Education: ಪಿಯುಸಿ ಮುಗಿದಿದೆಯೆ? ಮುಂದೇನು ಮಾಡುವುದು ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ!!
ಬಹುತೇಕ ವಿದ್ಯಾರ್ಥಿಗಳಲ್ಲಿ ಒಂದು ಗೊಂದಲವಿರುತ್ತದೆ. ಎಸೆಸೆಲ್ಸಿ ಅಥವಾ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದೇನು ಮಾಡುವುದು.ಯಾವ ಕೋರ್ಸ್ ಓದಿದರೆ ಹೆಚ್ಚು ಉಪಯುಕ್ತ ಎಂಬುದನ್ನ ಯೋಚಿಸುವಾಗ ಗೊಂದಲಕ್ಕೆ ಈಡಾಗುತ್ತಾರೆ.
ಇದನ್ನೂ ಓದಿ: Shringeri: ಸಾಲ ಹಿಂದಿರುಗಿಸುವಂತೆ ಧರ್ಮಸ್ಥಳ ಸಂಘದವರಿಂದ ಹಲ್ಲೆ ಆರೋಪ- ನೇಣುಬಿಗಿದು 29ರ ಮಹಿಳೆ ಆತ್ಮಹತ್ಯೆ!!
ಕೆಲ ವರ್ಷಗಳ ಹಿಂದೆ ಪರೀಕ್ಷೆಯಲ್ಲಿ ಒಳ್ಳೆ ಅಂಕಗಳನ್ನು ಪಡೆದವರು ಪಿಯುಸಿ ಯಲ್ಲಿ ವಿಜ್ಞಾನವನ್ನು ಕಡಿಮೆ ಅಂಕ ಮತ್ತು ಜಸ್ಟ್ ಪಾಸ್ ಆದವರು ವಾಣಿಜ್ಯ ಮತ್ತು ಕಲಾ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಅತ್ಯುನ್ನತ ಹಾಗೂ ಹೆಚ್ಚು ಮಾನ್ಯತೆ ಹೊಂದಿರುವ ವೃತ್ತಿಪರ ಕೋರ್ಸ್ಗಳು ಲಭ್ಯವಿವೆ. ಪಿಯುಸಿ ಯು ನಾವು ನಮ್ಮ ಜೀವನ ಸರಿಯಾದ ಆಯ್ಕೆ ಮಾಡಿಕೊಳ್ಳಲು ಒಳ್ಳೆಯ ಹಂತವಾಗಿದೆ.
ಹೇಗೂ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ತಮ್ಮ ಜೀವನದ ಭದ್ರತೆಗೆ ಯಾವ ಕೋರ್ಸ್ ಓದಬೇಕು ಎಂದು ಗೊಂದಲಕ್ಕೆ ಈಡಾಗುತ್ತಾರೆ. ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲಿ ಓದಿದವರು ಒಳ್ಳೆಯ ಹುದ್ದೆಯನ್ನು ಪಡೆಯಬಹುದಾಗಿದೆ.
ಕಲಾ ವಿಷಯದಲ್ಲಿ ಪಿಯುಸಿ ಮುಗಿಸಿದರೆ, ಈ ಕೋರ್ಸ್‌ಗಳನ್ನು ಓದಬಹುದು.
ಈ ಕೋರ್ಸ್ ಅಲ್ಲಿ ನೀವು ಪದವಿಯಲ್ಲಿ ವೆಬ್ ಡಿಸೈನರ್, ಅನಿಮೇಶನ್, ಜಾಹೀರಾತು, ರೇಡಿಯೋ ಪತ್ರಿಕೋದ್ಯಮ, ಮುದ್ರಣ ಮಾಧ್ಯಮ, ವಿದ್ಯುತ್ಮಾನ ಮಾಧ್ಯಮ, ಗ್ರಾಫಾಲಜಿ, ಫ್ಯಾಶನ್ ಡಿಸೈನಿಂಗ್, , ಪ್ರಾಡಕ್ಟ್ ಡಿಸೈನ್, ಶೂ ಡಿಸೈನ್, ಎಥ್ನೋಗ್ರಫಿ, ಡಿಪ್ರೆಶನ್ ಕೌನ್ಸೆಲಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್ ಬೇಕರಿ ಮತ್ತು ಸ್ವೀಟ್ಸ್, ಲೆದರ್ ಡಿಸೈನಿಂಗ್ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಹೊರತುಪಡಿಸಿ ಕಾನೂನು ಕಾಲೇಜುಗಳಲ್ಲಿ ಕಾನೂನು ಪದವಿಗಳನ್ನು ಮಾಡಬಹುದು. ಅವುಗಳಲ್ಲಿ ವಿವಿಧ ಬಗೆಯ ಕೋರ್ಸ್ ಗಳು ಲಭ್ಯವಿವೆ.
ವಿಜ್ಞಾನ ದಲ್ಲಿ ಪಿಯುಸಿ ಮುಗಿಸಿದರೆ
ನೀವು ಏರೋಸ್ಪೇಸ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್, ಸಿವಿಲ್ ಎಜಿನಿಯರಿಂಗ್, ಜೆನೆಟಿಕ್ ಇಂಜನಿಯರ್, ಬಯೋಮೆಡಿಕಲ್ ವೃತ್ತಿಗಳು, ಎಂಬಿಬಿಎಸ್, ಆರ್ಕಿಟೆಕ್ಚರ್, ಏವಿಯೇಷನ್‌ನಲ್ಲಿ ಸೌಂಡ್ ಇಂಜಿನಿಯರಿಂಗ್, ಓಸಿಯೋನೋಗ್ರಫಿ, ಬಯೋಕೆಮಿಸ್ಟ್ರಿ, ಗಳನ್ನು ಓದಬಹುದು.
ವಾಣಿಜ್ಯ ವಿಷಯ ಮುಗಿಸಿದ್ದರೆ,
ಬಿಬಿಎ, ಬಿಕಾಂ, ಬಿಎ ಅರ್ಥಶಾಸ್ತ್ರ, ಎಂಬಿಎ ಮತ್ತು ಪಿಜಿಡಿಎಂ ತರಹದ ಕೋರ್ಸುಗಳನ್ನು ಮಾಡಬಹುದು. , ಕಂಪನಿ ಸೆಕ್ರೆಟರಿ, ಮ್ಯಾನೇಜ್‌ಮೆಂಟ್ ಅಕೌಂಟೆಂಟ್, ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ ಚಾರ್ಟರ್ಡ್ ಅಕೌಂಟೆಂಟ್ ಸರ್ಟಿಫೈಡ್, ಡಿಜಿಟಲ್ ಮಾರ್ಕೆಟರ್ ಪ್ರಾಡಕ್ಟ್ ಮ್ಯಾನೇಜರ್ ಕೆಲ ಬ್ಯಾಂಕು ಗಳಲ್ಲಿ ಸಹ ಕೆಲಸ ಮಾಡಬಹುದು.