Viral Video: ಅರೇಬಿಕ್‌ ಬರಹದ ಉಡುಪು ಧರಿಸಿದ ಮಹಿಳೆ: ಆಕ್ರೋಶಗೊಂಡ ಜನಸಮೂಹ

Share the Article

lahore: ಮಹಿಳೆಯೋರ್ವರು ಅರೇಬಿಕ್‌ ಬರಹದ ಉಡುಪೊಂದನ್ನು ಧರಿಸಿ ಬಂದಿದ್ದಕ್ಕೆ ಗುಂಪೊಂದು ತರಾಟೆ ತಗೊಂಡಿರುವ ಘಟನೆಯೊಂದು ನಡೆದಿದ್ದು, ಈ ಘಟನೆಯ ವೀಡಿಯೋ ವೈರಲ್‌ ಆಗಿದೆ.

ಈ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ. ಮಹಿಳೆಯೋರ್ವರು ಅರೇಬಿಕ್‌ ಭಾಷೆಯ ಮುದ್ರಣದ ಬರಹವಿರುವ ಉಡುಪನ್ನು ಧರಿಸಿಕೊಂಡಿದ್ದು ತನ್ನ ಪತಿಯೊಂದಿಗೆ ಶಾಪಿಂಗ್‌ ಮಾಲ್‌ಗೆ ಬಂದಿದ್ದು, ರೆಸ್ಟೋರೆಂಟ್‌ ನಲ್ಲಿ ಕೂತಿದ್ದ ವೇಳೆ ಗುಂಪು ಬಂದು ಮಹಿಳೆಯನ್ನು ಕಂಡು ತರಾಟೆಗೆ ತೆಗೆದುಕೊಂಡಿದೆ.

ನಿಮ್ಮ ಬಟ್ಟೆಯಲ್ಲಿ ಕುರಾನ್‌ ಶ್ಲೋಕವಿದ್ದು, ಇದನ್ನು ಧರಿಸಿ ಸಮುದಾಯವನ್ನು ಅವಮಾನ ಮಾಡುತ್ತಿದ್ದೀರಿ ಎಂಂದು ಹೇಳಿದ್ದು, ನಂತರ ಅಲ್ಲಿ ನೆರೆದಿದ್ದ ಗುಂಪು ಆಕೆ ಧರಿಸಿದ್ದ ಅಂಗಿಯನ್ನು ತೆಗೆಯುವಂತೆ ಆಗ್ರಹ ಮಾಡಿರುವುದಾಗಿ ವರದಿಯಾಗಿದೆ.

ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮಹಿಳಾ ಎಎಸ್ಪಿ ಸೈಯದಾ ಶೆಹರ್ಬಾನೊ ನಖ್ವಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ ನಂತರ ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಅರೇಬಿಕ್‌ ಪದಗಳಿದ್ದು, ಯಾವುದೇ ಕುರಾನ್‌ ಶ್ಲೋಕವಿಲ್ಲ ಎಂದು ಮಹಿಳೆಯು ಹೇಳಿದ್ದಾರೆ. ಈ ಸಂಬಂಧ ವೀಡಿಯೋ ವೈರಲ್‌ ಆಗಿದೆ.

 

Leave A Reply

Your email address will not be published.