Bengaluru: ಜೈಲಿನಿಂದಲೇ ಯುವತಿಗೆ ಬಂತು ಬೆತ್ತಲೆ ಫೋಟೋ, ರೌಡಿ ಶೀಟರ್ ನಿಂದ ಬ್ಲಾಕ್ಮೇಲ್ !!
Bengaluru: ಹುಡುಗಿಯರು ತೋರುವ ನಿಸ್ವಾರ್ಥ ಸ್ನೇಹ, ಪ್ರೀತಿಯನ್ನ ರೌಡಿ ಶೀಟರ್ಗಳು (Rowdy Sheeter) ದುರುಪಯೋಗ ಪಡಿಸಿಕೊಂಡು ಅವರ ಬದುಕಿನಲ್ಲಿ ಆಟ ಆಡುವವರು ಸಾಕಷ್ಟು ಇದ್ದಾರೆ. ಅಂತದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಜೈಲಲ್ಲಿರೋ ರೌಡಿ ಶೀಟರ್ ಒಬ್ಬ ಯುವತಿಗೆ ಬೆತ್ತಲೆ ಪೋಟೋ ಕಳಿಸಿ 5 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದಾನೆ.
ಇದನ್ನೂ ಓದಿ: Central government : ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 4ರಷ್ಟು ಏರಿಕೆ- ಈ ತಿಂಗಳಿಂದಲೇ ಜಾರಿ !!
ಹೌದು, ಪರಪ್ಪನ ಅಗ್ರಹಾರ ಕಾರಾಗೃಹದಿಂದಲೇ ಪರಿಚಯಸ್ಥ ಮಹಿಳೆಗೆ ಜೈಲಿನಲ್ಲಿದ್ದುಕೊಂಡೇ (Bengaluru Jail) ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ರೌಡಿ ಮನೋಜ್ ಅಲಿಯಾಸ್ ಕೆಂಚ ಹಾಗೂ ಆತನ ಸಹಚರ ಕಾರ್ತಿಕ್ ಈ ಕೃತ್ಯ ಎಸಗಿದ್ದು, ಬೆತ್ತಲೆ ಫೋಟೊ ಇಟ್ಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಸದ್ಯ ಸಂತ್ರಸ್ತೆ ದೂರು ಆಧರಿಸಿ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದಹಾಗೆ ಕಳೆದ ಆಗಸ್ಟ್ನಲ್ಲಿ ಈ ರೌಡಿ ಮನೋಜ್ ಮತ್ತವನ ಗ್ಯಾಂಗ್ ಯುವತಿಯ ತಾಯಿಗೆ ಫೋಟೊ ಕಳಿಸಿ ಹಣ ಕಿತ್ತಿತ್ತು. ʼಹಣ ಕೊಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೊ ನಿನ್ನ ಅಳಿಯನಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದ. ಹೀಗೆ ಫೋಟೊ ತೋರಿಸಿ ತಾಯಿಯಿಂದ 40 ಸಾವಿರ ಹಣ ಕಿತ್ತಿದ್ದ. ಇದಾದ ಬಳಿಕ ಫೆಬ್ರವರಿ 9ರಂದು ಮತ್ತೆ ಮನು ಸಹಚರ ರೌಡಿ ಕಾರ್ತಿಕ್ ಎಂಬಾತ ತಾಯಿಗೆ ಮತ್ತೆ ವಾಟ್ಸ್ಯಾಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಮನು ಕಡೆಯ ಹುಡುಗ ನಾನು. 5 ಲಕ್ಷ ರೂ. ಹಣ ಕೊಡದಿದ್ದರೆ ಫೋಟೊವನ್ನು ನಿನ್ನ ಅಳಿಯನಿಗೆ ಕಳಿಸ್ತೀನಿ ಎಂದು ಅವಾಜ್ ಹಾಕಿದ್ದಾನೆ.
ಅಲ್ಲದೆ ಫೆಬ್ರವರಿ 12 ರಂದು ಮತ್ತೆ ವಾಟ್ಸಪ್, ಫೇಸ್ಬುಕ್ ಮೆಸೆಂಜರ್ಗಳಲ್ಲಿ ಕಾಲ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ ಹಾಗೂ ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಆ್ಯಕ್ಟ್ 67, ಐಪಿಸಿ ಸೆಕ್ಷನ್ 34, 384ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಟೌನ್ ಪೊಲೀಸರು ಮತ್ತೊಬ್ಬ ಆರೋಪಿ ಕಾರ್ತಿಕ್ ಪತ್ತೆಗೆ ಬಲೆ ಬೀಸಿದ್ದಾರೆ.