Mahesh babu) ಅವರ ತಲೆ ಕೂದಲ ಬಗ್ಗೆ ಚರ್ಚೆ ಶುರುವಾಗಿದ್ದು, ಅವರು ವಿಗ್ ಧರಿಸುತ್ತಾರಾ ಎಂಬ ಪ್ರಶ್ನೆ ಹುಟ್ಟಿದೆ. ಈ ಕುರಿತು ಸ್ವತಃ ಅವರ ಮೇಕಪ್ ಮ್ಯಾನ್ ಅವರೇ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.

ಮಹೇಶ್ ಬಾಬು ಅವರ ಮೇಕಪ್ ಮ್ಯಾನ್ ಮಾಧವರಾವ್ ಅವರಿಗೆ ಸಂದರ್ಶನವೊಂದರಲ್ಲಿ ಮಹೇಶ್ ಬಾಬು ಅವರು ವಿಗ್ ಬಳಸುತ್ತಾರಾ? ಎಂಬ ಪ್ರಶ್ನೆ ಎದುರಾಗಿದೆ. ಆಗ ಅವರು ಮಹೇಶ್ ಬಾಬು ಯಾವಾಗಲು ವಿಗ್ ಬಳಸುತ್ತಾರೆ. ವಿಗ್ ಇಲ್ಲದೆ ನಟಿಸುವುದಿಲ್ಲ. ಮಹೇಶ್ ಬಾಬು ಅವರು ತುಂಬಾ ತೆಳುವಾದ ಕೂದಲು ಹೊಂದಿರುವುದರಿಂದ ವಿಗ್ ಬಳಸುತ್ತಾರೆ ಎಂದು ಅಚ್ಚರಿ ಸತ್ಯವೊಂದನ್ನು ಹೊರಹಾಕಿದ್ದಾರೆ.

ಅಲ್ಲದೆ ಆರಂಭದಲ್ಲಿ ಕೆಲವು ಸಿನಿಮಾಗಳಲ್ಲಿ ಮಹೇಶ್ ಬಾಬು ಕೂಡ ಒರಿಜಿನಲ್ ಕೂದಲಿನಲ್ಲಿ ನಟಿಸಿದ್ದಾರೆ. ಕೂದಲು ಕಡಿಮೆಯಾದಂತೆ ವಿಗ್ ಬಳಸಲು ಶುರು ಮಾಡಿದರು. ತಿಂಗಳಿಗೊಮ್ಮೆ ವಿಗ್ ಹಾಕಿಕೊಳ್ಳುವುದು ಕಷ್ಟ ಎಂದು ತಿಳಿದು ತಲೆಗೂದಲು ಕಸಿ ಕೂಡ ಮಾಡಿಸಿಕೊಂಡಿದ್ದಾರಂತೆ. ಸುಧಾರಿತ ಕೂದಲು ಕಸಿ ಹೊಂದಿರುವ ಹೇರ್ ಪ್ಯಾಚ್ ತಂತ್ರಜ್ಞಾನವನ್ನು ಬಳಸಲಾಗಿದೆ. ಬಳಿಕ ಮಹೇಶ್ ತಲೆಯಲ್ಲಿ ಕೂದಲು ಬೆಳೆದಿದೆ ಎಂದು ವರದಿಯಾಗಿದೆ.