BPL Card ಹೊಂದಿದವರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ – ನಿಮಗಾಗಿ ಬಂದಿದೆ ಹೊಸ ಯೋಜನೆ
BPL Card ಹೊಂದಿರುವ ಕುಟುಂಬದವರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಆರೋಗ್ಯ ಸೇವೆ ವಿಚಾರವಾಗಿ ಮಹತ್ವದ ಘೋಷಣೆ ಮಾಡಿದೆ
ಇದನ್ನೂ ಓದಿ: Dr Manjunath: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ – ಡಾ. ಮಂಜುನಾಥ್ ಕೊಟ್ರು ಬಿಗ್ ಅಪ್ಡೇಟ್
ಹೌದು, ಕರ್ನಾಟಕದಲ್ಲಿ 2018 ರಲ್ಲಿ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆ ಸಂಯೋಜಿಸಿ ಆಯುಷ್ಮಾನ್ ಭಾರತ (Ayushman Bharat) ಆರೋಗ್ಯ ಕರ್ನಾಟಕ ಎಂಬ ಯೋಜನೆ ಜಾರಿಗೆ ಮಾಡಿದೆ. ಆಯುಷ್ಮಾನ್ ಯೋಜನೆ (Ayushman Yojana) ಯ ಮೂಲಕ ಬಡವರಿಗೆ ಉತ್ತಮ ಉಚಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಮುಂದಾಗಿದೆ.
ಎಷ್ಟು ಸೌಲಭ್ಯ ಸಿಗುತ್ತದೆ.
ಈ ಕಾರ್ಡ್ ಮೂಲಕ ಒಂದು ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಲಭ್ಯವಿದ್ದು ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಇರುತ್ತದೆ. ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್ (Ration Card) ಮತ್ತು ಆಧಾರ್ ಕಾರ್ಡ್ (Aadhaar Card) ಅನ್ನು ನೀಡುವುದು ಕಡ್ಡಾಯವಾಗಿದೆ. ಬಿಪಿಎಲ್ ಕಾರ್ಡ್ (BPL Card) ಅನ್ನು ಹೊಂದಿರುವವರು ಈ ಅವಕಾಶವನ್ನು ಪಡೆಯಲು ಅರ್ಹರಾಗಿದ್ದು 1.5 ಲಕ್ಷ ರೂಪಾಯಿಯ ವರೆಗೆ ಚಿಕಿತ್ಸೆ ಪಡೆದುಕೊಳ್ಳಲು ನಿಮಗೆ ಅವಕಾಶ ಇದೆ.
ಎಲ್ಲಿ ಈ ಕಾರ್ಡ್ ದೊರೆಯುತ್ತದೆ?
ಅಂಡ್ರಾಯ್ಡ್ ಮೊಬೈಲ್‍ಗಳ ಮೂಲಕ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಆಯುಷ್ಮಾನ್ ಭಾರತ್ ಕಾರ್ಡ್‍ಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕವೂ ಕಾರ್ಡ್‍ಗಳನ್ನು ಮಾಡಿಕೊಡಲಾಗುತ್ತದೆ.
ಅರ್ಜಿ ಹಾಕುವುದು ಹೇಗೆ?
ಕಾರ್ಡ್‍ಗಳನ್ನು ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್‍ನೊಂದಿಗೆ ತಮ್ಮ ಮೊಬೈಲ್‍ನಲ್ಲಿಯೇ (ಆಂಡ್ರಾಯ್ಡ್ ಮೊಬೈಲ್) ನೋಂದಣಿ ಮೂಲಕ ಕಾರ್ಡ್‍ಗಳನ್ನು ಪಡೆಯಬಹುದು. ಜನರು ಮೊಬೈಲ್‌ನಲ್ಲಿ http://beneficiary.nha.gov.in ಎಂದು ಟೈಪ್ ಮಾಡಿದ ನಂತರ ಪಿ.ಎಮ್.ಜೆ.ವೈ ಬೆನಿಫಿಸಿರಿ ಪೋರ್ಟಲ್ ಕಂಡು ಬರುತ್ತದೆ.
ಪೋರ್ಟಲ್ ಅನ್ನು ತೆರೆದಾಗ ಲಾಗಿನ್ ಆಸ್ ಎಂದು ಮಾಹಿತಿ ಕೇಳುವ ಹಂತದಲ್ಲಿ ಬೆನ್‍ಫಿಸಿರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮುಖಾಂತರ ಲಾಗಿನ್ ಮಾಡಿಕೊಳ್ಳಬೇಕು. ಒಟಿಪಿ ನೋಂದಾಯಿಸಿ ಸಬ್‍ಮಿಟ್ ಮಾಡಿದ ನಂತರ ಪಿ.ಎಮ್.ಜೆ.ವೈ ಪೊರ್ಟಲ್ ಒಪನ್ ಆಗುತ್ತದೆ. ಇಲ್ಲಿ ಸಾರ್ವಜನಿಕರು ತಮ್ಮ ರಾಜ್ಯ ಎಂಬಲ್ಲಿ ಕರ್ನಾಟಕ, ಜಿಲ್ಲೆ ವಿವರಗಳನ್ನು ಭರ್ತಿ ಮಾಡಿ ಕ್ಲೈಮ್‍ಟೈಪ್ ಎನ್ನುವಲ್ಲಿ ಕುಟುಂಬ ಎಂದು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಬೇಕು.
ಏನೇನು ದಾಖಲೆ ಬೇಕು ?
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಪಾನ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಇಷ್ಟೇ ಅಲ್ಲದೆ ಅತೀ ಮುಖ್ಯವಾಗಿ ಆಯುಷ್ಮಾನ್ ಭವಃ ಕಾರ್ಡ್ ಪಡೆಯಲು ಪ್ರತಿ ಕುಟುಂಬವು ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ತಪ್ಪದೇ ಹೊಂದಿರಬೇಕು. ರೇಷನ್ ಕಾರ್ಡ್‍ಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು.