HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಮೊದಲು ತಕ್ಷಣ ಈ ಸುದ್ದಿ ನೋಡಿ !!
HSRP ನಂಬರ್ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. ಆದರೆ ನಂಬರ್ ಪ್ಲೇಟ್ ಗೆ ಅಪ್ಲಿಕೇಶನ್ ಹಾಕುವ ಮೊದಲು ಈ ಸ್ಟೋರಿ ತಪ್ಪದೇ ಓದಿ.
ಇದನ್ನೂ ಓದಿ: BJP: ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್ ಆಗಿ ಪುತ್ತೂರು ಮೂಲದ ಅಕ್ಷಯ್ ದಂಬೆಕಾನ!!
ಅದೇನೆಂದರೆ HSRP ನಂಬರ್ ಪ್ಲೇಟ್ ಅಳವಡಿಕೆ ದುರುಪಯೋಗಪಡಿಸಿಕೊಳ್ಳಲು ಹಲವು ಸೈಬರ್ ವಂಚಕರು ಮುಂದಾಗಿದ್ದು ನಕಲಿ ಕ್ಯೂ ಆರ್ ಕೋಡ್ ಗಳ ಮೂಲಕ ಗ್ರಾಹಕರ ಸಂಪೂರ್ಣ ಹಣವನ್ನು ಲಪಟಾಯಿಸಲು ಕಾದು ಕುಳಿತಿದ್ದಾರೆ.
ಹೌದು, ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ಭಾರೀ ವಂಚನೆ ನಡೆಯುತ್ತಿದೆ. ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್ಗಳನ್ನು ನಕಲಿ ಮಾಡಲಾಗುತ್ತಿದ್ದು ಜನರು ಆ ನಕಲಿ ಕ್ಯೂ ಆರ್ ಕೋಡ್ಗಳನ್ನು ಟಚ್ ಮಾಡಿದರೆ ಸಾಕು ಖದೀಮರ ಖಾತೆಗೆ ಸಂಪೂರ್ಣ ಹಣ ವರ್ಗಾವಣೆಯಾಗುತ್ತೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನು ಆನ್‌ಲೈನ್ ವಂಚಕರಿಗೆ ಖುದ್ದು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಂಬರ್ ಪ್ಲೇಟ್ ವಿಚಾರದಲ್ಲಿ ವಂಚನೆಗಳು ಬೆಳಕಿಗೆ ಬಂದರೆ ಕಠಿಣ ಕ್ರಮ ಗ್ಯಾರಂಟಿ ಎಂದಿದ್ದಾರೆ. ಹೀಗಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬುಕ್ ಮಾಡುವ ಮುನ್ನ ಎಚ್ಚರ ಇರಲಿ.
ಇನ್ನುಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ದ್ವಿಚಕ್ರ ವಾಹನಗಳಿಗೆ ನಂಬರ್ ಪ್ಲೇಟ್ ದರ 400 ರೂನಿಂದ 600 ರೂ ವರೆಗೆ ಇದೆ. ಅದೇ ರೀತಿ ನಾಲ್ಕು ಚಕ್ರದ ವಾಹನಗಳಿಗೆ ಜೋಡಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಶುಲ್ಕವು 650 ರೂಪಾಯಿನಿಂದ 800 ರೂಪಾಯಿ ವರೆಗೂ ಇರಲಿದೆ. ಹೀಗಾಗಿ ವಾಹನ ಸವಾರರು ಮೋಸ ಹೋಗದೆ ಎಚ್ಚರ ವಹಿಸಬೇಕಾಗಿದೆ.
l01z6s